ರೇಪಿಸ್ಟ್ ಕೊಂದರೆ ಶಿಕ್ಷಾರ್ಹವಲ್ಲ ಎಂದು ಮೋದಿ ಸರ್ಕಾರ ಕಾನೂನು ತಂದಿದಿಯೆ ?

First Published May 1, 2018, 12:57 PM IST
Highlights

ಜ.29ರಿಂದ ಏ. 6ರವರೆಗೆ ಅಧಿವೇಶನ ನಡೆದರೂ ಅಲ್ಲಿ ಇಂಥ ಯಾವುದೇ ಮಸೂದೆಯನ್ನು ಅಂಗೀಕರಿಸಿಲ್ಲ. ‘ಐಪಿಸಿ ಸೆಕ್ಷನ್ 233’ ಅತ್ಯಾಚಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳಿಗೆ ಸಮೀಪದ ಸಂಬಂಧವನ್ನೂ ಹೊಂದಿಲ್ಲ. ಇದು ನಕಲಿ ನಾಣ್ಯಗಳು ಅಥವಾ ನಾಣ್ಯಗಳ ಅಪಮೌಲ್ಯಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗಿದೆ. 

ಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳ ಬಳಿಕ ‘ಮೋದಿ ಸರ್ಕಾರವು ಸೆಕ್ಷನ್ 233ರ ಅಡಿಯಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರಿಯ ಹತ್ಯೆ ಮಾಡುವ
ಹಕ್ಕು ನೀಡಿದೆ’ ಎಂಬಂತಹ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ನಿಜಕ್ಕೂ ಮೋದಿ ಸರ್ಕಾರ ಇಂಥದ್ದೊಂದು ಮಸೂದೆಯನ್ನು ಅನುಮೋದಿಸಿದೆಯೇ ಎಂದು ಹುಡುಕ ಹೊರಟಾಗ ಅದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.
ವಾಸ್ತವವೆಂದರೆ, ಜ.29ರಿಂದ ಏ. 6ರವರೆಗೆ ಅಧಿವೇಶನ ನಡೆದರೂ ಅಲ್ಲಿ ಇಂಥ ಯಾವುದೇ ಮಸೂದೆಯನ್ನು ಅಂಗೀಕರಿಸಿಲ್ಲ. ‘ಐಪಿಸಿ ಸೆಕ್ಷನ್ 233’ ಅತ್ಯಾಚಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳಿಗೆ ಸಮೀಪದ ಸಂಬಂಧವನ್ನೂ ಹೊಂದಿಲ್ಲ. ಇದು ನಕಲಿ ನಾಣ್ಯಗಳು ಅಥವಾ ನಾಣ್ಯಗಳ ಅಪಮೌಲ್ಯಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗಿದೆ. ಇದಕ್ಕೆ ಮೂರು ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಅಲ್ಲದೆ ಭಾರತದ ಯಾವುದೇ ಕಾನೂನು ಸಹ ಅತ್ಯಾಚಾರಿಯನ್ನು ಕೊಲ್ಲುವ ಹಕ್ಕನ್ನು ಸಂತ್ರಸ್ತೆಗೆ ನೀಡಿಲ್ಲ. 
ಆದರೆ ಆತ್ಮರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಸೆಕ್ಷನ್ 96-106ರವರೆಗೆ ಇವೆ. ಇದು ಆತ್ಮರಕ್ಷಣೆಯ ಹಕ್ಕನ್ನು ವ್ಯಾಖ್ಯಾನಿಸುತ್ತದೆ. ಆದರೆ ಎಲ್ಲಿಯೂ ಹತ್ಯೆಯನ್ನು ಸಮರ್ಥಿಸುವುದಿಲ್ಲ. ಒಂದು ವೇಳೆ ವ್ಯಕ್ತಿಯ ಅಪಹರಣ, ಅತ್ಯಾಚಾರ, ಅಸಮ್ಮತಿಯ ಸಂಭೋಗಗಳಂಥ ಸಂದರ್ಭದಲ್ಲಿ ಸಂತ್ರಸ್ತರು ಪ್ರತಿ ಹಲ್ಲೆ ಮಾಡಿದಾಗ ಆ ವ್ಯಕ್ತಿ ಮೃತಪಟ್ಟರೆ ಹೋದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು ಸೆಕ್ಷನ್ 100 ಹೇಳುತ್ತದೆ. ಈ ಕಾನೂನು ಪ್ರಾಣಾಂತಿಕ ಸಂದರ್ಭಗಳಲ್ಲಿ ವೈಯಕ್ತಿಕ ಸುರಕ್ಷೆಯನ್ನು ಎತ್ತಿ ಹಿಡಿಯುತ್ತದೆ. ಆದರೆ ಇದು ಕೇವಲ ಅತ್ಯಾಚಾರ ಸಂತ್ರಸ್ತೆಗೆ ನೀಡಿರುವ ಸವಲತ್ತು ಅಲ್ಲ.

(ಕನ್ನಡಪ್ರಭ ವೈರಲ್ ಚೆಕ್ ಅಂಕಣ)

click me!