
ಬೆಂಗಳೂರು(ಮಾ.12): ಇದು ವಿಚಿತ್ರ ಆದ್ರೂ ಸತ್ಯ. ಪ್ರೀತಿ, ಪ್ರೇಮದಪಾಶಕ್ಕೆ ಬಿದ್ದ ಇಬ್ಬರು ಹುಡುಗಿಯರು ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಾರೆ. ಈ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.
ಬಿಂದು ಅಲಿಯಾಸ್ ಮಾಲಿನಿ ಮತ್ತು ವೆರೋಣಿಕಾ ಅಲಿಯಾಸ್ ವರುಣಾ ಮನೆ ಬಿಟ್ಟ ಯುವತಿಯರು. ಮದ್ವೆಯಾದ ಬಳಿಕ ವೆರೋಣಿಕಾ ವರುಣ ಅಂತ ಹೆಸರು ಬದಲಿಸಿಕೊಂಡಿದ್ದಳು. ಶುಕ್ರವಾರ ಬೆಳಗ್ಗೆ ಚರ್ಚ್ಗೆ ಹೋಗುವುದಾಗಿ ಹೊರಟ ಹುಡುಗಿಯರು ವಾಪಾಸ್ ಮನೆಗೆ ಬಂದಿಲ್ಲ. ಈ ಹಿಂದೆ ಕೂಡ ಮದುವೆಯಾಗಿ ಮನೆಯಿಂದ ದೂರವಾಗಲು ಯತ್ನಿಸಿದ್ದರಂತೆ.ಪೊಷಕರು ಮಧ್ಯ ಪ್ರವೇಶದಿಂದ ಇದು ಸಾಧ್ಯವಾಗಿರಲಿಲ್ಲ.
ಶಾಲಾ ದಿನಗಳಿಂದಲೇ ಜೊತೆಯಲ್ಲಿದ್ದ ವರುಣ ಮತ್ತು ಬಿಂದು, ಪೋಷಕರಿಗೆ ಯಾವುದೇ ಅನುಮಾನ ಬರದಂತೆ ನಡೆದುಕೊಂಡಿದ್ದರ. ಆದರೆ, ಬರಬರುತ್ತಾ ವರುಣಾಳಲ್ಲಿ ದೇಹ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬಂದಿದ್ದವು. ಕ್ರಮೇಣ ಇಬ್ಬರ ನಡುವೆ ಅಶ್ಲೀಲ ಮೆಸೆಜ್ಗಳು ರವಾನೆಯಾಗುತಿದ್ವು. ಕಳೆದ ನವೆಂಬರ್ನಲ್ಲಿ ಇಬ್ಬರೂ ತಮಿಳುನಾಡಿನ ಮಧುರೈಗೆ ಓಡಿ ಹೋಗಿ ಅಲ್ಲಿನ ಮಂಗಳಮುಖಿಯರ ರಕ್ಷಣೆ ಪಡೆದಿದ್ದರು. ಈ ವಿಷಯ ಗೊತ್ತಾದ ಮೇಲೆ ಪೋಷಕರು ಮಧುರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಳಿಕ ಇವರಿಬ್ಬರು ಮಧುರೈನ ಕೋರ್ಟಿಗೆ ಶರಣಾಗಿ ಪ್ರೀತಿಸುತ್ತಿರುವುದಾಗಿ ಮತ್ತು ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದರು. ನಂತರ ಇಬ್ಬರನ್ನೂ ಮನವೊಲಿಸಿ ಬೆಂಗಳೂರಿಗೆ ಕರೆ ತಂದು ನಿಗಾ ಇಡಲಾಗಿತ್ತು. ಇಷ್ಟಾದರೂ ನಿನ್ನೆ ಬೆಳಗಿನ ಜಾವ ಮತ್ತೆ ಇಬ್ಬರು ವಿವೇಕನಗರದಿಂದ ಪರಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.