ದೇಶದ 370 ಕ್ಕೂ ಹೆಚ್ಚು ಕ್ಷೇತ್ರಗಳ ಮತಗಳ ಮೇಲೆ ಅನುಮಾನ

Published : Jun 02, 2019, 11:17 AM IST
ದೇಶದ 370 ಕ್ಕೂ ಹೆಚ್ಚು ಕ್ಷೇತ್ರಗಳ ಮತಗಳ ಮೇಲೆ ಅನುಮಾನ

ಸಾರಾಂಶ

ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಯಾದರೂ, ಇವಿಎಂಗಳ ಕುರಿತು ಅನುಮಾನ ಇನ್ನೂ ದೂರವಾಗಿಲ್ಲ. ಅಚ್ಚರಿ ಎಂದರೆ ಇಂಥದ್ದೊಂದು ಅನುಮಾನ ನೀಗಿಸಬೇಕಾದ ಚುನಾವಣಾ ಆಯೋಗವೇ ಮೌನಕ್ಕೆ ಶರಣಾಗಿದೆ.

ನವದೆಹಲಿ: ಚುನಾವಣೆ ಆರಂಭಕ್ಕೆ ಮುನ್ನ, ಚುನಾವಣೆ ವೇಳೆ ವಿಪಕ್ಷಗಳು ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ಹಳೆಯ ವಿಷಯ. ಇದೀಗ ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಯಾದರೂ, ಇವಿಎಂಗಳ ಕುರಿತು ಅನುಮಾನ ಇನ್ನೂ ದೂರವಾಗಿಲ್ಲ. ಅಚ್ಚರಿ ಎಂದರೆ ಇಂಥದ್ದೊಂದು ಅನುಮಾನ ನೀಗಿಸಬೇಕಾದ ಚುನಾವಣಾ ಆಯೋಗವೇ ಮೌನಕ್ಕೆ ಶರಣಾಗಿರುವುದು ವಿಪಕ್ಷಗಳ ಅನುಮಾನವನ್ನು ಹೆಚ್ಚಿಸಿದೆ.

ಇಷ್ಟೆಲ್ಲಾ ವಿಷಯಕ್ಕೆ ಕಾರಣವಾಗಿರುವುದು ಮೊದಲ 4 ಹಂತದ ಚುನಾವಣೆಯಲ್ಲಿ ಚಲಾವಣೆ ಆದ ಮತಗಳನ್ನು ‘ಕ್ವಿಂಟ್’ ವೆಬ್ ಸೈಟ್ ವಿಶ್ಲೇಷಣೆ ಒಳಪಡಿಸಿದಾಗ ಕಂಡುಬಂದ ಅಚ್ಚರಿಯ ಎಡವಟ್ಟು. ಲೋಕಸಭೆಗೆ ನಡೆದ ಮೊದಲ 4 ಹಂತದ ಚುನಾವಣೆಯಲ್ಲಿ 370 ಕ್ಷೇತ್ರಗಳಿಗೆ ಮತದಾನವಾಗಿತ್ತು. ಈ ಪೈಕಿ ಹಲವು ಕ್ಷೇತ್ರಗಳಲ್ಲಿ ಚಲಾವಣೆ ಆಗಿರುವ ಮತಕ್ಕೂ, ಇವಿಎಂಗಳಲ್ಲಿ ಕಂಡುಬಂದಿರುವ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ. 

220 ಕ್ಷೇತ್ರಗಳಲ್ಲಿ  ಹೆಚ್ಚುವರಿ ಮತದ ಲೆಕ್ಕ ಕಂಡುಬಂದಿದ್ದರೆ, ಉಳಿದ ಕಡೆ ಕಡಿಮೆ ಮತ ಚಲಾವಣೆಯ ಲೆಕ್ಕ ಸಿಕ್ಕಿದೆ. ಸಾವಿರಾರು ಸಂಖ್ಯೆಯಲ್ಲಿ ಮತಗಳ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ, ಆಯೋಗ ಈ ಕುರಿತು ಸೂಕ್ತ ಉತ್ತರ ನೀಡುವಲ್ಲಿ ವಿಫಲವಾಗಿದೆ. ಉದಾಹರಣೆಗೆ ತಮಿಳುನಾಡಿನ ಕಾಂಚೀಪುರಂನಲ್ಲಿ  12, 14,086 ಮತ ಚಲಾವಣೆ ಆಗಿತ್ತು, ಆದರೆ ಇವಿಎಂನಲ್ಲಿ 12,32,417 ಮತಗಳ ಲೆಕ್ಕ ಸಿಕ್ಕಿತ್ತು. ಅಂದರೆ 18,331 ಮತಗಳು ಹೆಚ್ಚು. ಇದೇ ರೀತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಲೆಕ್ಕಚಾರದಲ್ಲಿ ಗಂಭೀರ ಲೋಪ ಕಂಡುಬಂದಿದೆ. 

ಈ ಬಗ್ಗೆ ಕ್ವಿಂಟ್ ಚುನಾವಣಾ ಆಯೋಗದ ಬಳಿ ಸ್ಪಷ್ಟನೆ ಕೇಳಿತ್ತಾದರೂ, ಆಯೋಗದ ಕಡೆಯಿಂದ ಸ್ಪಷ್ಟ ಉತ್ತರ ಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!