ಕೈ ಶಾಸಕಿ ಬರ್ತೀನಿ ಅಂದ್ರು ಬೇಡ ಅಂತಿದ್ದಾರೆ ಬಿಜೆಪಿ ನಾಯಕರು

By Web DeskFirst Published Jul 9, 2019, 11:26 AM IST
Highlights

ಕಾಂಗ್ರೆಸ್ ಶಾಸಕಿ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದು, ಇದಕ್ಕೆ ಬಿಜೆಪಿ ಪಾಳಯದಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 

ಬೆಳಗಾವಿ [ಜು.09] : ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಇದ್ದು, ಇದೇ ವೇಳೆ ಖಾನಾಪುರ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ತಾಲೂಕು ಘಟಕ ನಿಷೇಧಿಸಿದೆ. 

ಅಂಜಲಿ ನಿಂಬಾಳ್ಕರ್ ಬಿಜೆಪಿ ಸೇರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಬೇರೆ ಪಕ್ಷದಿಂದ ಬಂದು ಬಿಜೆಪಿ ಶಾಸಕರಾಗುವುದಕ್ಕೆ  ತಾಲೂಕು ಘಟಕದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಖಾನಾಪುರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ. 

ಕರ್ನಾಟಕ ರಾಜಕೀಯ ಬೆಳವಣಿಗಗಳ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಯಾವುದೇ ಕಾರಣಕ್ಕೂ ಅಂಜಲಿ ನಿಂಬಾಳ್ಕರ್ ಅವರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬಾರದು, 20  ವರ್ಷದಿಂದ ದುಡಿದ ಬಿಜೆಪಿ ಕಾರ್ಯಕರ್ತರಿಗೆ ಈ ನಿಟ್ಟಿನಲ್ಲಿ ಅನ್ಯಾಯವಾಗುತ್ತದೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. 

ಬಿಜೆಪಿ ತಾಲೂಕ ಘಟಕದ ಅಧ್ಯಕ್ಷ ವಿಠಲ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಸಂಜಯ ಕಂಚಿ ನೆತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. 

click me!