
ನವದೆಹಲಿ: ಮಹಾರಾಷ್ಟ್ರದಲ್ಲಿ ವಿವಾಹವೊಂದರ ಸಮಾರಂಭಕ್ಕೆ ಹೋಗಿ, ಅಲ್ಲಿಯೇ ಕುಸಿದುಬಿದ್ದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ ನ್ಯಾ.ಬಿ.ಎಚ್.ಲೋಯಾ ಅವರ ಸಾವು ಹೃದಯಾಘಾತದಿಂದ ಆಗಿರುವುದು ಎಂಬ ಅಧಿಕೃತ ಪ್ರತಿಪಾದನೆಯನ್ನು ಭಾರತೀಯ ವಿಧಿವಿಜ್ಞಾನದ ತಜ್ಞರಾದ ಡಾ.ಆರ್.ಕೆ.ಶರ್ಮಾ ಅವರು ಅಲ್ಲಗೆಳೆದಿದ್ದಾರೆ.
ಲೋಯಾ ಅವರ ಮೆದುಳಿಗೆ ಹಾನಿ ಮತ್ತು ವಿಷವುಣಿಸಿಯೂ ಇರಬಹುದು ಎಂಬಂಥ ಕುರುಹುಗಳು ಸಿಕ್ಕಿವೆ ಎಂದು ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ವಿಧಿ ವಿಜ್ಞಾನ ಮತ್ತು ವಿಷಶಾಸ್ತ್ರದ ವಿಭಾಗದ ಮಾಜಿ ಮುಖ್ಯಸ್ಥ ಡಾ.ಆರ್.ಕೆ.ಶರ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಲೋಯಾ ಸಾವಿನ ಕುರಿತು ಆರ್‌ಟಿಐ ಮಾಹಿತಿ ಅನ್ವಯ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ವರದಿಗಳನ್ನು ಕ್ರೋಢಿಕರಿಸಿ, ಅಧ್ಯಯನ ಮಾಡಿರುವ ಡಾ.ಶರ್ಮಾ ಅವರು, ‘ಲೋಯಾ ಅವರ ಮರಣೋತ್ತರ ಸೇರಿದಂತೆ ಯಾವುದೇ ವರದಿಯಲ್ಲಿ ಹೃದಯಘಾತದಿಂದ ಸಾವಿಗೀಡಾಗಿದ್ದಾರೆ ಎಂಬುದನ್ನು ಪುಷ್ಟೀಕರಿಸುವ ಅಂಶಗಳೇ ಇಲ್ಲ,’ ಎಂದು ಹೇಳಿದ್ದಾರೆ.
ಅಲ್ಲದೆ, ಲೋಯಾ ಅವರು ಹೃದಯಾಘಾತಕ್ಕೊಳಗಾದ ಎರಡು ಗಂಟೆಗಳ ಬಳಿಕ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ಹೃದಯಾಘಾತ ಸಂಭವಿಸಿದ ಬಳಿಕ ಓರ್ವ ಅರ್ಧ ಗಂಟೆ ಬದುಕುಳಿದಿದ್ದಾನೆ ಎಂದರೆ, ಆತನ ಹೃದಯಾಘಾತದಿಂದ ಸಾವನ್ನಪ್ಪುವುದಿಲ್ಲ. ಏತನ್ಮಧ್ಯೆ, ಲೋಯಾ ಅವರ ಮೆದುಳಿನ ಭಾಗವಾದ ದೂರಾ ಎಂಬ ಪದರದ ಮೇಲೆ ಗಾಯವಾಗಿದ್ದು, ಲೋಯಾ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂಬುದನ್ನು ಸಾರುತ್ತದೆ ಎಂದು ಡಾ.ಶರ್ಮಾ ಪ್ರತಿಪಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.