ಬಿ ರಿಪೋರ್ಟ್ ಸಲ್ಲಿಸಿದ್ದ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯಗೆ ಭೂ ಕಂಟಕ?

By Web DeskFirst Published Jul 10, 2019, 11:32 PM IST
Highlights

ಒಂದು ಕಡೆ ದೋಸ್ತಿ ಸರ್ಕಾರ ಅಳಿವು ಉಳಿವಿನ ತೂಗುಯ್ಯಾಲೆಯಲ್ಲಿ ಇರುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ.

ಬೆಂಗಳೂರು/ ಮೈಸೂರು [ಜು. 10]  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಅಕ್ರಮ ಭೂ ಕಬಳಿಕೆ ಕೇಸ್ ಮತ್ತಷ್ಟು ಜಟಿಲವಾಗಿದೆ.  ದೂರುದಾರ ಗಂಗರಾಜು  ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮೈಸೂರು ಪೊಲೀಸರು ಬಿ ರಿಪೋರ್ಟ್ ಸಲ್ಲಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ  ದೂರು ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 14 ಮಂದಿ ಹೆಸರುಗಳ ಸೇರ್ಪಡೆಗೆ ದೂರುದಾರ ಮನವಿ ಮಾಡಿದ್ದಾರೆ. 1996 ರಿಂದ 1998 ಸಮಯದಲ್ಲಿ ಮೈಸೂರಿನಲ್ಲಿ ಕೆಲಸ ನಿರ್ವಹಿಸಿದ್ದ ಅಧಿಕಾರಿಗಳ ಹೆಸರು ಸೇರ್ಪಡೆಗೆ ಮನವಿ ಮಾಡಲಾಗಿದೆ. ಮಾಜಿ ಎಂಎಲ್ ಸಿ ಶಾಸಕ ಎಸ್.ಎ. ರಾಮದಾಸ್ ಹಾಗೂ ಗೊ.ಮಧುಸೂದನ್ ಹೆಸರು ಸೇರ್ಪಡೆಗೂ ವಿನಂತಿ ಮಾಡಲಾಗಿದೆ.

ಮನವಿ ಸ್ವೀಕರಿಸಿ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಹಿನಕಲ್ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ 30 ಗುಂಟೆ ಭೂಮಿ ಪಡೆದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕರಣ ಎದುರಿಸಿದ್ದರು. ಸರ್ವೇ ನಂಬರ್ 70/4 ರಲ್ಲಿನ ಮೂವತ್ತು ಗುಂಟೆ ಭೂಮಿ ಪಡೆದು ಕಾನೂನು ಬಾಹಿರವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

click me!