2016 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : 61 ಸಾಧಕರ ಆಯ್ಕೆ

By Suvarna Web DeskFirst Published Oct 30, 2016, 4:03 PM IST
Highlights

ಹಿರಿಯ ನಟ ಸತ್ಯಜಿತ್ ಅವರು ಗ್ಯಾಂಗ್ರೀನ್'ನಿಂದ ಕಾಲು ಕಳೆದುಕೊಂಡ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರರಿ ಮಾಡಿತ್ತು. ಸತ್ಯಜಿತ್ ಅವರು ನೆರವಿಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಸರ್ಕಾರ ನೇರವಾಗಿ ನೆರವು ಮಾಡುವ ಬದಲಿಗೆ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಬೆಂಗಳೂರು(ಅ.30): ರಾಜ್ಯ ಸರ್ಕಾರ 2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು. ಸಿನಿಮಾ ಕ್ಷೇತ್ರದಲ್ಲಿ ಹಿರಿಯ ನಟಿಯರಾದ ರೇವತಿ ಕಲ್ಯಾಣ್ ಕುಮಾರ್, ನಟಿ ಜೂಲಿ ಲಕ್ಷ್ಮಿ, ಜಿ.ಕೆ ಶ್ರೀನಿವಾಸಮೂರ್ತಿ, ನಿರ್ಮಾಪಕ ಸಾ.ರಾ. ಗೋವಿಂದು ಹಾಗೂ ನಿನ್ನೆಯಷ್ಟೆ ಗ್ಯಾಗ್ರೀನ್'ನಿಂದ ಕಾಲು ಕಳೆದುಕೊಂಡ ಸಯ್ಯದ್ ಸತ್ಯಜಿತ್ ಅವರಿಗೂ ರಾಜ್ಯ ಪ್ರಶಸ್ತಿ ನೀಡಲಾಗಿದೆ.

ಹಿರಿಯ ನಟ ಸತ್ಯಜಿತ್ ಅವರು ಗ್ಯಾಂಗ್ರೀನ್'ನಿಂದ ಕಾಲು ಕಳೆದುಕೊಂಡ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರರಿ ಮಾಡಿತ್ತು. ಸತ್ಯಜಿತ್ ಅವರು ನೆರವಿಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು. ಸರ್ಕಾರ ನೇರವಾಗಿ ನೆರವು ಮಾಡುವ ಬದಲಿಗೆ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಪ್ರಶಸ್ತಿ ವಿಜೇತರಿಗೆ 1 ಲಕ್ಷ ರೂ. ನಗದು ಹಾಗೂ 20 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ

 

ಪ್ರಶಸ್ತಿ ಪಡೆದವರ ಪಟ್ಟಿ

 

ಸಿನಿಮಾ :

ರೇವತಿ ಕಲ್ಯಾಣ್‌ಕುಮಾರ್

ಜೂಲಿ ಲಕ್ಷ್ಮಿ

ಜಿ.ಕೆ.ಶ್ರೀನಿವಾಸಮೂರ್ತಿ - ಬೆಂಗಳೂರು ಗ್ರಾಮಾಂತರ 

ಸಾ.ರಾ.ಗೋವಿಂದು - ಬೆಂಗಳೂರು 

ಸೈಯದ್​ ಸತ್ಯಜಿತ್​ - ಧಾರವಾಡ

 

ಮಾಧ್ಯಮ :

ಈಶ್ವರ್​ ದೈತೋಟ

ಇಂದೂಧರ ಹೊನ್ನಾಪುರ 

ಎಂ.ಎಂ.ಮಣ್ಣೂರ

ಭವಾನಿ ಲಕ್ಷ್ಮೀನಾರಾಯಣ

 

ಸಾಹಿತ್ಯ  :

ರಂ.ಶಾ.ಲೋಕಾಪುರ(ಬೆಳಗಾವಿ),

ಬಿ.ಶಾಮಸುಂದರ(ಮೈಸೂರು) 

