
ಕೊಪ್ಪಳ (ನ.21): ಐತಿಹಾಸಿಕ ದೇವಸ್ಥಾನದ ಆರ್ಚಕನ ರಾಸಲೀಲೆ ಜಗಜ್ಜಾಹಿರಾಗಿದೆ. ಆನೇಗುಂದಿ ಆಂಜನಾದ್ರಿ ಪರ್ವತದ ಅರ್ಚಕನಾಗಿರುವ ಬಾಬಾ ವಿದ್ಯಾದಾಸನ ಕಾಮದಾಟ ವಿಡಿಯೋ ವೈರಲ್ ಆಗಿದೆ.
ಮಹಿಳೆ ಜತೆ ಅರ್ಚಕನ ಸರಸ ಸಲ್ಲಾಪದ ವಿಡಿಯೋ ಲೀಕ್ ಆಗಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಆರ್ಚಕ ಬಾಬಾ ವಿರುದ್ಧ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ವಿದ್ಯಾದಾಸನನ್ನು ತೆಗೆದು ಹಾಕಲು ಟ್ರಸ್ಟ್ ನೋಟೀಸ್ ನೀಡಿದೆ.
ಇದಕ್ಕೆ ಅಂಜನಾದ್ರಿ ಪರ್ವತದ ವಿದ್ಯಾದಾಸ್ ಬಾಬಾ ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳು. ನನ್ನ ವಿರುದ್ಧ ಕೆಲವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕೆಲವರು ಅಂಜನಾದ್ರಿ ಪರ್ವತದ ಆದಾಯದ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ನನಗೆ ಧಮಕಿ ಹಾಕುತ್ತಿದ್ದಾರೆ. ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಅಜಿತ್ ಎನ್ನುವ ಯುವಕ ನನಗೆ ಹಣದ ಬೇಡಿಕೆ ಇಟ್ಟಿದ್ದ. ಹೈಟೆಕ್ ತಂತ್ರಜ್ಞಾನದ ಮೂಲಕ ನನ್ನ ಫೋಟೋ ಬೆತ್ತಲೆ ಮಾಡಲಾಗಿದೆ. ಫೋಟೋದಲ್ಲಿ ಕೆಲಸ ಮಾಡುವ ಮಹಿಳೆ ನಮ್ಮ ದೇವಸ್ಥಾನದಲ್ಲಿ ಕೆಲಸ ಮಾಡುತ್ತಾಳೆ. ಆಕೆಯ ಜೊತೆಗೆ ಇತರ ಐದು ಜನ ಮಹಳೆಯರು ಕೆಲಸ ಮಾಡುತ್ತಾರೆ. ಆಕೆಯ ಜೊತೆ ನನ್ನದು ಯಾವುದೇ ಸಂಬಂಧ ಇಲ್ಲ. ನನ್ನನ್ನು ಅಲ್ಲಿಂದ ಬಿಡಿಸಬೇಕು ಎಂದು ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಮಂದಿನ ತಿಂಗಳು ನಡೆಯುವ ಸಾಧು-ಸಂತರ ಸಮಾವೇಶ ಮಾಡಲು ತಯಾರಿ ಮಾಡಿದ್ದೇನೆ. ಇದರ ಶ್ರೇಯಸ್ಸು ನನಗೆ ಬರುತ್ತದೆ ಎಂದು ಹೇಳಿ ಈ ರೀತಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನಹಾನಿ ಪ್ರಕರಣ ದಾಖಲು ಮಾಡುತ್ತೇನೆ ಎಂದು ಬಾಬಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.