ಭಾರತಕ್ಕೂ ಮೊದಲೇ ಸ್ವಾತಂತ್ರ ಘೋಷಿಸಿತ್ತು ಈ ಊರು

By Web DeskFirst Published Aug 15, 2018, 9:27 AM IST
Highlights

‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂದು ಭಾರತದಲ್ಲಿ ಮೊಟ್ಟಮೊದಲಿಗೆ ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಒಂದು ಸಣ್ಣ ಗ್ರಾಮ ಈಸೂರು.

ಶಿಕಾರಿಪುರ (ಆ. 15): ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂದು ಭಾರತದಲ್ಲಿ ಮೊಟ್ಟಮೊದಲಿಗೆ ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಒಂದು ಸಣ್ಣ ಗ್ರಾಮ ಈಸೂರು.

ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ಹೋರಾಟ ಚಿರಸ್ಮರಣೀಯ. 1942 ರಲ್ಲಿ ಸುಮಾರು 200 ಜನರ ಗುಂಪು ಹಳ್ಳಿಯ ಬೀದಿ ಬೀದಿಯಲ್ಲಿ ಚಳವಳಿ ನಡೆಸಿ, ಕಚೇರಿಗೆ ಬೆಂಕಿ ಇಟ್ಟು ಗೌಡರ, ಶಾನುಭೋಗರ ಸರ್ಕಾರಿ ಲೆಕ್ಕಪುಸ್ತಕಗಳನ್ನು ಸುಟ್ಟುಹಾಕಿ, ಸರ್ಕಾರಿ ನೌಕರರಿಗೆ ಎಂದೂ ಗೌರವ ಕೊಡಕೂಡದು, ಕೊಟ್ಟವರ ಮನೆ ಸುಡುತ್ತೇವೆ ಎಂದು ಎಚ್ಚರಿಸಿದರು. ಬ್ರಿಟಿಷ್ ಸರ್ಕಾರಕ್ಕೆ ಭೂಕಂದಾಯ ಕೊಡುವುದಿಲ್ಲವೆಂದು ಪ್ರತಿಭಟಿಸಿದರು. ಗಾಂಧಿ
ಟೋಪಿ ಧರಿಸುವಂತೆ ಹೇಳಿದರು.

Latest Videos

ಶಾನುಭೋಗರಿಂದ ಸರ್ಕಾರಿ ಪುಸ್ತಕಗಳನ್ನೆಲ್ಲಾ ಕಸಿದುಕೊಂಡು ಈಸೂರನ್ನು ಸ್ವತಂತ್ರ ಹಳ್ಳಿ ಎಂದು ಘೋಷಿಸಿದರು. ಊರಿನ ಬಾಗಿಲಿಗೆ ‘ಬೇಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಗೆ ಈಸೂರಿಗೆ ಪ್ರವೇಶವಿಲ್ಲ’ ಎಂಬ ಫಲಕವನ್ನು ಹಾಕಿದರು. ತಮ್ಮದೇ ಹೊಸ ಸರ್ಕಾರವನ್ನೂ ಸ್ಥಾಪಿಸಿದರು. ಆದರೆ ಸೆಪ್ಟೆಂಬರ್ 28 ರಂದು ಹಳ್ಳಿಗೆ ಬಂದ ಬ್ರಿಟಿಷರ ಮಿಲಿಟರಿ ಪಡೆ ಹಳ್ಳಿ ಗರನ್ನು ಅಮಾನುಷರಾಗಿ ಹೊಡೆದು ಸೇಡು ತೀರಿಸಿಕೊಂಡಿತು.

40 ಮಂದಿ ವಿಚಾರಣೆ ಗೊಳಪಟ್ಟರು. ಅಂತಿಮವಾಗಿ ಐವರಿಗೆ ಮರಣ ದಂಡನೆ ವಿಧಿಸಲಾಯಿತು. 

click me!