ನೆರೆ ಪರಿಶೀಲನೆ ವೇಳೆ ನಗುತ್ತಾ ಸೆಲ್ಫಿ ತೆಗಿಸಿಕೊಂಡ ಮಹಾ ಸಚಿವ!

Published : Aug 10, 2019, 08:51 AM IST
ನೆರೆ ಪರಿಶೀಲನೆ ವೇಳೆ ನಗುತ್ತಾ  ಸೆಲ್ಫಿ ತೆಗಿಸಿಕೊಂಡ ಮಹಾ ಸಚಿವ!

ಸಾರಾಂಶ

ತಮಾಷೆಯಲ್ಲ... ನೆರೆ ಪರಿಶೀಲನೆ ವೇಳೆ ನಗುತ್ತಾ ಸೆಲ್ಫಿ ತೆಗಿಸಿಕೊಂಡ ಮಹಾ ಸಚಿವ| ವಿಡಿಯೋ ವೈರಲ್

ಮುಂಬೈ[ಆ.10]: ರಾಜಕಾರಣಿಗಳು ಜನರ ಮುಂದೆ ಭಾಷಣ ಬಿಗಿದು, ಕೈ ಬೀಸಿ ಮತಕೇಳುವುದು ರೂಢಿಗತ. ಹಾಗೆಂದು ಪ್ರವಾಹದಿಂದ ನಲುಗಿ ದುಃಖದಿಂದ ಇರುವ ಜನರ ಬಳಿ ಹೋಗಿ ನಗು ಬೀರುತ್ತಾ, ಕೈ ಬೀಸಿದರೆ ಯಾರಿಗೆ ತಾನೆ ಇಷ್ಟವಾಗುತ್ತದೆ?

ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಇಂಥದ್ದೊಂದು ಎಡವಟ್ಟು ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ. ಪ್ರವಾಹ ಪೀಡಿತ ಕೊಲ್ಲಾಪುರಕ್ಕೆ ತೆರಳಿದ್ದ ಅವರು ದೋಣಿಯಲ್ಲಿ ವಿಹಾರ ಮಾಡುತ್ತಾ ಅಪರಿಚಿತ ವ್ಯಕ್ತಿಯೊಬ್ಬನ ಜೊತೆ ಹಲ್ಲು ಕಿರಿಯುತ್ತಾ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಸಚಿವರ ಈ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಸಚಿವರು ನೆರೆ ಪರಿಶೀಲನೆಗೆ ತೆರಳಿದ್ದಾರೆಯೇ ಅಥವಾ ಪ್ರವಾಸಕ್ಕೆ ಹೋಗಿದ್ದಾರೆಯೇ ಎಂದು ಎನ್‌ಸಿಪಿ ಪ್ರಶ್ನಿಸಿದೆ. ಅಲ್ಲದೇ ಸಚಿವರ ರಾಜೀನಾಮೆಗೂ ಒತ್ತಾಯಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