
ರಾಂಚಿ (ಡಿ.25): ಮೇವು ಹಗರಣದ ತೀರ್ಪಿನ ಬಳಿಕ ವಶಕ್ಕೆ ಪಡೆಯಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜೈಲಿನಲ್ಲಿ ಮೊದಲ ದಿನದ ರಾತ್ರಿ ನಿದ್ದೆಯಿಲ್ಲದೆ ಕಳೆದರು. ಬೆಳಗ್ಗೆ ಜೈಲಿನ ತರಕಾರಿ ತೋಟದ ಬಳಿ ಚಹಾ ಮತ್ತು ಬಿಸ್ಕಿಟ್ ಅನ್ನು ಉಪಹಾರವಾಗಿ ಸೇವಿಸಿದರು. ಭಾನುವಾರ ಯಾವುದೇ ವೀಕ್ಷಕರಿಗೆ ಅವಕಾಶ ಇಲ್ಲವಾದುದರಿಂದ, ಲಾಲುಗೆ ಯಾರೊಂದಿಗೂ ಭೇಟಿಯಾಗುವ ಅವಕಾಶ ನೀಡಲಾಗಿರಲಿಲ್ಲ.
ಸೋಮವಾರ ಬೆಳಗ್ಗೆ 8ರಿಂದ 12 ಗಂಟೆ ವರೆಗೆ ಅವರು ಜನರನ್ನು ಭೇಟಿಯಾಗಲು ಅವಕಾಶವಿದೆ. ಲಾಲು ವಿನಂತಿಸಿದಲ್ಲಿ ಸೊಳ್ಳೆ ಪರದೆ ನೀಡಬಹುದು, ಅವರ ಹಾಸಿಗೆ ಪಕ್ಕದಲ್ಲಿ ಒಂದು ಟಿವಿ ಸೆಟ್ ಹಾಕಿಸಿಕೊಳ್ಳಬಹುದು ಮತ್ತು ಒಂದು ಪತ್ರಿಕೆ ಓದಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.