ಸಿಬಿಐ ಲಾಕಪ್‌ನಲ್ಲಿ ಚಿದುಗೆ ಡ್ರಿಲ್| ವೈದ್ಯಕೀಯ ಪರೀಕ್ಷೆ ಬಳಿಕ ಸಿಬಿಐ ಕೇಂದ್ರ ಕಚೇರಿಗೆ| ರಾತ್ರಿ ಇಡೀ ವಿಚಾರಣೆ ನಡೆಸಿದ ಅಧಿಕಾರಿಗಳು| ಇದೇ ಕೇಸಲ್ಲಿ 23 ದಿನ ಜೈಲಲ್ಲಿದ್ದ ಕಾರ್ತಿ ಚಿದು| ಚಿದು ಉದ್ಘಾಟಿಸಿದ ಕಟ್ಟಡವೇ ಈಗ ಲಾಕಪ್!
ನವದೆಹಲಿ[ಆ.22]: ಭಾರಿ ಹೈಡ್ರಾಮಾ ಬಳಿಕ ಹಿರಿಯ ಕಾಂಗ್ರೆಸ್ಸಿಗ ಹಾಗೂ ಮಾಜಿ ಸಚಿವ ಪಿ. ಚಿದಂಬರಂ (73) ಅವರನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ರಾತ್ರಿಯೇ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಬಳಿಕ ಸಿಬಿಐ ಕಚೇರಿಗೆ ಒಯ್ದು ರಾತ್ರಿ ಇಡೀ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗುರುವಾರ ಅವರನ್ನು ದೆಹಲಿಯ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಚಿದಂಬರಂ ಅವರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಜಾಮೀನು ಸಿಕ್ಕರೆ ಚಿದಂಬರಂ ಅವರು ಬಿಡುಗಡೆಯಾಗಲಿದ್ದಾರೆ. ನ್ಯಾಯಾಲಯವೇನಾದರೂ ಸಿಬಿಐ ವಶಕ್ಕೆ ನೀಡಿದರೆ, ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ನ್ಯಾಯಾಂಗ ಬಂಧನ ವಿಧಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ.
undefined
ಸಿಬಿಐ ಕಚೇರಿ ಸುತ್ತ ಬಿಗಿ ಬಂದೋಬಸ್ತ್
ಚಿದಂಬರಂ ಬಂಧನ ಖಂಡಿಸಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐ ಕೇಂದ್ರ ಕಚೇರಿ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದಾಗ್ಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಫಿರಂಗಿಗಳನ್ನು ನಿಯೋಜಿಸಲಾಗಿದೆ.
ಮಾಜಿ ಗೃಹ ಸಚಿವ ಪಿ. ಚಿದಂಬರಂ ಬಂಧನ!: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ಕೇಸಲ್ಲಿ 23 ದಿನ ಜೈಲಲ್ಲಿದ್ದ ಕಾರ್ತಿ ಚಿದು
ಚಿದಂಬರಂ ಅವರ ಬಂಧನಕ್ಕೆ ಕಾರಣವಾಗಿರುವ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಅವರ ಪುತ್ರ ಹಾಗೂ ಹಾಲಿ ಸಂಸದ ಕಾರ್ತಿ ಕೂಡ ಆರೋಪಿ. ಕಳೆದ ವರ್ಷ 23 ದಿನ ಅವರು ಜೈಲುವಾಸ ಅನುಭವಿಸಿದ್ದರು. 2018ರ ಫೆ.28ರಂದು ಕಾರ್ತಿ ಅವರು ಬ್ರಿಟನ್ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಂತೆ ಅವರ ಬಂಧನವಾಗಿತ್ತು. ದೆಹಲಿ ಹೈಕೋರ್ಟ್ 2018ರ ಮಾ.23ರಂದು ಜಾಮೀನು ನೀಡಿತ್ತು. ಹೀಗಾಗಿ ಅವರು ಹೊರಬಂದಿದ್ದರು.
ಚಿದು ಉದ್ಘಾಟಿಸಿದ ಕಟ್ಟಡವೇ ಈಗ ಲಾಕಪ್!
ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐನ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು 2011ರಲ್ಲಿ ಗೃಹ ಸಚಿವರಾಗಿದ್ದಾಗ ಚಿದಂಬರಂ ಅವರು ಉದ್ಘಾಟಿಸಿದ್ದರು. ಇದೀಗ ಚಿದಂಬರಂ ಅವರನ್ನು ಬಂಧಿಸಿ ಅದೇ ಕಚೇರಿಯ ಲಾಕಪ್‌ನಲ್ಲಿ ಅಧಿಕಾರಿಗಳು ಇಟ್ಟಿದ್ದಾರೆ. ಕೇಂದ್ರ ಕಚೇರಿಯ ಕೆಳ ಅಂತಸ್ತಿನ 5ನೇ ಸಂಖ್ಯೆಯ ಗೆಸ್ಟ್‌ಹೌಸ್‌ನಲ್ಲಿ ಚಿದು ಅವರನ್ನು ಇಡಲಾಗಿದೆ. ತಾವೇ ಉದ್ಘಾಟಿಸಿದ ಕಟ್ಟಡದಲ್ಲಿ ಚಿದು ಬಂಧಿತರಾಗುವಂತಾಗಿ