ಅನಾರೋಗ್ಯ ಪೀಡಿತ ಗೋವು ಸಾಕುವ ವಿದೇಶಿ ಮಹಿಳೆ ಪದ್ಮ ಪ್ರಶಸ್ತಿಗೆ ಆಯ್ಕೆ

By Web DeskFirst Published Jan 26, 2019, 3:47 PM IST
Highlights

ಈ ಬಾರಿ ಪದ್ಮ ಪ್ರಶಸ್ತಿಗೆ ಅನೇಕ ವಿದೇಶಿಗರು ಆಯ್ಕೆಯಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅನಾಥ ಗೋವುಗಳನ್ನು ನೋಡಿಕೊಳ್ಳುವ ಜರ್ಮನಿಯ ಮಹಿಳೆ, ಅಮೆರಿಕಾದ 100 ವರ್ಷ ವಯಸ್ಸಿನ ಯೋಗ ಶಿಕ್ಷಕಿಯೂ ಸೇರಿದ್ದಾರೆ. 

ನವದೆಹಲಿ : ಕೇಂದ್ರ ಸರ್ಕಾರದಿಂದ ಕೊಡಮಾಡುವ  ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಈ ಬಾರಿ ಅನೇಕ ವಿದೇಶಿಗರಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅನಾರೋಗ್ಯ ಪೀಡಿತ ಹಸುಗಳನ್ನು ನೋಡಿಕೊಳ್ಳುತ್ತಿದ್ದ  ಜರ್ಮನಿ ಮಹಿಳೆಯೊಬ್ಬರಿದ್ದಾರೆ. 

ಫ್ರಿಡೆರಿಕಾ ಇರ್ನಿಯಾ ಎನ್ನುವ ಈಕೆ  ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈಕೆ ಸುದೇವಿ ಮಾತಾ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ. ಕಳೆದ 2 ದಶಕಗಳಿಂದಲೂ ಕೂಡ ಈಕೆ ಅನಾಥ ಹಾಗೂ ಅನಾರೋಗ್ಯ ಪೀಡಿತವಾದ ಹಸುಗಳನ್ನು ತಾಯಿಯಷ್ಟೇ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. 

ಉತ್ತರ ಪ್ರದೇಶದ ಮಥುರಾದಲ್ಲಿ  ತಮ್ಮದೇ ಆದ ಗೋಶಾಲೆಯನ್ನು ನಿರ್ಮಾಣ ಮಾಡಿ ಹಸುಗಳ ಸಾಕಣೆ ಮಾಡುತ್ತಿದ್ದಾರೆ. 

ಇಂತಹ ಹಸುಗಳಿಗಾಗಿಯೇ  ತಿಂಗಳಿಗೆ 22 ಲಕ್ಷದಷ್ಟು ವೆಚ್ಚ ಮಾಡುತ್ತಾರೆ. ಆಹಾರ, ನೀರು ಸೇರಿದಂತೆ ಗೋವುಗಳನ್ನು ನೋಡಿಕೊಳ್ಳುವವರಿಗೆ ವೇತನ  ಸೇರಿದಂತೆ ವಿವಿಧ ರೀತಿಯ ವೆಚ್ಚಗಳಿಗೆ ಅತ್ಯಧಿಕ ಹಣ ವೆಚ್ಚ ಮಾಡಲಾಗುತ್ತದೆ. 

ಅಲ್ಲದೇ ಅಮೆರಿಕಾದ 100 ವರ್ಷ ವಯಸ್ಸಿನ ಯೋಗ ಶಿಕ್ಷಕಿ ಎಜೆಲೆಸ್ ಯೋಗಿನಿ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

click me!