ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೊ: ನ್ಯಾಯ ದಕ್ಕಿಸಿಕೊಂಡ ಮಹಿಳೆ?

By Web DeskFirst Published Nov 26, 2018, 3:12 PM IST
Highlights

ವಿವಾಹವಾದ ಮಹಿಳೆಯ ನಗ್ನ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದ್ದಕ್ಕೆ, ಆಕೆಯನ್ನು ಕುಟುಂಬವೇ ತೊರೆದಿತ್ತು. ತನ್ನದಲ್ಲದ ತಪ್ಪಿಗೆ ನೋವು ಅನುಭವಿಸಬೇಕಾದ ಮಹಿಳೆ ಇಂದು ಕಾನೂನು ಹೋರಾಟದಲ್ಲಿ ಜಯ ಸಾಧಿಸಿದ್ದು ಹೇಗೆ ಗೊತ್ತಾ?

ಕೊಚ್ಚಿ: ತನ್ನ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ, ಆಕೆಯ ಆತ್ಮಸ್ಥೈರ್ಯವೇ ಕುಸಿದಿತ್ತು. ಪತಿ, ಮಕ್ಕಳೂ ಆಕೆಯನ್ನು ತೊರೆದರು. ಆದರೆ, ಇದರಲ್ಲಿ ಈಕೆಯ ಯಾವ ತಪ್ಪೂ ಇರಲಿಲ್ಲ. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ ಮಹಿಳೆಗೆ ಇದೀಗ ನ್ಯಾಯ ಸಿಕ್ಕಿದೆ. ಮೂರು ವರ್ಷಗಳು ಅನುಭವಿಸಿದ ಯಾತನೆ ಅಂತ್ಯವಾಗಿದೆ.

ಮೂರು ಮಕ್ಕಳ ತಾಯಿಯಾಗಿರುವ ಶೋಭಾ ಸಜು ಅವರ ಫೋಟೋಗಳನ್ನು ತಿರುಚಿ, ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಆಕೆಯ ಮುಗ್ಧತೆಯನ್ನೇ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಪತ್ನಿಗೆ ನೈತಿಕ ಬೆಂಬಲ ನೀಡಬೇಕಾಗಿದ್ದ ಪತಿ, ಸತ್ಯಾಸತ್ಯತೆಯನ್ನು ಪರಾಮರ್ಶಿಸದೇ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ಮಕ್ಕಳನ್ನು ತನ್ನೊಡನೆ ಕರೆದುಕೊಂಡು ಮಡದಿಯನ್ನು ತೊರೆದು ಬಿಟ್ಟರು. ಆದರೆ ಶೋಭಾ ಕಾನೂನಾತ್ಮಕವಾಗಿ ಹೋರಾಡಿ ತನ್ನ ತಪ್ಪಿಲ್ಲದ ಈ ಘಟನೆಯಲ್ಲಿ  ಮೋಸ ನಡೆದಿರುವುದನ್ನು ಸಾಬೀತು ಪಡಿಸಿದ್ದಾರೆ. 

ನ್ಯಾಯ ಪಡೆದೇ ತೀರುತ್ತೇನೆ ಎಂದು ಹಠ ತೊಟ್ಟ ಆಕೆ ಮೊದಲು ಸೈಬರ್ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದರು. ನ್ಯಾಯಯುತವಾಗಿ ಹೋರಾಡಿದರು. ಅಲ್ಲದೇ ತಮ್ಮ ಮಕ್ಕಳಿಗೆ ನಿಮ್ಮ ತಾಯಿ ಕೆಟ್ಟ ಕೃತ್ಯವೆಸಗಿಲ್ಲ ಎಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಪ್ರಕರಣವನ್ನು ಕೈಗೆತ್ತಿಕೊಂಡ ಸೈಬರ್ ಪೊಲೀಸರು ಆಕೆಯ ಫೋಟೋಗಳನ್ನು ತಿರುಚಿರುವುದನ್ನು ಸ್ಪಷ್ಪಪಡಿಸಿದ್ದಾರೆ. ಆಕೆಯ ಗಂಡನಿಗೂ ಈ ವಿಚಾರ ತಿಳಿಯುವಂತೆ ಮಾಡಲಾಗಿದೆ, ಎಂದು ತನಿಖೆ ಕೈಗೆತ್ತಿಕೊಂಡು ಪೊಲೀಸರು ತಿಳಿಸಿದ್ದಾರೆ.

click me!