ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜನ ಬಗ್ಗೆ ಒಂದಿಷ್ಟು ನೆನಪು

Published : Nov 22, 2016, 02:38 PM ISTUpdated : Apr 11, 2018, 12:46 PM IST
ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜನ ಬಗ್ಗೆ ಒಂದಿಷ್ಟು ನೆನಪು

ಸಾರಾಂಶ

ಇವರ ಸಂಗೀತ ಸಾಧನೆಗೆ ತಂದೆಯೇ ಮೊದಲ ಗುರುಗಳು. ತಂದೆಯ ಗುಣ ಸಹಜವಾಗಿಯೇ ಮಗನ ಮೇಲೆ ಬಿತ್ತು. ಸಂಗೀತಾಭಿರುಚಿಯಿದ್ದ ಮಗನಿಗೆ ಸಂಗೀತ ಶಿಕ್ಷಣಕ್ಕಾಗಿ ವಿದ್ವಾನ್ ಆಗಿದ್ದ ಸುಸರ್ಲ ದಕ್ಷಿಣಾಮೂರ್ತಿ ಅವರ ಬಳಿ ಬಿಟ್ಟರು. ಕೆಲವೇ ವರ್ಷ'ಗಳಲ್ಲಿ 72 ಬಗೆಯ ರಾಗಗಳನ್ನು ಕಲಿತರು.

ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಡಾ. ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ  ಇಂದು  ಅನಾರೋಗ್ಯದ ಕಾರಣದಿಂದ ಚೆನ್ನೈನ ತಮ್ಮ  ನಿವಾಸದಲ್ಲಿ ಮೃತಪಟ್ಟಿದ್ದಾರೆ. ಬಾಲಮುರಳಿಕೃಷ್ಣ ಅವರು ಜನಿಸಿದ್ದು ಜುಲೈ 6, 1930 ರಂದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಂಕರ ಗುಪ್ತನ್ ಎಂಬ ಗ್ರಾಮದಲ್ಲಿ.

ಮನೆಯಲ್ಲಿಯೇ ಅಪ್ಪಟ ಸಂಗೀತದ ವಾತಾವರಣವಿದ್ದ ಕಾರಣ ಬಾಲಮುರಳಿಯವರು ಸಂಗೀತ ಗಾರುಡಿಗನಾಗಿ ಬೆಳೆಯುವುದಕ್ಕೆ ಪ್ರಮುಖ ಕಾರಣವಾಯಿತು. ತಂದೆ ಶ್ರೀ ಸತ್ಯನಾರಾಯಣ ಅವರು ಪ್ರಸಿದ್ಧ ಹರಿಕಥಾ ವಿದ್ವಾನ್. ತಾಯಿ ಸೂರ್ಯಕಾಂತಮ್ಮ ಕೂಡ ಶ್ರೇಷ್ಠ ವೀಣಾವಾದಕಿ.  15ನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಕಾರಣ ವಿಜಯವಾಡದ ತಮ್ಮ ಸೋದರತ್ತೆಯ ಮನೆಯಲ್ಲಿ ಬೆಳಯಬೇಕಾಯಿತು.

ಇವರ ಸಂಗೀತ ಸಾಧನೆಗೆ ತಂದೆಯೇ ಮೊದಲ ಗುರುಗಳು. ತಂದೆಯ ಗುಣ ಸಹಜವಾಗಿಯೇ ಮಗನ ಮೇಲೆ ಬಿತ್ತು. ಸಂಗೀತಾಭಿರುಚಿಯಿದ್ದ ಮಗನಿಗೆ ಸಂಗೀತ ಶಿಕ್ಷಣಕ್ಕಾಗಿ ವಿದ್ವಾನ್ ಆಗಿದ್ದ ಸುಸರ್ಲ ದಕ್ಷಿಣಾಮೂರ್ತಿ ಅವರ ಬಳಿ ಬಿಟ್ಟರು. ಕೆಲವೇ ವರ್ಷ'ಗಳಲ್ಲಿ 72 ಬಗೆಯ ರಾಗಗಳನ್ನು ಕಲಿತರು. ತಮ್ಮ 30ನೇ ವಯಸ್ಸಿನಲ್ಲಿಯೇ ವಿಜಯವಾಡದ ರೇಡಿಯೋ ಕೇಂದ್ರದಲ್ಲಿ ಭಕ್ತಿರಂಜಿನಿ ಎಂಬ ಗೀತಮಾಲೆ ಪ್ರಾರಂಭಿಸಿ ಅತ್ಯಂತ ಜನಪ್ರಿಯರಾದರು.

