ED ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ: ಜೈಲು ಮುಕ್ತರಾಗಲು ಡಿಕೆಶಿ ಮುಂದಿರುವ ಆಯ್ಕೆಗಳೇನು?

By Web Desk  |  First Published Sep 25, 2019, 6:00 PM IST

ಇಂದು [ಬುಧವಾರ] ಇಡಿ ವಿಶೇಷ ನ್ಯಾಯಾಲಯವು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಇದ್ರಿಂದ ಡಿಕೆಶಿ ತಿಹಾರ್ ಜೈಲು ಮುಂದುವರಿದಿದೆ. ಇನ್ನು  ಜೈಲುಮುಕ್ತರಾಗಲು ಡಿಕೆಶಿ ಮುಂದಿರುವ ಕಾನೂನು ಆಯ್ಕೆಗಳೇನು ಎನ್ನುವ ಮಾಹಿತಿ ಈ ಕೆಳಗಿನಂತಿದೆ.
 


ನವದೆಹಲಿ, [ಸೆ.25]: ಅಕ್ರಮ ಆಸ್ತಿ ಪತ್ತೆ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಡಿಕೆ ಶಿಕುಮಾರ್ ಅವರ ಜಾಮೀನು ಅರ್ಜಿಯನ್ನು ಇಡಿ ವಿಶೇಷ ಕೋರ್ಟ್ ತಿರಸ್ಕರಿಸಿದೆ. 

"

Latest Videos

ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಅವರು ಡಿಕೆಶಿ ಜಾಮೀನು ಅರ್ಜಿ ವಜಾ ಮಾಡಿ ಇಂದು [ಬುಧವಾರ] ಆದೇಶ ಹೊರಡಿಸಿದರು. 

ಇದರಿಂದ ಡಿಕೆಶಿಗೆ ತಿಹಾರ್ ಜೈಲು ವಾಸ ಮುಂದುವರಿದಿದೆ. ಉಪಚುನಾವಣಾ ಕಣಕ್ಕೆ ಡಿಕೆಶಿ ಇಳಿಯುತ್ತಾರೆ ಎನ್ನುವ ನಿರೀಕ್ಷೆ ಮಾಡಿದ್ದ ರಾಜ್ಯ ಕಾಂಗ್ರೆಸ್ ಗೂ ಸಹ ಭಾರೀ ನಿರಾಸೆಯಾಗಿದೆ.

ಡಿಕೆಶಿಗಿಲ್ಲ ಜಾಮೀನು: ತಿಹಾರ್ ಜೈಲು ವಾಸ ಮುಂದುವರಿಕೆ

ಹಾಗಾದ್ರೆ ಡಿಕೆಶಿ ಮುಂದಿರುವ ಕಾನೂನು ಹೆಜ್ಜೆ ಏನು ಎನ್ನುವುದನ್ನು ನೋಡುವುದಾದರೆ, ದೆಹಲಿ ಹೈಕೋರ್ಟ್ ಮೊರೆ ಹೋಗುವುದೇ ಮುಂದಿನ ದಾರಿ. ಇಡಿ ಕೋರ್ಟ್ ಆದೇಶ ಪ್ರಶ್ನಿಸಿ ಡಿಕೆಶಿ ಪರ ವಕೀಲರು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಬಹದು.

ಬಳಿಕ ಹೈಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಲಿದೆ. ಒಂದು ವೇಳೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ರೆ ಮಾತ್ರ ಜೈಲುಮುಕ್ತಿ. ಇಲ್ಲವಾದಲ್ಲಿ  ಡಿಕೆಶಿಗೆ ತಿಹಾರ್ ಜೈಲೇ ಗತಿ.

ಡಿಕೆಶಿಗೆ ಮುಂದೇನು..?
ದೆಹಲಿ ಹೈಕೋರ್ಟ್ ಮೊರೆ ಹೋಗುವುದೇ ಮುಂದಿನ ದಾರಿ
ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಲು ಅವಕಾಶ
ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ರೆ ಮಾತ್ರ ಜೈಲುಮುಕ್ತಿ
ಜಾಮೀನು ಸಿಗುವವರೆಗೂ ತಿಹಾರ್ ಜೈಲೂಟವೇ ಡಿಕೆಶಿಗೆ ಗತಿ

click me!