ಈ ಚೆಂದದ ಹುಡುಗಿ ಬೆಳಗ್ಗೆ ಎದ್ದರೆ ಸ್ಮಶಾನಕ್ಕೆ ಹೋಗ್ತಾಳೆ..!

Published : Jan 24, 2017, 04:25 AM ISTUpdated : Apr 11, 2018, 12:41 PM IST
ಈ ಚೆಂದದ ಹುಡುಗಿ ಬೆಳಗ್ಗೆ ಎದ್ದರೆ ಸ್ಮಶಾನಕ್ಕೆ ಹೋಗ್ತಾಳೆ..!

ಸಾರಾಂಶ

ಯಾವುದೇ ಧರ್ಮ ಮತ್ತು ಜಾತಿಯವರಿದ್ದರೂ ಸರಿ. ಫೋನ್ ಮತ್ತು ವೆಬ್`ಸೈಟ್ ಮೂಲಕ ಸಂಪರ್ಕಿಸಿ ಅಂತ್ಯಸಂಸ್ಕಾರದ ಸೇವೆ ಪಡೆಯಬಹುದು. ಭಾರತದಂತಹ ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ, ನೂರು ಕೋಟಿ ಮೀರಿದ ಜನಸಂಖ್ಯೆ ಇರುವ ಸಮಾಜದಲ್ಲಿ ಇಂಥದ್ದೊಂದು ಸೇವೆ ಅತ್ಯಂತ ಅವಶ್ಯಕವೆಂದು ಯೋಚಿಸಿದ ಸ್ವಾತಿ ರೆಡ್ಡಿ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಮೊದಮೊದಲು  ಈ ಯತ್ನಕ್ಕೆ ಅಷ್ಟಾಗಿ ಬೆಂಬಲ ಸಿಗದಿದ್ದರೂ ಇದೀಗ ಜನಮೆಚ್ಚುಗೆ ಗಳಿಸಿದೆ ಅಂತಾರೆ ಸಂಸ್ಥಾಪಕರು.

ಕೋಲ್ಕತ್ತಾ(ಜ.24): ಸೃಜನಶೀಲತೆಗೆ ಮಿತಿಯೇ ಇಲ್ಲ. ಅದು ಅವರವರ ಬೌದ್ಧಿಕ, ವೈಚಾರಿಕ ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಮದುವೆ, ನಿಶ್ಚಿತಾರ್ಥ ಮುಂತಾದ ಕಾರ್ಯಕ್ರಮಗಳಿಗೆ ಇವೆಂಟ್ ಮ್ಯಾನೇಜ್`ಮೆಂಟ್ ಮಾಡುವುದನ್ನ ನೋಡಿದ್ದೀರಿ. ಕೋಲ್ಕತ್ತಾದ ಮಾಜಿ ಸಾಫ್ಟ್`ವೇರ್ ಇಂಜಿನಿಯರ್ ಸ್ವಾತಿ ರೆಡ್ಡಿ ಅಂತ್ಯಸಂಸ್ಕಾರದ ಸೇವೆ ಒದಗಿಸಲು ಅಂಥ್ಯೇಸ್ಟಿ ಫೂನರಲ್ ಸರ್ವೀಸ್ ಎಂಬ ಹೊಸ ಸಂಸ್ಥೆಯನ್ನೇ ತೆರೆದಿದ್ದಾರೆ. ರಿಯಾಯಿತಿ ದರದಲ್ಲಿ ಅಂತ್ಯಸಂಸ್ಕಾರದಿಂದ ತಿಥಿವರೆಗೆ ಎಲ್ಲ ಪ್ರಕ್ರಿಯೆಗಳನ್ನ ಇವರೇ ನಡೆಸಿಕೊಡುತ್ತಾರೆ. ಸಾವಿನಲ್ಲಿ ಸಿಗಬೇಕಾದ ೆಲ್ಲ ರೀತಿಯ ಗೌರವ ಒದಗಿಸಿಕೊಡುತ್ತಾರೆ.  ಇದಕ್ಕಾಗಿ 5 ಸದಸ್ಯರ ತಂಡ ಕಟ್ಟಿಕೊಂಡಿದ್ದಾರೆ.

ಯಾವುದೇ ಧರ್ಮ ಮತ್ತು ಜಾತಿಯವರಿದ್ದರೂ ಸರಿ. ಫೋನ್ ಮತ್ತು ವೆಬ್`ಸೈಟ್ ಮೂಲಕ ಸಂಪರ್ಕಿಸಿ ಅಂತ್ಯಸಂಸ್ಕಾರದ ಸೇವೆ ಪಡೆಯಬಹುದು. ಭಾರತದಂತಹ ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ, ನೂರು ಕೋಟಿ ಮೀರಿದ ಜನಸಂಖ್ಯೆ ಇರುವ ಸಮಾಜದಲ್ಲಿ ಇಂಥದ್ದೊಂದು ಸೇವೆ ಅತ್ಯಂತ ಅವಶ್ಯಕವೆಂದು ಯೋಚಿಸಿದ ಸ್ವಾತಿ ರೆಡ್ಡಿ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಮೊದಮೊದಲು  ಈ ಯತ್ನಕ್ಕೆ ಅಷ್ಟಾಗಿ ಬೆಂಬಲ ಸಿಗದಿದ್ದರೂ ಇದೀಗ ಜನಮೆಚ್ಚುಗೆ ಗಳಿಸಿದೆ ಅಂತಾರೆ ಸಂಸ್ಥಾಪಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಪಿಕ್‌ನಿಕ್ ಹೊರಟ ಶಾಲಾ ವಿದ್ಯಾರ್ಥಿಗಳ ಬಸ್ ಅಪಘಾತ, ಹಲವರಿಗೆ ಗಾಯ
ವರ್ಷಾಂತ್ಯ, ಹೊಸವರ್ಷದ ಸಂಭ್ರಮ ಹಾಳು ಮಾಡುವ ಘೋರ ದುರಂತಗಳು, ಡಿಸೆಂಬರ್‌-ಜನವರಿಯಲ್ಲೇ ಅಪಘಾತ ಆಗೋದ್ಯಾಕೆ?