ಕೆ.ಟಿ.ಗಟ್ಟಿ - ದಕ್ಷಿಣ ಕನ್ನಡ,

ಡಾ.ಸುಕನ್ಯಾ ಮಾರುತಿ -ಧಾರವಾಡ 

 

ರಂಗಭೂಮಿ :

ಮೌಲಾಸಾಬ್​ ಇಮಾಂಸಾಬ್​ ನದಾಫ್​ (ಅಣ್ಣಿಗೇರಿ) - ದಾವಣಗೆರೆ 

T.H.ಹೇಮಲತಾ - ತುಮಕೂರು,

ಉಷಾರಾಣಿ - ಬಾಗಲಕೋಟೆ   

ಮೈಸೂರು ಮೂಲದ ರಾಮೇಶ್ವರಿ ವರ್ಮ

 

ಸ್ವಾತಂತ್ರ್ಯ ಹೋರಾಟಗಾರ - ಮಹದೇವಪ್ಪ ಶಿವಬಸಪ್ಪ ಪಟ್ಟಣ  

ನ್ಯಾಯಾಂಗ ವಿಭಾಗ-  ಶಿವರಾಜ ಪಾಟೀಲ್​- ಬೆಂಗಳೂರು 

ಹೊರನಾಡು ಸಾಧಕರ ವಿಭಾಗ-  ಬೇಜವಾಡ ವಿಲ್ಸನ್​ (ದೆಹಲಿ) 

 

ಕ್ರೀಡೆ  :

ಸುರ್ಜಿತ್​ ಸಿಂಗ್​ (ಪ್ಯಾರಾ ಒಲಿಂಪಿಕ್​​ ಕ್ರೀಡಾಪಟು)  

ಎಸ್​.ವಿ. ಸುನಿಲ್​ (ಹಾಕಿ) - ಕೊಡಗು   

ಕೃಷ್ಣ ಅಮೋಗಪ್ಪಾ (ಸೈಕ್ಲಿಂಗ್​) - ವಿಜಯಪುರ

 

 

ವಿಜ್ಞಾನ, ತಂತ್ರಜ್ಞಾನ  :

J.R.ಲಕ್ಷ್ಮಣ್​ರಾವ್​ - ಮೈಸೂರು,

ಪ್ರೊ.ಕೆ.ಮುನಿಯಪ್ಪ - ಚಿಕ್ಕಬಳ್ಳಾಪುರ

 

ಶಿಕ್ಷಣ :

ತೇಜಸ್ವಿ ಕಟ್ಟಿಮನಿ - ಕೊಪ್ಪಳ

   

ವೈದ್ಯಕೀಯ :

ಡಾ.ಹೆಬ್ರಿ ಸುಭಾಷ್​ -ಉಡುಪಿ

 

ಸಂಗೀತ - ನೃತ್ಯ

ಕೆ.ಮುರುಳೀಧರರಾವ್ -ದಕ್ಷಿಣ ಕನ್ನಡ

ದ್ವಾರಕೀ ಕೃಷ್ಣಸ್ವಾಮಿ (ಕೊಳಲು) -ಬೆಂಗಳೂರು

ಹೈಮಾವತಮ್ಮ(ಗಮಕ) - ಬೆಂಗಳೂರು

ಪಂಡಿತ್ ನಾರಾಯಣ ಢಗೆ - ರಾಯಚೂರು

ವ್ಹಿ.ಜಿ. ಮಹಾಪುರುಷ(ಸಿತಾರ್) - ಬಾಗಲಕೋಟೆ

 

