ಪ್ರವಾಹ ಪರಿಹಾರಕ್ಕೆ ಕೇರಳ ಸರ್ಕಾರದ ಮಾಸ್ಟರ್ ಪ್ಲಾನ್

By Web DeskFirst Published Aug 22, 2018, 8:42 AM IST
Highlights

ಕೇರಳ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಈ ನಿಟ್ಟಿನಲ್ಲಿ ಕೇರಳ ಸರ್ಕಾರ ಪರಿಹಾರಕ್ಕಾಗಿ ಇದೀಗ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದೆ. 

ತಿರುವನಂತಪುರ: ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಉಂಟಾದ ಪ್ರವಾಹದಿಂದ  ಕರ್ನಾಟಕ ಹಾಗೂ ಕೇರಳ ರಾಜ್ಯಗಳು ತತ್ತರಿಸಿವೆ. ಇದೀಗ ಇಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳು ಸರ್ಕಾರಗಳು ಹರಸಾಹಸಪಡುತ್ತಿವೆ. ಈ ನಿಟ್ಟಿನಲ್ಲಿ ಕೇರಳದ ಸರ್ಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ. 

ಪರಿಹಾರ ಕಾರ್ಯಗಳಿಗೆ ಅಗತ್ಯ ಹಣ ಹೊಂದಿಸಲು ಪರದಾಡುತ್ತಿರುವ ಕೇರಳ ಸರ್ಕಾರ, ಜಿಎಸ್‌ಟಿ ಮೇಲೆ ಶೇ.10ರಷ್ಟುಹೆಚ್ಚುವರಿ ಸೆಸ್‌ ಹಾಕಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.

ಅಲ್ಲದೆ ಹೊಸ ಲಾಟರಿ ಆರಂಭಿಸಲೂ ನಿರ್ಧರಿಸಿದೆ. ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

click me!