ಕಾಳಧನಿಕರ ಮಾಹಿತಿ ಗೌಪ್ಯತೆ ಕಾಪಾಡಿ

Published : Jun 19, 2017, 01:24 PM ISTUpdated : Apr 11, 2018, 01:05 PM IST
ಕಾಳಧನಿಕರ ಮಾಹಿತಿ ಗೌಪ್ಯತೆ ಕಾಪಾಡಿ

ಸಾರಾಂಶ

ಹೊಸ ಸ್ವಯಂಚಾಲಿತ ಮಾಹಿತಿ ವಿನಿಮಯ ಗವಾಕ್ಷಿ ಮುಖೇನ ಪಡೆಯಲಿರುವ ಸ್ವಿಸ್‌ ಬ್ಯಾಂಕ್‌ ಖಾತೆದಾರರ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡುವ ಭರವಸೆ ಭಾರತ ನೀಡಬೇಕಾಗಿದೆ. ತಪ್ಪಿದಲ್ಲಿ ಭಾರತದೊಂದಿಗೆ ದತ್ತಾಂಶ ಹಂಚಿಕೆ ಪ್ರಕ್ರಿಯೆಯನ್ನು ಸ್ವಿಜರ್ಲೆಂಡ್‌ ಸ್ಥಗಿತಗೊಳಿಸುತ್ತದೆ ಎಂದು ಅಲ್ಲಿನ ಖಾಸಗಿ ಬ್ಯಾಂಕ್‌ಗಳ ಸಂಘ ತಿಳಿಸಿದೆ. ಹೀಗಾಗಿ ವಿವಿಧ ಸ್ವಿಸ್‌ ಬ್ಯಾಂಕ್‌ಗಳಿಂದ 2019ರಿಂದ ವಿನಿಮಯಗೊಳ್ಳಲಿರುವ ಕಪ್ಪುಹಣದಾರರ ಮಾಹಿತಿ ಬಹಿರಂಗಪಡಿಸದಂತೆ ಎಚ್ಚರಿಸಿದಂತಾಗಿದೆ.

ನವದೆಹಲಿ: ಹೊಸ ಸ್ವಯಂಚಾಲಿತ ಮಾಹಿತಿ ವಿನಿಮಯ ಗವಾಕ್ಷಿ ಮುಖೇನ ಪಡೆಯಲಿರುವ ಸ್ವಿಸ್‌ ಬ್ಯಾಂಕ್‌ ಖಾತೆದಾರರ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡುವ ಭರವಸೆ ಭಾರತ ನೀಡಬೇಕಾಗಿದೆ. ತಪ್ಪಿದಲ್ಲಿ ಭಾರತದೊಂದಿಗೆ ದತ್ತಾಂಶ ಹಂಚಿಕೆ ಪ್ರಕ್ರಿಯೆಯನ್ನು ಸ್ವಿಜರ್ಲೆಂಡ್‌ ಸ್ಥಗಿತಗೊಳಿಸುತ್ತದೆ ಎಂದು ಅಲ್ಲಿನ ಖಾಸಗಿ ಬ್ಯಾಂಕ್‌ಗಳ ಸಂಘ ತಿಳಿಸಿದೆ. ಹೀಗಾಗಿ ವಿವಿಧ ಸ್ವಿಸ್‌ ಬ್ಯಾಂಕ್‌ಗಳಿಂದ 2019ರಿಂದ ವಿನಿಮಯಗೊಳ್ಳಲಿರುವ ಕಪ್ಪುಹಣದಾರರ ಮಾಹಿತಿ ಬಹಿರಂಗಪಡಿಸದಂತೆ ಎಚ್ಚರಿಸಿದಂತಾಗಿದೆ.

