ಕಾಂಗ್ರೆಸ್-ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತಾ?

Published : Sep 25, 2018, 06:15 PM IST
ಕಾಂಗ್ರೆಸ್-ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತಾ?

ಸಾರಾಂಶ

ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರದಿಂದ ಸಂಖ್ಯಾಬಲದಿಂದ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.

ಬೆಂಗಳೂರು, [ಸೆ.25]: ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್ 3ರಂದು ಚುನಾವಣೆ ನಡೆಯಲಿದೆ. 

ಒಟ್ಟು ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿದೆ.  ಕಾಂಗ್ರೆಸ್ ನಿಂದ ವೇಣುಗೋಪಾಲ್ ಮತ್ತು ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್ ನಿಂದ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ. 

ಆಪರೇಷನ್ ಫೇಲ್: ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರದಿಂದ ಸಂಖ್ಯಾಬಲದಿಂದ ಈ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.
  
 1) ಕೈ ಅಭ್ಯರ್ಥಿ ವೇಣುಗೋಪಾಲ್ 
* 1.27 ಕೋಟಿ ಚರಾಸ್ತಿ, 8.17 ಕೋಟಿ ರೂ ಮೊತ್ತದ ಸ್ಥಿರಾಸ್ತಿ
* 4.9 ಕೋಟಿ ರೂಪಾಯಿ ಸಾಲ, ಪತ್ನಿ ಹೆಸರಿನಲ್ಲಿ 54.8 ಲಕ್ಷ ಚರಾಸ್ತಿ
* ಮಕ್ಕಳ ಹೆಸರಲ್ಲಿ 42 ಲಕ್ಷ ರೂ ಮೊತ್ತದ ಚರಾಸ್ತಿ ಹಾಗೂ 30 ಲಕ್ಷ ರೂ ಸ್ಥಿರಾಸ್ತಿ

2) ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಆಸ್ತಿ 
* ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಆಸ್ತಿ ಬಳಿ 5 ಲಕ್ಷ ರೂಪಾಯಿ ನಗದು
* 45 ಲಕ್ಷ ರೂ ಚರಾಸ್ತಿ, 11.5 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ
* 2.1 ಕೋಟಿ ರೂ ಸಾಲ, ಪತ್ನಿ ಹೆಸರಲ್ಲಿ 12 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ
* 1.9 ಕೋಟಿ ರೂ ಮೌಲ್ಯದ ಚರಾಸ್ತಿ, 7.1 ಕೋಟಿ ರೂ ಸಾಲ ಇದೆ

3) ಕೈ ಅಭ್ಯರ್ಥಿ ನಜೀರ್ ಅಹ್ಮದ್ ಆಸ್ತಿ 
* ಕಾಂಗ್ರೆಸ್ ಅಭ್ಯರ್ಥಿ ನಜೀರ್ ಅಹ್ಮದ್ ಬಳಿ 15 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ
*10.17 ಕೋಟಿ ರೂ ಮೌಲ್ಯದ ಚರಾಸ್ತಿ, 4.51 ಲಕ್ಷ ರೂ‌ ಮೊತ್ತದ ಚಿನ್ನಾಭರಣ
* 18.73 ಕೋಟಿ ರೂ ಸಾಲ, ಪತ್ನಿ ಹೆಸರಲ್ಲಿ 2.75 ಕೋಟಿ ರೂ ಮೊತ್ತದ ಸ್ಥಿರಾಸ್ತಿ
* 43 ಲಕ್ಷ ರೂ ‌ಸಾಲ ಇದೆ ತೋರಿಸಿರುವ ಕೈ ಅಭ್ಯರ್ಥಿ ನಜೀರ್ ಅಹ್ಮದ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!