ಶತ್ರು ಆಸ್ತಿ ಮಸೂದೆ ತಿದ್ದುಪಡಿಗೆ ಲೋಕಸಭೆಯಲ್ಲಿಂದು ಅನುಮೋದನೆ

Published : Mar 14, 2017, 11:41 AM ISTUpdated : Apr 11, 2018, 12:39 PM IST
ಶತ್ರು ಆಸ್ತಿ ಮಸೂದೆ ತಿದ್ದುಪಡಿಗೆ ಲೋಕಸಭೆಯಲ್ಲಿಂದು ಅನುಮೋದನೆ

ಸಾರಾಂಶ

ಶತ್ರು ಆಸ್ತಿ ಮಸೂದೆಗೆ (ಎನಿಮಿ ಪ್ರಾಪರ್ಟಿ ಬಿಲ್) ಸೂಚಿಸಿರುವ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿಂದು ಧ್ವನಿ ಮತದ ಮೂಲಕ ಅನುಮೋದನೆ ನೀಡಲಾಯಿತು.  ಇದರನ್ವಯ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ/ ಚೀನಾಗೆ ವಲಸೆ ಹೋದವರ ಭಾರತದ ಆಸ್ತಿ ಮೇಲೆ ಅವರ ಉತ್ತರಾಧಿಕಾರಿಗಳಿಗೆ ಯಾವುದೇ ಹಕ್ಕಿರುವುದಿಲ್ಲ.

ನವದೆಹಲಿ (ಮಾ.14): ಶತ್ರು ಆಸ್ತಿ ಮಸೂದೆಗೆ (ಎನಿಮಿ ಪ್ರಾಪರ್ಟಿ ಬಿಲ್) ಸೂಚಿಸಿರುವ ತಿದ್ದುಪಡಿಗಳಿಗೆ ಲೋಕಸಭೆಯಲ್ಲಿಂದು ಧ್ವನಿ ಮತದ ಮೂಲಕ ಅನುಮೋದನೆ ನೀಡಲಾಯಿತು.  ಇದರನ್ವಯ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನ/ ಚೀನಾಗೆ ವಲಸೆ ಹೋದವರ ಭಾರತದ ಆಸ್ತಿ ಮೇಲೆ ಅವರ ಉತ್ತರಾಧಿಕಾರಿಗಳಿಗೆ ಯಾವುದೇ ಹಕ್ಕಿರುವುದಿಲ್ಲ.

ಲೋಕಸಭೆಯಲ್ಲಿ ಈ ಮಸೂದೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು. ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜ್ಯಸಭೆ ಕೆಲವು ತಿದ್ದುಪಡಿಗಳನ್ನು ಸೂಚಿಸಿತು. ಆ ತಿದ್ದುಪಡಿಗಳಿಗೆ ಇಂದು ಕೆಳಮನೆ ಅನುಮೋದನೆ ನೀಡಿದೆ.

ಈ ಮಸೂದೆ ಪ್ರಕಾರ ಶತ್ರುಗಳ ಸಂಬಂಧಿಕರು ಅಥವಾ ಅವರ ಪರವಾಗಿ ಯಾರು ನೋಡಿಕೊಳ್ಳುತ್ತಿರುತ್ತಾರೋ ಇನ್ಮುಂದೆ ಅವರಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಅದನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಗಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