ಜಾನಪದ

ತಿಮ್ಮಮ್ಮ (ಸೋಬಾನೆ ಪದ) -ಮಂಡ್ಯ

ಶಾರದಮ್ಮ (ತತ್ವ ಪದ) -ಚಿಕ್ಕಮಗಳೂರು

ಮಲ್ಲಯ್ಯ ಹಿಡಕಲ್ (ಭಜನೆ) - ಬಾಗಲಕೋಟೆ

ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ(ಏಕತಾರಿ) -ಹಾವೇರಿ

ಸೋಭಿನಾ ಮೋತೇಸ್ ಕಾಂಬ್ರೇಕರ್(ಡಮಾಮಿ) - ಉತ್ತರ ಕನ್ನಡ

ಚಿಕ್ಕ ಮರಿಗೌಡ (ಪೂಜಾ ಕುಣಿತ) - ರಾಮನಗರ

 

ಯಕ್ಷಗಾನ ಬಯಲಾಟ

ಎಂ.ಆರ್. ರಂಗನಾಥ್'ರಾವ್ (ಗೊಂಬೆಯಾಟ)- ಬೆಂಗಳೂರು ಗ್ರಾಮಾಂತರ

ಪೇತ್ರಿ ಮಾಧವನಾಯ್ಕ -ಉಡುಪಿ

ಕನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ - ಉಡುಪಿ

ಸುಜಾತಮ್ಮ - ಬಳ್ಳಾರಿ

ದ್ಯಾನ್ಲೆಪ್ಪ ಜಾಂಪ್ಲೆಪ್ಪ ಲಮಾಣಿ(ದೊಡ್ಡಾಟ) -ಗದಗ್

 

ಸಮಾಜ ಸೇವೆ

ತುಳಸಮ್ಮ ಕೆರೂರ - ಗದಗ

ಜಿ.ಎಂ.ಮುನಿಯಪ್ಪ -ಕೋಲಾರ

ಸೋಮಣ್ಣ ಹೆಗ್ಗಡ ದೇವನಕೋಟೆ - ಚಾಮರಾಜನಗರ

ನಜೀರ್ ಅಹಮದ್ ಯು.ಶೇಖ್ - ಉತ್ತರ ಕನ್ನಡ

 

ಸಂಕೀರ್ಣ

ಡಾ.ಎಂ.ಎನ್.ವಾಲಿ(ಜಾನಪದ ತಜ್ಞರು) - ವಿಜಯಪುರ

ಆರ್.ಜೈಪ್ರಸಾದ್ (ತಾಂತ್ರಿಕ ಸಲಹೆಗಾರರು) - ಬೆಂಗಳೂರು

ಡಾ.ಶಕುಂತಲಾ ನರಸಿಂಹನ್(ಸಂಗೀತ ತಜ್ಞರು)-ಬೆಂಗಳೂರು

ದೇವರಾಜ ರೆಡ್ಡಿ(ಅಂತರ್ಜಲ ತಜ್ಞ)- ಬೆಂಗಳೂರು

 

ಶಿಲ್ಪಕಲೆ -ಚಿತ್ರಕಲೆ

ದೃವ ನಾರಾಯಣ ಪತ್ತಾರ (ಶಿಲ್ಪ) -ವಿಜಯಪುರ

ಕಾಶಿನಾಥ ಶಿಲ್ಪಿ -ಶಿವಮೊಗ್ಗ

ಬಸವರಾಜ ಎಲ್ ಜಾನೆ (ಚಿತ್ರಕಲೆ)-ಕಲಬುರಗಿ

ಪಾರ್ವತಮ್ಮ(ಕೌದಿಕಲೆ)- ಯಾದಗಿರಿ

 

ಕೃಷಿ-ಪರಿಸರ

ಎಲ್.ಸಿ.ಸೋನ್ಸ್(ಪರಿಸರ) -ದಕ್ಷಿಣ ಕನ್ನಡ

ಜಿ.ಕೆ. ವೀರೇಶ್ -ಹಾಸನ್

ಕೆ.ಪುಟ್ಟಯ್ಯ -ಮೈಸೂರು

ಎಂ.ಎ. ಖಾದ್ರಿ - ಬೀದರ್

 

 

click me!