
ಉಮರಿಯಾ[ಆ.01]: ಸೋಮವಾರವಷ್ಟೇ ಹುಲಿ ಗಣತಿ ಬಿಡುಗಡೆ ಮಾಡಿದ್ದ ಪ್ರಧಾನಿ ಮೋದಿ ದೇಶದಲ್ಲೇ ಅತಿ ಹೆಚ್ಚಿನ ಹುಲಿಗಳನ್ನು ಹೊಂದಿರುವ ರಾಜ್ಯವೆಂದು ಮಧ್ಯಪ್ರದೇಶವನ್ನು (526) ಘೋಷಿಸಿದ್ದರು.
ಎರಡನೇ ಸ್ಥಾನಕ್ಕೆ (524) ಕರ್ನಾಟಕ ತೃಪ್ತಿಪಟ್ಟುಕೊಂಡಿತ್ತು. ಆದರೆ ಗಣತಿ ವರದಿ ಬಿಡುಗಡೆಗೊಂಡ ನಾಲ್ಕೇ ದಿನದಲ್ಲಿ ಮಧ್ಯಪ್ರದೇಶದ ವಿವಿಧ ಹುಲಿ ಅಭಯಾರಣ್ಯಗಳಲ್ಲಿ ಪರಸ್ಪರ ಕಾದಾಡಿಕೊಂಡು ಒಂದು ಗಂಡು, ಒಂದು ಹೆಣ್ಣು ಹಾಗೂ ಒಂದು ಹುಲಿ ಮರಿ ಸೇರಿದಂತೆ ಒಟ್ಟು ಮೂರು ಹುಲಿಗಳು ಸಾವನ್ನಪ್ಪಿವೆ.
ಅರಣ್ಯ ಪ್ರದೇಶದಲ್ಲಿನ ತಮ್ಮ ವ್ಯಾಪ್ತಿ ಹಂಚಿಕೆ ಕುರಿತು ಹುಲಿಗಳು ಪರಸ್ಪರ ಕಾದಾಡುವುದು ಸಾಮಾನ್ಯ. ಹೀಗೆ ಕಾದಾಟದಲ್ಲಿ ಈ ಹುಲಿಗಳು ಸಾವನ್ನಪ್ಪಿವೆ ಎಂದು ಫಾರೆಸ್ಟ್ ರೇಂಜರ್ ಪಿ.ಕೆ.ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.