
ಶ್ರೀನಗರ(ಏ.01): ಯುವತಿಯೊಬ್ಬಳನ್ನು ಹೊಟೇಲ್ ಗೆ ಕರೆದುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೇಜರ್ ಲೀಟುಲ್ ಗೊಗೊಯ್ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಮೇಜರ್ ಲೀಟುಲ್ ಗೊಗೊಯ್ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಪೂರ್ಣಗೊಳಿಸಿರುವ ಸೇನಾ ನ್ಯಾಯಾಲಯ, ಸೇವಾ ಹಿರಿತನವನ್ನು ಕಡಿತಗೊಳಿಸುವ ಶಿಕ್ಷೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಲೀಟುಲ್ ಗೊಗೊಯ್ ಯುವತಿಯೊಂದಿಗೆ ಹೋಟೆಲ್ ಹೋಗಿದ್ದು ಸಾಬೀತಾಗಿದ್ದು, ಇಂತಹ ವರ್ತನೆಯನ್ನು ಸೇನೆ ಸಹಿಸುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದೆ.
ಇದೇ ವೇಳೇ ಕರ್ತವ್ಯದ ವೇಳೆ ಯುನಿಟ್‌ನಲ್ಲಿ ಗೈರಾಗಿದ್ದ ಮೇಜರ್ ಗೊಗೋಯ್ ಅವರ ವಾಹನ ಚಾಲಕ ಸಮೀರ್ ಮಲ್ಲಾ ವಿರುದ್ಧದ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಸಮೀರ್ ಮಲ್ಲಾಗೆ ತೀವ್ರವಾದ ವಾಗ್ದಂಡನೆ ವಿಧಿಸುವ ಸಾಧ್ಯತೆ ಇದೆ.
ಕಾಶ್ಮಿರದಲ್ಲಿ ಸೇನಾ ವಾಹನ ಮೇಲೆ ಕಲ್ಲು ತೂರಾಟದ ಸಂದರ್ಭದಲ್ಲಿ ಯುವಕನನ್ನು ತಮ್ಮ ಜೀಪ್ ಮುಂದೆ ಕಟ್ಟಿ ಹಾಕಿ ವಾಹನ ಓಡಿಸಿದ್ದ ಮೇಜರ್ ಗೊಗೊಯ್ ವರ್ತನೆ ಬಗ್ಗೆ ಕೂಡ ಅಪಸ್ವರ ಕೇಳಿ ಬಂದಿದ್ದವು. ಆದರೆ ತನಿಖೆ ಬಳಿಕ ಗೊಗೊಯ್ ನಿರ್ದೋಷಿ ಎಂದು ಸಾಬೀತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.