
ಕಣ್ಣೂರು(ಮೇ 26): ಕೇರಳದ ಕಮ್ಯೂನಿಸ್ಟ್ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಅವರು ಭಾರತೀಯ ಸೇನೆಯನ್ನು ಅವಮಾನಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಭಾರತೀಯ ಸೈನಿಕರನ್ನು ರೇಪಿಸ್ಟ್'ಗಳು ಹಾಗೂ ಅಪಹರಣಕಾರರೆಂದು ಸಿಪಿಎಂ ಪಕ್ಷದ ಕೇರಳ ಘಟಕದ ಕಾರ್ಯದರ್ಶಿಯೂ ಆದ ಬಾಲಕೃಷ್ಣನ್ ಬಣ್ಣಿಸಿದ್ದಾರೆ. ಭಾರತೀಯ ಸೇನೆ ಏನು ಬೇಕಾದರೂ ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಸಿಪಿಎಂ ಮುಖಂಡರು ಟೀಕಿಸಿದ್ದಾರೆ.
ಭಾಷಣವೊಂದರಲ್ಲಿ ಬಾಲಕೃಷ್ಣನ್, "ಸೇನೆಗೆ ಪರಮಾಧಿಕಾರ ಕೊಟ್ಟರೆ ಅದು ಯಾರಿಗೆ ಏನು ಬೇಕಾದರೂ ಮಾಡುತ್ತದೆ. ಸೇನೆಯು ಸ್ತ್ರೀಯರನ್ನು ಅಪಹರಿಸಿ ರೇಪ್ ಮಾಡುತ್ತದೆ," ಎಂದು ಹೇಳುತ್ತಿರುವುದು ವರದಿಯಾಗಿದೆ. ಮಾಧ್ಯಮಗಳಲ್ಲಿ ಅವರ ಭಾಷಣದ ಕೆಲ ತುಣುಕುಗಳು ಇಂದು ಪ್ರಸಾರವಾಗಿವೆ.
"ಕಣ್ಣೂರಿಗೆ ಸೇನೆಯನ್ನು ತಂದಿದ್ದೇ ಆದಲ್ಲಿ ಸೇನೆ ಮತ್ತು ಜನರ ನಡುವೆ ಘರ್ಷಣೆಯಾಗುತ್ತದೆ. ನಾಲ್ಕು ಜನ ಒಟ್ಟಿಗೆ ನಿಂತಿರುವುದು ಸೇನೆಯ ಕಣ್ಣಿಗೆ ಬಿದ್ದರೆ ಅವರನ್ನ ಗುಂಡಿಟ್ಟು ಕೊಂದೇ ಬಿಡುತ್ತದೆ. ಯಾರಿಗೂ ಕೂಡ ಅವರನ್ನ ಪ್ರಶ್ನಿಸುವ ಅಧಿಕಾರವಿಲ್ಲ. ಸೇನೆ ಎಲ್ಲೆಲ್ಲಿದೆಯೋ ಆ ರಾಜ್ಯದಲ್ಲೆಲ್ಲಾ ಇದೇ ಸ್ಥಿತಿ ಇದೆ," ಎಂದು ಕೊಡಿಯೇರಿ ಬಾಲಕೃಷ್ಣನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಕಲ್ಲುತೂರಾಟಗಾರರನ್ನು ನಿಯಂತ್ರಿಸಲು ಸೇನೆಯ ಅಧಿಕಾರಿ ಲೀತುಲ್ ಗೊಗೋಯ್ ಅವರು ಪ್ರತಿಭಟನಾಕಾರನೊಬ್ಬನನ್ನು ಸೇನಾ ಜೀಪ್ ಮುಂಭಾಗಕ್ಕೆ ಕಟ್ಟಿಹಾಕಿದ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ. ಯೋಧನ ಕ್ರಮವನ್ನು ಟೀಕಿಸಿದ ಅರುಂಧತಿ ರಾಯ್ ಮೊದಲಾದವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಟೀಕೆ ತುರ್ತು ಸಂದರ್ಭಗಳಲ್ಲಿ ಸೇನೆ ತನ್ನಿಚ್ಛೆಯಂತೆ ಕ್ರಮ ಕೈಗೊಳ್ಳಬಹುದು ಎಂದು ಸಚಿವ ಅರುಣ್ ಜೇಟ್ಲಿ ನಿನ್ನೆಯಷ್ಟೇ ಹೇಳಿದರು. ಈ ಹಿನ್ನೆಲೆಯಲ್ಲಿ ಕೋಡಿಯೇರಿ ಬಾಲಕೃಷ್ಣನ್ ಅವರ ವಿವಾದಾಸ್ಪದ ಹೇಳಿಕೆ ಬಂದಿದೆ.
ಅವರ ಭಾಷಣದ ತುಣುಕು ಇಲ್ಲಿದೆ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.