
ವಿಜಯಪುರ (ಏ. 06): ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಎಂ ಬಿ ಪಾಟೀಲ್ ಅವರ ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ್ ಅವರು ಮಾಧ್ಯಮದ ಎದುರು ಪ್ರದರ್ಶನ ಮಾಡಿದ್ದಾರೆ.
ಎಂ ಬಿ ಪಾಟೀಲ್ ಅವರು ಬಬಲೇಶ್ವರ ಮತಕ್ಷೇತ್ರದಲ್ಲಿ 140 ಕ್ಕೂ ಹೆಚ್ಚು ಬೋರ್’ವೆಲ್’ಗಳನ್ನು ಕೊರೆಯಿಸಿ ರೈತರಿಗೆ ಆಮೀಷ ಒಡ್ಡಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ಸಾವಿರಾರು ಬೈಕ್ ಗಳಿಗೆ ಎಂ ಬಿ ಪಾಟೀಲ್ ಭಾವಚಿತ್ರ ಇರುವ ಬಾವುಟ ಅಳವಡಿಕೆ ಮಾಡಲಾಗಿದೆ. ಬಬಲೇಶ್ವರ ಮತಕ್ಷೇತ್ರದ ಜನರಿಗೆ ಉಚಿತ ಶ್ರೀಶೈಲ ಯಾತ್ರೆ ಆಮೀಷವನ್ನೂ ಒಡ್ಡಿದ್ದಾರೆ. ಬಿಎಲ್ ಡಿಇ ಸಂಸ್ಥೆಯ 45 ಕ್ಕೂ ಹೆಚ್ಚು ಕೆಲಸಗಾರರನ್ನು ನಿಯಮ ಉಲ್ಲಂಘಿಸಿ ಚುನಾವಣಾ ಸೇವೆಗೆ ನಿಯೋಜನೆ ಮಾಡಿದ್ದಾರೆ. ಬಬಲೇಶ್ವರ ಮತದಾರರಿಗೆ ಬ್ಯಾಗ್ ಛತ್ರಿ ಟಿ-ಶರ್ಟ್ ಹಣ ಹಂಚಿಕೆ ಮಾಡಿದ್ದಾರೆ. ಈ ಎಲ್ಲ ಉಲ್ಲಂಘನೆ ಬಗ್ಗೆ ಡಿಸಿ, ಚುನಾವಣಾಧಿಕಾರಿಗೆ ದೂರು ನೀಡಿದ್ರೂ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಸ್ವತಃ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಮಗದೊಮ್ಮೆ ದೂರು ನೀಡಲಾಗುವುದು ಎಂದು ವಿಜುಗೌಡ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.