ಕರ್ನಾಟಕ ಸಂಗೀತದ ಅಪ್ರತಿಮ ಗಾಯಕ

ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸಂಗೀತ ಶೈಲಿಯ ರಾಗ,ತಾಳ,ಗಾನ,ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. ಕನ್ನಡ,ತೆಲುಗು ತಮಿಳು,ಮಲಯಾಳಂ ಚಲನಚಿತ್ರಗಳಲ್ಲಿ ಹಾಡುವುದರ ಜೊತೆ ಕಂಠದಾನವನ್ನು ಮಾಡಿದ್ದಾರೆ.ದೇಶ ವಿದೇಶಗಳಲ್ಲಿ 30 ಸಾವಿರಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನೀಡಿದ್ದಾರೆ.

ಕನ್ನಡದಲ್ಲಿ ಹಲವು ಚಿತ್ರಗಳಿಗೆ ಗಾಯನ

ಸಂಧ್ಯರಾಗ,ಹಂಸಗೀತೆ,ಸುಬ್ಬಾಶಾಸ್ತ್ರಿ,ಗಾನಯೋಗಿ ರಾಮಣ್ಣ,ಶ್ರೀ ಪುರಂದರ ರಾಮಣ್ಣ,ಅಮ್ಮ,ಮುತ್ತಿನ ಹಾರ ಸೇರಿದಂತೆ ಹಲವು ಚಿತ್ರಗಳಿಗೆ ಹಾಡಿದ್ದಾರೆ. ತೆಲುಗು,ತಮಿಳು,ಮಲಯಾಳಂ ಚಿತ್ರಗಳಲ್ಲಂತೂ ಲೆಕ್ಕವೇ ಇಲ್ಲ ಬಿಡಿ. ಸಿನಿಮಾ ಗೀತೆಗಳಲ್ಲದೆ ಕೀರ್ತನೆಗಳು,ದೇವರನಾಮಗಳಲ್ಲೂ ಹಾಡಿದ್ದಾರೆ.

ಆಕಾಶವಾಣಿ, ಸಂಗೀತ ಶಾಲೆಯಲ್ಲೂ ಕಾಯಕ

ಹಾಡುವುದಲ್ಲದೆ ಪಟೀಲು ನುಡಿಸುವುದು,ಖಂಜಿರ,ಮೃದಂಗ,ಕೊಳಲು ಬಾರಿಸುವ ಖಾಯಾಲಿಯಿದೆ. ವಿಜಯವಾಡ,ಹೈದರಾಬಾದ್ ಮತ್ತು ಮದರಾಸು ಆಕಾಶವಾಣಿ ಕೇಂದ್ರಗಳಲ್ಲಿ ಸಂಗೀತ ನಿರ್ಮಾಪಕರಾಗಿ ಹಾಗೂ ವಿಜಯವಾಡದ ಸರ್ಕಾರಿ ಸಂಗೀತ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಭೋಜನಪ್ರಿಯರು,ಆಕ್ಷನ್ ಚಿತ್ರಗಳೆಂದರೆ ಬಲು ಪ್ರೀತಿ

ಸಂಗೀತದ ಜೊತೆಗೆ ಭೋಜನ ಪ್ರಿಯರು ಹೌದು.ಅನ್ನ,ರಸಂ,ಕರಿದ ಬಜ್ಜಿ,ಐಸ್ಕ್ರೀಂ ಇವರಿಗೆ ಪ್ರಿಯವಾದ ತಿಂಡಿಗಳು. ಆಕ್ಷನ್ ಚಿತ್ರಗಳನ್ನು ನೋಡುವುದು ಇವರಿಗೆ ಬಲು ಪ್ರೀತಿ.

ಹೊಸ ರಾಗಗಳ ಸಂಯೋಜಕ

ಪ್ರಚಲಿತವಿಲ್ಲದ ಹೊಸ ರಾಗಗಳನ್ನು ಸಂಯೋಜನೆ ಮಾಡಿದ್ದಾರೆ. ಮೊದಲೆಲ್ಲ  5 ಸ್ವರಗಳಿಲ್ಲದೆ ರಾಗಗಳು ರಂಜಿಸುವುದಿಲ್ಲೆಂಬ ಸಂಪ್ರದಾಯವಿತ್ತು. ಬಾಲಮುರಳಿಯನರು ಇದನ್ನು ಮೀರಿ ನಾಲ್ಕು ಹಾಗೂ ಮೂರು ಸ್ವರಗಳ ರಾಗಗಳನ್ನು ಸಂಯೋಜಿಸಿದ್ದಾರೆ.

ಪ್ರಶಸ್ತಿಗಳಿಗೇನು ಕಡಿಮೆಯಿಲ್ಲ

1978 -ಸಂಗೀತ ಕಲಾನಿಧಿ

1992- ವಿಸ್ಡಮ್ ಮ್ಯಾನ್ ಆಫ್ ದ ಇಯರ್

ಪದ್ಮಭೂಷಣ

ಪದ್ಮವಿಭೂಷಣ

ಹಂಸಗೀತೆ ಹಾಗೂ ಮಧ್ವಾಚಾರ್ಯ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ (ಇವೆರಡೂ ಕನ್ನಡ ಚಿತ್ರಗಳು)

ಕಾಳಿದಾಸ್ ಸಮ್ಮಾನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