ಕಾಂಗ್ರೆಸ್'ನಲ್ಲಿ ಶುರುವಾಯಿತು ಸೀರೆ ಪಾಲಿಟಿಕ್ಸ್ ! ಸತೀಶ್ ಜಾರಕಿಹೋಳಿ vs ಲಕ್ಷ್ಮಿಹೆಬ್ಬಾಳ್ಕರ್

Published : Aug 27, 2017, 05:19 PM ISTUpdated : Apr 11, 2018, 12:50 PM IST
ಕಾಂಗ್ರೆಸ್'ನಲ್ಲಿ ಶುರುವಾಯಿತು ಸೀರೆ ಪಾಲಿಟಿಕ್ಸ್ ! ಸತೀಶ್ ಜಾರಕಿಹೋಳಿ vs ಲಕ್ಷ್ಮಿಹೆಬ್ಬಾಳ್ಕರ್

ಸಾರಾಂಶ

ನೀವು ನೂರು ರೂಪಾಯಿಯ 20 ಸಾವಿರ ಸೀರೆಯನ್ನು ಹಂಚಿದರೆ ಜನರು ಮತ ಹಾಕಲ್ಲಾ. ನನ್ನಲ್ಲಿ ಎಲ್ಲವೂ ಇದೆ ನೀವು ನೂರು ರೂಪಾಯಿ ಸೀರೆ ಹಂಚಿದರೆ ನಾನು ಎರಡು ನೂರು ರೂಪಾಯಿ ಸೀರೆ ಹಂಚುತ್ತೇನೆ

ಬೆಳಗಾವಿಯ ಇಬ್ಬರು ಕಾಂಗ್ರೆಸ್ ಮುಖಂಡರ ನಡುವೆ ರಾಜಕೀಯ ಶುರುವಾಗಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಅದೇ ಜಿಲ್ಲೆಯ ಮತ್ತೊಬ್ಬ ಮುಖಂಡ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಬಹಿರಂಗ ಸಭೆಯಲ್ಲಿಯೇ ಪರೋಕ್ಷವಾಗಿ ಹರಿಹಾಯ್ದಿದ್ದಾರೆ

ಪಟ್ಟಣದಲ್ಲಿ ಗ್ರಾಮಾಂತರ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಒಬ್ಬ ನಾಯಕ ಬೆಂಗಳೂರಲ್ಲಿ ಒಬ್ಬ ನಾಯಕ. ಬೆಳಗಾವಿಯಲ್ಲಿ ಒಬ್ಬ ನಾಯಕನನ್ನು ಇಟ್ಟುಕೊಂಡು ರಾಜಕೀಯ ಮಾಡಿದಂತೆ ಈ ಸಾರಿ ರಾಜಕೀಯ ಮಾಡಲು ಆಗಲ್ಲಾ. ನೀವು ನೂರು ರೂಪಾಯಿಯ 20 ಸಾವಿರ ಸೀರೆಯನ್ನು ಹಂಚಿದರೆ ಜನರು ಮತ ಹಾಕಲ್ಲಾ. ನನ್ನಲ್ಲಿ ಎಲ್ಲವೂ ಇದೆ ನೀವು ನೂರು ರೂಪಾಯಿ ಸೀರೆ ಹಂಚಿದರೆ ನಾನು ಎರಡು ನೂರು ರೂಪಾಯಿ ಸೀರೆ ಹಂಚುತ್ತೇನೆ ನೋಡ್ತಾ ಇರಿ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸತೀಶ್ ಜಾರಕಿಹೋಳಿ ಟಾಂಗ್ ಕೊಟ್ಟರು.

ನನ್ನ ಕೆಲಸ ನೋಡಿ ಕೇಂದ್ರದಲ್ಲಿ ಎ.ಐ.ಸಿ.ಸಿ ಕಾರ್ಯದರ್ಶಿ ಹಾಗೂ  ರಾಜ್ಯ ಉಸ್ತುವಾರಿ ಸ್ಥಾನ ಕೊಟ್ಟಿದ್ದಾರೆ. ಅಲ್ಲಿಯೂ ಕೂಡಾ ಉತ್ತಮ ರೀತಿಯಾಗಿ ಕೆಲಸ ಮಾಡುತ್ತೇನೆ. ಬೆಳಗಾವಿಗೆ  ಹೆಸರು ತರುತ್ತೇನೆ. ಅಧಿಕಾರ ಶಾಶ್ವತವಾದುದಲ್ಲ ಜನರ ವಿಶ್ವಾಸ ಮುಖ್ಯ. ಕಳೆದ ಇಪ್ಪತ್ತು ವರ್ಷಗಳಿಂದ ಡಾ. ಅಂಬೇಡ್ಕರ್ ವಿಚಾರ ತತ್ವಗಳನ್ನು  ಸಿದ್ದಾಂತವನ್ನ ಹೇಳತ್ತಾ ಬಂದಿದ್ದೇನೆ. 800 ನೂರು ವರುಷದ ನಂತರ ಲಿಂಗಾಯತರು ಕಾಂಗ್ರಸ್ ಕಡೆ ಬಂದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಳೆದ 20 ವರ್ಷಗಳಿಂದ ಒಂದು ಲಕ್ಷ  ರೂಪಾಯಿಯನ್ನು ಅನಾಥಾಶ್ರಮಕ್ಕೆ ನೀಡುತ್ತಿದ್ದೇನೆ. ರಾಜಕೀಯ ಲಾಭಕ್ಕಾಗಿ ಈಗಾಲೇ ಸೀರೆ ಹಂಚಲು ಪ್ರವೃತ್ತಿ ಶುರುವಾಗಿದೆ . ಆದರೆ ನಮ್ಮ ಹೂಡಿಕೆ ಸಮಾಜದ ಮೇಲೆ ಇದೆ. ನಾವು ಇದುವರೆಗೆ ಅನಾಥರಿಗೆ ಹಂಚಿದ 20 ಲಕ್ಷ ರೂಪಾಯಿ ನೋಡಿದರೆ 20 ಸಾವಿರ ಸೀರೆ  ಹಂಚಿದಂತಾಗುತ್ತದೆ ಎಂದ ಖಾರವಾಗಿ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ ಪಬ್‌ಗೆ ಬಂದಿದ್ದ ಹುಡುಗಿ ಫೋನ್ ನಂಬರ್ ಕೇಳಿದ ಉಮೇಶ; ಕೊಡದಿದ್ದಕ್ಕೆ ಹಲ್ಲೆ!
ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಬರ್ಬರ ಹತ್ಯೆ, ಐವರು ಅರೆಸ್ಟ್, ಕೊಲೆಗೆ ಸ್ಕೆಚ್ ಹೇಗೆ ನಡೆದಿತ್ತು?