ಖಾದಿ ಕ್ಯಾಲೆಂಡರ್ ವಿವಾದ: ಮಂಗಳಯಾನ ಪ್ರಭಾವವೆಂದ ರಾಹುಲ್ ಟೀಕೆ

By Suvarna Web DeskFirst Published Jan 13, 2017, 1:12 PM IST
Highlights

ಖಾದಿ ಉದ್ಯೋಗ್ ಕ್ಯಾಲೆಂಡರ್ ಹಾಗೂ ಡೈರಿಯಲ್ಲಿ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಜಾಗದಲ್ಲಿ ಪ್ರಧಾನಿ ಮೋದಿಯವರು ಕಾಣಿಸಿಕೊಂಡಿರುವುದು ರಾಹುಲ್ ಗಾಂಧಿಗೆ ಟೀಕೆ ಮಾಡಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ನವದೆಹಲಿ (ಜ.13): ಖಾದಿ ಉದ್ಯೋಗ್ ಕ್ಯಾಲೆಂಡರ್ ಹಾಗೂ ಡೈರಿಯಲ್ಲಿ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಜಾಗದಲ್ಲಿ ಪ್ರಧಾನಿ ಮೋದಿಯವರು ಕಾಣಿಸಿಕೊಂಡಿರುವುದು ರಾಹುಲ್ ಗಾಂಧಿಗೆ ಟೀಕೆ ಮಾಡಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ಇದನ್ನು 'ಮಂಗಳಯಾನ ಪ್ರಭಾವ' ಎಂದಿರುವ ರಾಹುಲ್ ಗಾಂಧಿ, ಖಾದಿ ಗ್ರಾಮೋದ್ಯಮಕ್ಕೆ ಉತ್ತೇಜನ ನೀಡಿ ಅದರ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಲು ಮೋದಿಜಿ ಪ್ರಯತ್ನಿಸುತ್ತಿದ್ದಾರೆ. ಮಂಗಳಯಾನ ಬಾಹ್ಯಾಕಾಶ ನೌಕೆಯನ್ನು ಮಂಗಳ ಗ್ರಹಕ್ಕೆ ಕಳುಹಿಸಿದ ಮೊದಲ ದೇಶ ಭಾರತ. ಇಂತದ್ದೊಂದು ಮಹತ್ವಾಕಾಂಕ್ಷೆ ಯೋಜನೆಯನ್ನು ಮನಮೋಹನ್ ಸಿಂಗ್ ಕಾಲದಲ್ಲಿ ರೂಪಿಸಲಾಗಿತ್ತು. ಆದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು ಮೋದಿ ಪ್ರಯತ್ನಿಸಿದರು. ಅದೇ ರೀತಿ ಈಗ ಗಾಂಧೀಜಿಯವರಿಗೆ ಸೇರಬೇಕಾದ ಕ್ರೆಡಿಟನ್ನು ಇವರು ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

 

click me!