ಯುವಕ ಚುಡಾಯಿಸಿದನೆಂದು ಪೊಲೀಸ್ ಠಾಣೆ ಮುಂದೆ ಬಟ್ಟೆ ಬಿಚ್ಚಿ ನಗ್ನಳಾದ ಯುವತಿ!

Published : Jan 21, 2017, 05:20 AM ISTUpdated : Apr 11, 2018, 12:58 PM IST
ಯುವಕ ಚುಡಾಯಿಸಿದನೆಂದು ಪೊಲೀಸ್ ಠಾಣೆ ಮುಂದೆ ಬಟ್ಟೆ ಬಿಚ್ಚಿ ನಗ್ನಳಾದ ಯುವತಿ!

ಸಾರಾಂಶ

'ಪ್ರತಿದಿನ ಈಕೆ ಸ್ನಾನ ಮಾಡುತ್ತಿದ್ದ ವೇಳೆ ನೆರೆ ಮನೆಯ ಯುವಕ ಸಂದಿಯಿಂದ ಇಣುಕುವುದಲ್ಲದೆ, ಚುಡಾಯಿಸುತ್ತಿದ್ದ. ಈತನ ವರ್ತನೆ ಕಂಡು ಹಲವಾರು ಬಾರಿ ಈಕೆ ಎಚ್ಚರಿಕೆ ನೀಡಿದ್ದಳಾದರೂ ಯುವಕನಿಗೆ ಬುದ್ದೀ ಬಂದಿರಲಿಲ್ಲ. ಇವೆಲ್ಲದರಿಂದ ಬೇಸತ್ತ ಯುವತಿ ಕೊನೆಯ ಪ್ರಯತ್ನವೆಂಬಂತೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ಠಾಣೆಯ ಗೇಟ್ ಎದುರೇ ಯುವಕನ ತಂದೆಯನ್ನು ನೋಡಿ ಯುವಕನ ನಡವಳಿಕೆಯ ಕುರಿತು ತಿಳಿಸಿದ್ದಾಳೆ. ಆದರೆ ಆತನ ತಂದೆ ಮಾತ್ರ ಮಗನನ್ನು ಸಮರ್ಥಿಸಿಕೊಂಡಿದ್ದು, ಇಬ್ಬರ ನಡುವೆ ಜಗಳವೇರ್ಪಟ್ಟಿದೆ. ಯುವಕನ ತಂದೆಯ ಪ್ರತೊಇಕ್ರಿಯೆಯಿಂದ ಬೇಸತ್ತ ಯುವತಿ ತನ್ನ ಬಟ್ಟೆ ಬಿಚ್ಚಿದ್ದಾಳೆ' ಎಂದು ತಿಳಿದು ಬಂದಿದೆ.

ಉತ್ತರಪ್ರದೇಶ(ಜ.15): ಉತ್ತರಪ್ರದೇಶದ ಘೋರಕ್ಪುರದಲ್ಲಿ ಯುವಕನೊಬ್ಬ ಚುಡಾಯಿಸಿದಕ್ಕೆ ಕುಪಿತಳಾದ ಯುವತಿ ಪೊಲೀಸ್ ಠಾಣೆ ಎದುರೇ ಬಟ್ಟೆ ಬಿಚ್ಚಿ ನಿಂತ ಘಟನೆ ಬೆಳಕಿಗೆ ಬಂದಿದೆ.

ಲಭ್ಯವಾದ ಮಾಹಿತಿ ಅನ್ವಯ 'ಪ್ರತಿದಿನ ಈಕೆ ಸ್ನಾನ ಮಾಡುತ್ತಿದ್ದ ವೇಳೆ ನೆರೆ ಮನೆಯ ಯುವಕ ಸಂದಿಯಿಂದ ಇಣುಕುವುದಲ್ಲದೆ, ಚುಡಾಯಿಸುತ್ತಿದ್ದ. ಈತನ ವರ್ತನೆ ಕಂಡು ಹಲವಾರು ಬಾರಿ ಈಕೆ ಎಚ್ಚರಿಕೆ ನೀಡಿದ್ದಳಾದರೂ ಯುವಕನಿಗೆ ಬುದ್ದೀ ಬಂದಿರಲಿಲ್ಲ. ಇವೆಲ್ಲದರಿಂದ ಬೇಸತ್ತ ಯುವತಿ ಕೊನೆಯ ಪ್ರಯತ್ನವೆಂಬಂತೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ಠಾಣೆಯ ಗೇಟ್ ಎದುರೇ ಯುವಕನ ತಂದೆಯನ್ನು ನೋಡಿ ಯುವಕನ ನಡವಳಿಕೆಯ ಕುರಿತು ತಿಳಿಸಿದ್ದಾಳೆ. ಆದರೆ ಆತನ ತಂದೆ ಮಾತ್ರ ಮಗನನ್ನು ಸಮರ್ಥಿಸಿಕೊಂಡಿದ್ದು, ಇಬ್ಬರ ನಡುವೆ ಜಗಳವೇರ್ಪಟ್ಟಿದೆ. ಯುವಕನ ತಂದೆಯ ಪ್ರತೊಇಕ್ರಿಯೆಯಿಂದ ಬೇಸತ್ತ ಯುವತಿ ತನ್ನ ಬಟ್ಟೆ ಬಿಚ್ಚಿದ್ದಾಳೆ' ಎಂದು ತಿಳಿದು ಬಂದಿದೆ.

ಠಾಣೆ ಎದುರು ನಡೆಯುತ್ತಿದ್ದ ಈ ಪ್ರಸಂಗ ಕಂಡ ಪೊಲೀಸರು ಕೂಡಲೇ ಹೊರಬಂದು ಯುವತಿಗೆ ಬಟ್ಟೆ ತೊಡಿಸಿದ್ದಾರೆ. ಸದ್ಯ ಪೊಲೀಸರು ಯುವಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