ಥಾಯ್ಲೆಂಡ್‌ನಿಂದ ವಿಮಾನದಲ್ಲಿ ಚಿರತೆ ಮರಿ ತಂದ!

By Web DeskFirst Published Feb 3, 2019, 9:26 AM IST
Highlights

ಥಾಯ್ಲೆಂಡ್‌ನಿಂದ ಭಾರತಕ್ಕೆ ಅಕ್ರಮವಾಗಿ ಚಿರತೆ ಮರಿಯನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಬಂದಿದ್ದ ವ್ಯಕ್ತಿಯೋರ್ವ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಿಂದ ಅಕ್ರಮವಾಗಿ ಚಿರತೆ ಮರಿ ಸಾಗಿಸಿದವನನ್ನು ಕಾಹಾ ಮೊಯಿದೀನ್‌ (45) ಎಂದು ಗುರುತಿಸಲಾಗಿದೆ. ಈತನ ನಾಗರಿಕತ್ವದ ಮಾಹಿತಿ ಲಭಿಸಿಲ್ಲ.

ಚೆನ್ನೈ (ಫೆ. 03): ಥಾಯ್ಲೆಂಡ್‌ನಿಂದ ಭಾರತಕ್ಕೆ ಅಕ್ರಮವಾಗಿ ಚಿರತೆ ಮರಿಯನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಬಂದಿದ್ದ ವ್ಯಕ್ತಿಯೋರ್ವ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಿಂದ ಅಕ್ರಮವಾಗಿ ಚಿರತೆ ಮರಿ ಸಾಗಿಸಿದವನನ್ನು ಕಾಹಾ ಮೊಯಿದೀನ್‌ (45) ಎಂದು ಗುರುತಿಸಲಾಗಿದೆ. ಈತನ ನಾಗರಿಕತ್ವದ ಮಾಹಿತಿ ಲಭಿಸಿಲ್ಲ.

ವಿಮಾನ ಇಳಿದು ಟರ್ಮಿನಲ್‌ಗೆ ಪ್ರವೇಶಿಸುತ್ತಿದ್ದಂತೆಯೇ ಮೊಯಿದೀನ್‌ನನ್ನು ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆಗೊಳಪಡಿಸಿದರು. ಈ ಸಂದರ್ಭದಲ್ಲಿ ಆತನ ಬ್ಯಾಗೇಜ್‌ನಿಂದ ವಿಚಿತ್ರ ಸದ್ದು ಬಂದಿದ್ದು, ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್‌ ಬಾಸ್ಕೆಟ್‌ನಲ್ಲಿ ಚಿರತೆ ಮರಿ ಇರುವುದು ಕಂಡುಬಂದಿದೆ.

ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಚಿರತೆ ಮರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ‘ಇದು ಹೆಣ್ಣು ಚಿರತೆ ಮರಿಯಾಗಿದ್ದು, ಅದರ ತೂಕ 1.1 ಕೇಜಿ ಮತ್ತು 54 ಸೆಂ.ಮೀ ಉದ್ದವಿದೆ. ಬ್ಯಾಗ್‌ನೊಳಗೆ ಇದ್ದನು ಇಟ್ಟಿದ್ದರಿಂದ ಅಸ್ವಸ್ಥಗೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಿ ಚೆನ್ನೈನ ಝೂಗೆ ಬಿಡಲಾಗುತ್ತದೆ’ ಎಂದು ಹೇಳಿದ್ದಾರೆ.

ಮೊಯಿದೀನ್‌ ಯಾಕೆ ಚಿರತೆ ಮರಿ ತಂದಿದ್ದ? ಇದು ಸ್ಮಗ್ಲಿಂಗ್‌ ದಂಧೆಯ ಭಾಗವೇ? ಬ್ಯಾಂಕಾಕ್‌ ಏರ್‌ಪೋರ್ಟ್‌ನಲ್ಲಿ ಅತಿ ಭದ್ರತೆಯನ್ನು ಭೇದಿಸಿ ಈತ ಹೇಗೆ ಚಿರತೆ ಮರಿ ತಂದ ಎಂಬುದರ ವಿಚಾರಣೆ ನಡೆದಿದೆ. ಈತನನ್ನು ವನ್ಯಜೀವಿ ವಿಭಾಗಕ್ಕೆ ಹೆಚ್ಚಿನ ವಿಚಾರಣೆಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

click me!