
ಬೆಂಗಳೂರು (ಡಿ.27): ಮಹದಾಯಿ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ. ರಾಜಭವನ ಕಡೆ ಹೊರಟಿರುವ ಪ್ರತಿಭಟನಕಾರರನ್ನು ಚಾಲುಕ್ಯ ಸರ್ಕಲ್ ಬಳಿ ಪೊಲೀಸರು ತಡೆದಿದ್ದಾರೆ. ರಾಜಭವನಕ್ಕೆ ತೆರಳಲು ಕೇವಲ ಪ್ರಮುಖ ಮುಖಂಡರಿಗೆ ಮಾತ್ರ ಅವಕಾಶ ಮಾಡಿಕೋಡಲು ಪೊಲೀಸರು ನಿರ್ಧರಿಸಿದ್ದಾರೆ.
ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆಗಿಳಿದ ಬಿಜೆಪಿ ಮುಖಂಡರ ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಆರ್. ಅಶೋಕ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾಕಪ್ಪಾ ಬಂಧಿಸ್ತೀಯಾ? ಯಾವ ಕಾನೂನಿನ ಆಧಾರದಲ್ಲಿ ಬಂಧನ ಮಾಡ್ತಿದಿಯಾ, ನೀನೇನು ಕಾಂಗ್ರೆಸ್ ಏಜೆಂಟಾ ಎಂದು ಪೊಲೀಸರ ವಿರುದ್ದ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಪೊಲೀಸ್ ಸತ್ತೋಗಿದೆ. ಗೂಂಡಾ ರಾಜ್ಯವಾಗಿದೆ. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಗೆ ಯಾವ ಕಾನೂನಿಡಿಯಲ್ಲಿ ಅನುಮತಿ ನೀಡಿದ್ರು? ಅದೇ ರೀತಿ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟಿಸಲು ನಮಗೂ ಅನುಮತಿ ನೀಡಿ. ಇನ್ಮುಂದೆ ಯಾವ ಕಾರ್ಯಕ್ರಮ ಆಚರಿಸಲು ಪೊಲೀಸ್ ಅನುಮತಿ ಪಡೆಯಬೇಡಿ. ಪೊಲೀಸರೇ ಇಲ್ಲ. ಹಾಗಾಗಿ ನಿಮ್ಮಿಷ್ಟದಂತೆ ರಾಜ್ಯೋತ್ಸವ, ಗಣೇಶ ಹಬ್ಬ ಆಚರಣೆ ಮಾಡಿ. ಇದು ರಾಜ್ಯದ ಜನತೆಗೆ ನನ್ನ ಮನವಿ ಎಂದು ಆರ್ ಅಶೋಕ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.