
ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಂ ಸಿಂಗ್‌ನ ಮುಂದಿನ ನಡೆ ಏನು? ಆತನ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಯಾರು ವಾದಿಸಲಿದ್ದಾರೆ ಎಂಬ ಕುತೂಹಲ ಸಾಮಾನ್ಯ. ಆದರೆ ಪಶ್ಚಿಮ ಬಂಗಾಳದ ಬಿಜೆಪಿ ಸಂವಾದ ಪ್ರಭಾರಿ ಬನಿಬ್ರತೊ ಪ್ರಕಾರ, ರಾಮ್ ರಹೀಂ ಪರವಾಗಿ ಸುಪ್ರೀಂನಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಾದಿಸಲಿದ್ದಾರೆ ಎಂಬುದು ಖಚಿತವಾಗಿದೆಯಂತೆ.
ಈ ಕುರಿತು, ಬನಿಬ್ರತೊ ಮಾಡಿರುವ ಟ್ವೀಟ್ ವೈರಲ್ ಆಗಿದೆ. ‘ಖಚಿತವಾಗಿದೆ... ಅತ್ಯಾಚಾರಿ ರಾಮ್ ರಹೀಂ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಕಪಿಲ್ ಸಿಬಲ್ ವಾದಿಸಲಿದ್ದಾರೆ. ಎಲ್ಲ ಕ್ರಿಮಿನಲ್‌ಗಳು ಸಿಬಲ್ ಸಂಪರ್ಕದಲ್ಲಿದ್ದಾರೆ’ ಎಂದು ಬನಿಬ್ರತೊ ಟ್ವೀಟ್ ಮಾಡಿದ್ದರು. ಅಲ್ಲದೆ, ರಾಮ್ ರಹೀಂನನ್ನು ಕಪಿಲ್ ಸಿಬಲ್ ಭೇಟಿಯಾಗಿ, ಸಂತೋಷದಿಂದ ಕೈಕುಲುಕುವ ರೀತಿಯ ಫೋಟೋವನ್ನೂ ಅವರು ಟ್ವೀಟ್ ಮಾಡಿದ್ದರು. ಮೇಲ್ನೋಟಕ್ಕೆ ಫೋಟೋದಲ್ಲಿ ಕಪಿಲ್ ಸಿಬಲ್ ಅವರೇ ರಾಮ್ ರಹೀಂರನ್ನು ಭೇಟಿಯಾಗಿ ಕೈಕುಲುಕುವಂತೆ ಕಾಣುತ್ತದೆ.
ಆದರೆ ಫೋಟೋದ ನೈಜತೆಯನ್ನು ಪರಿಶೀಲಿಸಿದಾಗ, ಈ ಫೋಟೋಗೂ ಸಿಬಲ್‌ಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ರಾಮ್ ರಹೀಂ ಪರವಾಗಿ ಕಪಿಲ್ ಸಿಬಲ್ ವಾದಿಸುವ ಸುದ್ದಿ ಎಲ್ಲೂ ಬಂದಿಲ್ಲ. ಫೋಟೋದಲ್ಲಿರುವುದು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್. ಬಾಲಿವುಡ್ ಹಂಗಾಮ ವೆಬ್‌ವಾಹಿನಿಯಲ್ಲಿ ಪ್ರಕಟವಾಗಿ
ರುವ ಈ ಫೋಟೋ, ರಾಮ್ ರಹೀಂನ ‘ಎಂಎಸ್‌ಜಿ2’ ಸಿನೆಮಾ ಬಿಡುಗಡೆ ಸಂದರ್ಭ, ಬಾಲಿವುಡ್ ಮಂದಿ ಆತನನ್ನು ಅಭಿನಂದಿಸಿದ ಸುದ್ದಿಗೆ ಸಂಬಂಧಿಸಿದುದಾಗಿದೆ. ಫೋಟೋದ ಈ ಆ್ಯಂಗಲ್ ನಲ್ಲಿ ಮಹೇಶ್ ಭಟ್, ಕಪಿಲ್ ಸಿಬಲ್‌ರ ಹೋಲಿಕೆಯಂತೆ ಕಂಡು ಬಂದರೂ, ಆ ಫೋಟೋ ಅವರದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಬನಿಬ್ರತೊ ಟ್ವೀಟ್ ಮಾಡಿರುವ ಈ ಫೋಟೊ ಸುಳ್ಳು ಎಂದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.