ಕಾಣೆಯಾದ ನಿತ್ಯಾನಂದ : ಹುಡುಕಿಕೊಟ್ಟರೆ ಸೂಕ್ತ ಬಹುಮಾನ

By Web Desk  |  First Published Dec 21, 2018, 12:16 PM IST

ಬಿಡದಿ ಧ್ಯಾನಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಕಾಣೆಯಾಗಿದ್ದಾನಂತೆ. ಹೀಗೆ ಹೇಳಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.  ಅಲ್ಲದೇ ಆತನನ್ನು ಹುಡುಕಿ ಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ. 


ರಾಮನಗರ:  ಅತ್ಯಾಚಾರ ಸೇರಿ ವಿವಿಧ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಬಿಡದಿ ಧ್ಯಾನಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. 

ನಿತ್ಯಾನಂದ ಕಾಣೆಯಾಗಿದ್ದಾನೆ ಹುಡುಕಿ ಕೊಡಿ ಎಂದು ಪ್ರತಿಭಟನೆ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

Tap to resize

Latest Videos

ರಸ್ತೆಯ ಇಕ್ಕೆಲಗಳ ಗೋಡೆಗಳ ಮೇಲೆ ಕಾಣೆಯಾಗಿದ್ದಾನೆ ನಿತ್ಯಾನಂದ ಎನ್ನುವ ಬಿತ್ತಿ ಪತ್ರಗಳನ್ನ ಅಂಟಿಸುವ ಮೂಲಕ ವಿನೂತನವಾಗಿ  ಪ್ರತಿಭಟಿಸಿದ್ದಾರೆ. 

ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಕಾನೂನಿಗೆ ಅಗೌರವ ತೋರುತ್ತಿರುವ ಕಪಟಿ ಸ್ವಾಮಿಯನ್ನ ಹುಡುಕಿ ಬಂಧಿಸಬೇಕೆಂದು ಆಗ್ರಹಿಸಿದ್ದು,  ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಎಂದು ಕರ ಪತ್ರ ಹಂಚಿದ್ದಾರೆ.

ಈಗಾಗಲೆ ಬಿಡದಿ ಧ್ಯಾನಪೀಠದ ಬಾರಿ ವಿಚಾರಣೆಗೆ ಹಾಜರಾಗದೇ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನುವ ಗಾಳಿ ಸುದ್ದಿಗಳೂ ಕೂಡ ಹರಡಿವೆ.

click me!