ಮಹದಾಯಿ ಹೋರಾಟಕ್ಕೆ ವ್ಯಾಪಕ ಬೆಂಬಲ; ರಾಜಭವನದತ್ತ ಪ್ರತಿಭಟನಾ ರ‍್ಯಾಲಿ

Published : Dec 27, 2017, 11:51 AM ISTUpdated : Apr 11, 2018, 12:59 PM IST
ಮಹದಾಯಿ ಹೋರಾಟಕ್ಕೆ ವ್ಯಾಪಕ ಬೆಂಬಲ; ರಾಜಭವನದತ್ತ ಪ್ರತಿಭಟನಾ ರ‍್ಯಾಲಿ

ಸಾರಾಂಶ

ಬಿಜೆಪಿ ಕಚೇರಿ ಎದುರು ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇದೀಗ ರಾಜಭವನ ಚಲೋ ಪಾದಯಾತ್ರೆ ಆರಂಭಿಸಿದ್ದಾರೆ. ಮಹದಾಯಿಗಾಗಿ ಹೋರಾಟ ತೀವ್ರಗೊಂಡಿದೆ. ಪಾದಯಾತ್ರೆ ಮೂಲಕ  ರ‍್ಯಾಲಿ ನಡೆಸುತ್ತಿದ್ದಾರೆ. ರಾಜಭವನಕ್ಕೆ ತೆರಳಿ ಅಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ತದ ನಂತರ ಸಿಎಂ ನಿವಾಸಕ್ಕೆ ಭೇಟಿ ನೀಡಿ ಅವರಿಗೂ ಮನವಿ ಸಲ್ಲಿಸಲಿದ್ದಾರೆ. ಜೊತೆಗೆ ಬಿಎಸ್'ವೈ, ದೇವೇಗೌಡರಿಗೂ ಮನವಿ ಸಲ್ಲಿಸಲಿದ್ದಾರೆ.

ಬೆಂಗಳೂರು(ಡಿ.27): ಬಿಜೆಪಿ ಕಚೇರಿ ಎದುರು ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇದೀಗ ರಾಜಭವನ ಚಲೋ ಪಾದಯಾತ್ರೆ ಆರಂಭಿಸಿದ್ದಾರೆ. ಮಹದಾಯಿಗಾಗಿ ಹೋರಾಟ ತೀವ್ರಗೊಂಡಿದೆ. ಪಾದಯಾತ್ರೆ ಮೂಲಕ ರ‍್ಯಾಲಿ ನಡೆಸುತ್ತಿದ್ದಾರೆ. ರಾಜಭವನಕ್ಕೆ ತೆರಳಿ ಅಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ತದ ನಂತರ ಸಿಎಂ ನಿವಾಸಕ್ಕೆ ಭೇಟಿ ನೀಡಿ ಅವರಿಗೂ ಮನವಿ ಸಲ್ಲಿಸಲಿದ್ದಾರೆ. ಜೊತೆಗೆ ಬಿಎಸ್'ವೈ, ದೇವೇಗೌಡರಿಗೂ ಮನವಿ ಸಲ್ಲಿಸಲಿದ್ದಾರೆ.

ರ‍್ಯಾಲಿಗೆ ಕನ್ನಡ ಪರ ಹೋರಾಟಗಾರು, ಶಾಸಕ ಪುಟ್ಟಣ್ಣಯ್ಯ, ಸಾಹಿತಿ ದೇವನೂರು ಮಹಾದೇವ, ನಟ ಪ್ರಥಮ್ ಸಾಥ್ ನೀಡಿದ್ದಾರೆ.

ಇನ್ನು 4 ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.  ಗದಗ, ಧಾರವಾಡದಲ್ಲಿ ಉಪವಾಸ ಧರಣಿ ಮಾಡುವ  ಮೂಲಕ  ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಧಾರವಾಡಕ್ಕೆ ಹಾಲು ವಿತರಿಸಲು ಬಂದಿದ್ದ ಬಸವರಾಜ ಎನ್ನು ರೈತ  ಪ್ರತಿಭಟನೆ ನೋಡಿ ಎಲ್ಲ ಪ್ರತಿಭಟನಾಕಾರರಿಗೆ ಉಚಿತ ಹಾಲು ವಿತರಿಸಿ, ಗ್ರಾಮಕ್ಕೆ ತೆರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!