
ಆತನಿಗೆ 26 ವರ್ಷ, ಆಕೆಗೋ 30 ವರ್ಷ. ಇಬ್ಬರಿಗೂ ಲವ್ ಆಗಿದೆ. ಇಬ್ಬರೂ ಹಲವು ದಿನಗಳಿಂದ ಒಟ್ಟಿಗೆ ಸುತ್ತಾಡಿಕೊಂಡು ಲವ್ವಿಡವ್ವಿ ಮಾಡಿದ್ದಾರೆ.
ಈ ನಡುವೆ ಹುಡುಗನ ಮನೆಯವರು ಆತನಿಗೆ ಬೇರೆಡೆ ಮದುವೆಗೆ ಸಿದ್ಧತೆ ಮಾಡಿದ್ದರು. ವಿಷಯ ಪ್ರಿಯತಮೆ ಕಿವಿಗೆ ಬಿದ್ದಿದೆ. ಸುಮ್ಮನೆ ಬಿಟ್ಟರೆ ಹಕ್ಕಿ ಕೈಬಿಟ್ಟು ಹೋದೀತು ಎಂದು ಅರಿತ ಆಕೆ, ಪ್ರಿಯಕರನನ್ನು ಹೋಟೆಲ್‌ಗೆ ಬರಹೇಳಿದ್ದಾಳೆ. ಹೀಗೆ ಬಂದವನಿಗೆ ಏನಪ್ಪಾ ವಿಷಯ. ನನ್ನನ್ನು ಬಿಟ್ಟು ಬೇರೆ ಮದುವೆ ಆಗುತ್ತಿದ್ದೆಯಂತೆ ಎಂದು ಕೇಳಿದ್ದಾಳೆ. ಆತ ಹೌದು ಎಂದಿದ್ದಾನೆ. ಸಿಟ್ಟಿಗೆದ್ದ ಆಕೆ ಚಾಕುವಿನಿಂದ ಆತನ ಮರ್ಮಾಂಗ ಕತ್ತರಿಸಿದ್ದಾಳೆ. ಚೀರಾಟ ಕೇಳಿದ ಹೋಟೆಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಿಯತಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.