ಇತರ ದೇಶಗಳಿಂದ ಸ್ವೀಕರಿಸಿದ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ಸ್ವಿಜರ್ಲೆಂಡ್‌ ಮತ್ತು ಅಲ್ಲಿನ ಬ್ಯಾಂಕ್‌ಗಳು ನಿಗಾವಿರಿಸಲಿವೆ. ಹಣ ಕಾಸು ವಿಷಯದಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ(ಎಇಒಐ)ದ ವಿಷಯದಲ್ಲಿ ಜಾಗತಿಕ ನೀತಿಗಳನ್ನು ಇತರ ಎಲ್ಲ ಜಾಗತಿಕ ಹಣಕಾಸು ಕೇಂದ್ರಗಳು ಜಾರಿಗೊಳಿಸಬೇಕೆಂದೂ ಅವು ಬಯಸಿವೆ.
ಭಾರತ ಮತ್ತು ಇತರ 40 ದೇಶಗಳೊಂದಿಗೆ ಶಂಕಿತ ಕಪ್ಪು ಹಣದ ಮಾಹಿತಿಗಳನ್ನು ತಕ್ಷಣವೇ ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದ ಎಇಒಐಗೆ ಸ್ವಿಸ್‌ ಫೆಡರಲ್‌ ಕೌನ್ಸಿಲ್‌ ಶುಕ್ರವಾರ ಅನುಮೋದನೆ ನೀಡಿದೆ. ಭಾರತದೊಂದಿಗಿನ ಒಪ್ಪಂದ ಜನಮತ ಸಂಗ್ರಹದ ವಿಷಯವಾಗುವುದಿಲ್ಲ ಮತ್ತು 2018ರಲ್ಲಿ ಅದನ್ನು ಜಾರಿಗೊಳಿಸಲು ಯೋಜಿಸಲಾಗಿದೆ. ಹೀಗಾಗಿ ಪ್ರಥಮ ಹಂತದ ದತ್ತಾಂಶ ವಿನಿಮಯ 2019ರಲ್ಲಿ ನಡೆಯಲಿದೆ. ಒಪ್ಪಂದ ಜಾರಿ ಅವಧಿ ಸುದೀರ್ಘವಾಗಿರುವುದರಿಂದ, ಮಾಹಿತಿ ಸ್ವೀಕರಿಸುವ ಭಾರತ ಮತ್ತು ಇತರ ರಾಷ್ಟ್ರಗಳು ದತ್ತಾಂಶಗಳ ಗೌಪ್ಯತೆ ಕಾಪಾಡುವುದಕ್ಕೆ ತೆಗೆದುಕೊಂಡ ವಿಶ್ವಾಸಾರ್ಹ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ತಮಗೆ ಸಾಕಷ್ಟುಸಮಯವಿದೆ ಎಂದು ಸ್ವಿಸ್‌ ಬ್ಯಾಂಕರ್‌ಗಳು ಹೇಳಿದ್ದಾರೆ. ಈ ಪ್ರಕ್ರಿಯೆ ಭಾರತಕ್ಕೆ ಮಾತ್ರ ಅನ್ವಯವಾಗುವುದಿಲ್ಲ, ಸ್ವಯಂಚಾಲಿತ ಹಾದಿಯ ಮೂಲಕ ಸ್ವಿಜರ್ಲೆಂಡ್‌ನಿಂದ ಬ್ಯಾಂಕಿಂಗ್‌ ಮಾಹಿತಿ ಸ್ವೀಕರಿಸುವ ಎಲ್ಲ ದೇಶಗಳಿಗೂ ಅನ್ವಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸ್ವಿಸ್‌ ಬ್ಯಾಂಕ್‌ಲ್ಲಿ ಭಾರತೀಯರ ಠೇವಣಿ ಕಡಿಮೆ

ವಿದೇಶಗಳಲ್ಲಿ ಭಾರತೀಯರು ಹೊಂದಿರುವ ಕಪ್ಪು ಹಣದ ಬಗ್ಗೆ ಭಾರತದಲ್ಲಿ ಭಾರೀ ಕಲ್ಪನೆಗಳಿವೆ. ಅದರಲ್ಲೂ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರೀ ಮೊತ್ತದ ಕಪ್ಪುಹಣ ಕೊಳೆಯುತ್ತಿದೆ ಎನ್ನಲಾಗುತ್ತದೆ. ಆದರೆ ಸಿಂಗಾಪುರ ಮತ್ತು ಹಾಂಕಾಂಗ್‌ನಂತಹ ಜಾಗತಿಕ ಹಣಕಾಸು ಕೇಂದ್ರಗಳಿಗೆ ಹೋಲಿಸಿದರೆ, ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಠೇವಣಿ ತೀರಾ ಕಡಿಮೆ ಎಂದು ಸ್ವಿಸ್‌ ಖಾಸಗಿ ಬ್ಯಾಂಕ್‌'ಗಳ ಒಕ್ಕೂಟದ ಮೂಲಗಳು ತಿಳಿಸಿವೆ.

2015ರ ಅಂತ್ಯದ ವೇಳೆಗೆ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ರೂ.8,392 ಕೋಟಿಗೆ ಇಳಿಕೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಆದರೆ ಇತರ ಜಾಗತಿಕ ಹಣಕಾಸು ಕೇಂದ್ರಗಳಲ್ಲಿ ಎಷ್ಟುಹಣ ಠೇವಣಿಯಿದೆ ಎಂಬ ಅಧಿಕೃತ ಮಾಹಿತಿಯಿಲ್ಲ. 2006ರ ಅಂತ್ಯದ ವೇಳೆಗೆ ಭಾರತೀಯರಿಂದ ಅತ್ಯಧಿಕ ರೂ.23,000 ಕೋಟಿ ದಾಖಲೆ ಮೊತ್ತದ ಹಣ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿತ್ತು. ಆ ನಂತರದಿಂದ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಕುಸಿಯುತ್ತಾ ಬಂದಿತ್ತು. 2011 ಮತ್ತು 2013ರಲ್ಲಿ ಮಾತ್ರ ಅದು ಏರಿಕೆ ಕಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!