ಕೆಂಪೇಗೌಡ ಏರ್’ಪೋರ್ಟ್’ನಲ್ಲಿ ಇನ್ಮುಂದೆ ಗೈಡ್ ಮಾಡುತ್ತೆ ’ಕೆಂಪ’ ರೋಬೋಟ್

By Suvarna Web DeskFirst Published Apr 2, 2018, 3:51 PM IST
Highlights

ಹೊರರಾಜ್ಯದಿಂದ ಅಥವಾ ಹೊರದೇಶದಿಂದ ಕರ್ನಾಟಕ ರಾಜ್ಯದ  ಪ್ರವಾಸಕ್ಕೆ ಬಂದಿದ್ದೀರಾ? ಎಲ್ಲಿಗೆ ಹೋಗಬೇಕೆಂದು ಆಲೋಚಿಸುತ್ತಿದ್ದೀರಾ? ಚಿಂತೆ ಬಿಡಿ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀವು ಇಳಿಯುತ್ತಿದ್ದಂತೆ ‘ಕೆಂಪ’
ನಿಮಗೆ ಎಲ್ಲ ಮಾಹಿತಿ ಒದಗಿಸಲಿದ್ದಾನೆ. ಯಾರಪ್ಪಾ ಇದು ಕೆಂಪ ಅನ್ನುತ್ತೀರಾ..! ಪ್ರಯಾಣಿಕರಿಗೆ ಅನುಕೂಲವಾಗುವ  ರೀತಿಯಲ್ಲಿ ಮಾಹಿತಿ ನೀಡಲು ಇನ್ನು ಮುಂದೆ ರೋಬೊಟ್ ಕೆಲಸ ನಿರ್ವಹಿಸಲಿದೆ. ಈ ರೋಬೊಟ್‌ಗೆ ಕೆಂಪ ಎಂದು ಹೆಸರಿಡಲಾಗಿದೆ.

ಬೆಂಗಳೂರು (ಏ. 02): ಹೊರರಾಜ್ಯದಿಂದ ಅಥವಾ ಹೊರದೇಶದಿಂದ ಕರ್ನಾಟಕ ರಾಜ್ಯದ  ಪ್ರವಾಸಕ್ಕೆ ಬಂದಿದ್ದೀರಾ? ಎಲ್ಲಿಗೆ ಹೋಗಬೇಕೆಂದು ಆಲೋಚಿಸುತ್ತಿದ್ದೀರಾ? ಚಿಂತೆ ಬಿಡಿ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀವು ಇಳಿಯುತ್ತಿದ್ದಂತೆ ‘ಕೆಂಪ’
ನಿಮಗೆ ಎಲ್ಲ ಮಾಹಿತಿ ಒದಗಿಸಲಿದ್ದಾನೆ. ಯಾರಪ್ಪಾ ಇದು ಕೆಂಪ ಅನ್ನುತ್ತೀರಾ..! ಪ್ರಯಾಣಿಕರಿಗೆ ಅನುಕೂಲವಾಗುವ  ರೀತಿಯಲ್ಲಿ ಮಾಹಿತಿ ನೀಡಲು ಇನ್ನು ಮುಂದೆ ರೋಬೊಟ್ ಕೆಲಸ ನಿರ್ವಹಿಸಲಿದೆ. ಈ ರೋಬೊಟ್‌ಗೆ ಕೆಂಪ ಎಂದು ಹೆಸರಿಡಲಾಗಿದೆ.

‘ಕೆಂಪ’ ಎಂಬ ಹೆಸರಿನ ರೋಬೊಟ್‌ಅನ್ನು ಮೊದಲ ಬಾರಿಗೆ ಬೆಂಗಳೂರಿನ ಸ್ಟಾರ್ಟ್‌ಪ್   ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ವಿಮಾನ ನಿಲ್ದಾಣದಲ್ಲಿ ಈ ಕೆಂಪ ಕರ್ನಾಟಕದ  ಪ್ರಮುಖ ಪ್ರವಾಸಿ ತಾಣಗಳು, ಪಾರಂಪರಿಕ ಸ್ಥಳ ಹಾಗೂ ಸಂಸ್ಕೃತಿ ಬಗ್ಗೆ ತಿಳಿಸಲಿದೆ. ಈ  ಮೂಲಕ ಮೊದಲಿಗೆ ಕರ್ನಾಟಕಕ್ಕೆ ಭೇಟಿ ನೀಡುವ ವಿದೇಶಿಗರು ಹಾಗೂ ಇತರೆ ರಾಜ್ಯದ ಪ್ರವಾಸಿಗರಿಗೆ ಕೆಂಪನಿಂದ ಅನುಕೂಲವಾಗಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡು  ಭಾಷೆಯಲ್ಲೂ ಮಾಹಿತಿ ನೀಡಲಿದೆ.  ಅಷ್ಟು ಮಾತ್ರವಲ್ಲದೆ, ಕೆಂಪ ನಿಲ್ದಾಣದಲ್ಲಿ ಲೋಹ ಶೋಧ ಯಂತ್ರದ ಮೂಲಕ
ಪ್ರಯಾಣಿಕರು ಮತ್ತು ಬ್ಯಾಗ್ ತಪಾಸಣೆ ನಡೆಸುವುದು, ಬೋರ್ಡಿಂಗ್ ಪಾಸ್ ನೀಡಿಕೆ,  ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಬರುವುದು ಸೇರಿದಂತೆ ಹಲವು ರೀತಿಯಲ್ಲಿ ನೆರವು ನೆರವು ನೀಡಲಿದೆ.

ಈಗಾಗಲೇ ಈ ರೋಬೊಟ್‌ನ ಪ್ರಯೋಗಿಕ ಪರೀಕ್ಷೆ ನಡೆದಿದ್ದು,  ಶೀಘ್ರ ಕೆಲವನ್ನು ಆರಂಭಿಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಪಂಚದ ಹಲವು ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣಗಳಲ್ಲಿ ಮಾಹಿತಿ ನೀಡುವ ರೋಬೊಟ್ ಕೆಲಸ ನಿರ್ವಹಿಸುತ್ತಿದೆ. ಇಂತಹ  ವ್ಯವಸ್ಥೆಯನ್ನು ಹೊಂದಿದ್ದ ವಿಮಾನ ನಿಲ್ದಾಣಗಳ ಸಾಲಿಗೆ ಇದೀಗ ಬೆಂಗಳೂರಿನ ಕೆಂಪೇಗೌಡ  ಅಂತಾರಾಷ್ಟ್ರೀಯ ನಿಲ್ದಾಣ ಕೂಡ ಸೇರಲಿದೆ.

click me!