ದಂಡ ಕಟ್ಟಿದ ರಾಜ್ಯಪಾಲ..! ಯಾಕೆ..?

First Published Jul 6, 2018, 8:52 AM IST
Highlights

ರಾಜ್ಯಪಾಲರು ತಾವು ಕಾನೂನು ಉಲ್ಲಂಘನೆ ಮಾಡಿದ್ದ ಪ್ರಕರಣವೊಂದಕ್ಕೆ ದಂಡವನ್ನು ಕಟ್ಟಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆಗಿರುವ ಕೇರಳದ ಹಾಲಿ ರಾಜ್ಯಪಾಲ ಸದಾಶಿವಂ ಅವರು ಮಿತಿಮೀರಿದ ವೇಗದಲ್ಲಿ ಕಾರು ಚಾಲನೆ ಕೇಸಲ್ಲಿ ದಂಡ ಪಾವತಿಸಿದ್ದಾರೆ. 

ತಿರುವನಂತಪುರ: ರಾಜ್ಯಪಾಲರು, ಪ್ರತಿ ರಾಜ್ಯದ ಪ್ರಥಮ ಪ್ರಜೆ. ಆದರೆ ಇಂಥ ಯಾವುದೇ ಹಮ್ಮುಬಿಮ್ಮು ತೋರದೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆಗಿರುವ ಕೇರಳದ ಹಾಲಿ ರಾಜ್ಯಪಾಲ ಸದಾಶಿವಂ ಅವರು ಮಿತಿಮೀರಿದ ವೇಗದಲ್ಲಿ ಕಾರು ಚಾಲನೆ ಕೇಸಲ್ಲಿ 400 ರು. ದಂಡ ಪಾವತಿ ಮಾಡಿದ್ದಾರೆ. 

ಏ.7ರಂದು ವೆಲ್ಲಯಂಬಾಲರಂ- ಕೌಡಿದಾರ್‌ ಮಾರ್ಗದಲ್ಲಿ ರಾಜ್ಯಪಾಲರ ಕಾರು ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸಿತ್ತು. ಇದನ್ನು ಸ್ವಯಂಚಾಲಿತ ಯಂತ್ರ ಪತ್ತೆಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯಪಾಲರ ಕಚೇರಿಗೆ ನಿಯಮ ಉಲ್ಲಂಘಟನೆಗೆ ದಂಡ ಪಾವತಿಸುವಂತೆ ನೋಟಿಸ್‌ ಜಾರಿಯಾಗಿತ್ತು. ಘಟನೆ ನಡೆದಾಗ ತಾವು ಕಾರಿನಲ್ಲಿ ಇಲ್ಲದೇ ಇದ್ದರೂ, ಸದಾಶಿವಂ ಅವರು ತಮ್ಮ ಕಚೇರಿ ಮೂಲಕ 400 ರು. ದಂಡ ಪಾವತಿ ಮಾಡಿದ್ದಾರೆ.

click me!