ವಿಶ್ವಾಸಮತ ಯಾಚನೆಗೆ ಮುಹೂರ್ತ ಫಿಕ್ಸ್!: ಮೈತ್ರಿ ಸರ್ಕಾರಕ್ಕೆ 3 ದಿನ ರಿಲೀಫ್!

By Web DeskFirst Published Jul 15, 2019, 2:28 PM IST
Highlights

ಕೇವಲ 3 ದಿನದಲ್ಲಿ ವಿಶ್ವಾಸಮತ ಸಾಬೀತು ಮಾಡ್ತಾರಾ ಸಿಎಂ?| 3 ದಿನದೊಳಗೆ ಮ್ಯಾಜಿಕ್ ಮಾಡ್ತಾರಾ ಕುಮಾರಸ್ವಾಮಿ?| ಗುರುವಾರ ಬೆಳಗ್ಗೆ 11 ಗಂಟೆಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ

ಬೆಂಗಳೂರು[ಜು.15]: ಭಾರೀ ಚರ್ಚೆಗೆ ಕಾರಣವಾಗಿದ್ದ ವಿಶ್ವಾಸಮತ ಯಾಚನೆಗೆ ಕೊನೆಗೂ ದಿನಾಂಕ ಹಾಗೂ ಸಮಯ ಫಿಕ್ಸ್ ಆಗಿದೆ. ಆದರೆ ಈ ಅಗ್ನಿಪರೀಕ್ಷೆಗೆ ನಿಗದಿಪಡಿಸಿದ್ದ  ದಿನಾಂಕ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು ಅತೃಪ್ತರ ರಾಜೀನಾಮೆಯಿಂದ ಆರಂಭವಾದ ರಾಜಕೀಯ ಬೆಳವಣಿಗೆ ರಾಷ್ಟ್ರಾದ್ಯಂತ ಸದ್ದು ಮಾಡಿತ್ತು. ಏನೇ ಆದರೂ ನಾವು ರಾಜಿಯಾಗುವುದಿಲ್ಲ ಎಂದು ಮುಂಬೈನಲ್ಲಿ ಬೀಡು ಬಿಟ್ಟಿದ್ದ ಅತೃಪ್ತ ಶಾಸಕರಿಗೆ ಕುಮಾರಸ್ವಾಮಿಯ ವಿಶ್ವಾಸಮತ ಅಸ್ತ್ರ ಕೊಂಚ ಮಟ್ಟಿಗೆ ಶಾಕ್ ನೀಡಿತ್ತು. ಹೀಗಿದ್ದರೂ ಕುಮಾರಸ್ವಾಮಿ ಈ ಕುರಿತಾಗಿ ಘೋಷಿಸಿದ್ದರೂ ಸ್ಪೀಕರ್ ಗೆ ಲಿಖಿತ ಪತ್ರ ನೀಡದೇ ಮೌನ ವಹಿಸಿದ್ದು ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು. ಅತ್ತ ಬಿಜೆಪಿ ದಿನಾಂಕ ನಿಗದಿಗೊಳಿಸುವಂತೆ ಪಟ್ಟು ಹಿಡಿದಿತ್ತು. ಸಾಧ್ಯವಿಲ್ಲವಾದರೆ ಅವಿಶ್ವಾಸ ನಿರ್ಣಯ ಮಂಡಿಸಲು ನಮಗೆ ಅವಕಾಶ ಮಾಡಿಕೊಡಿ ಎಂದಿತ್ತು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎಲ್ಲಾ ನರಾಜಕೀಯ ನಾಟಕಗಳ ಬೆನ್ನಲ್ಲೇ ಇಂದು ಸೋಮವಾರ ಕುಮಾರಸ್ವಾಮಿ ಸ್ಪೀಕರ್ ಗೆ ಲಿಖಿತ ಪತ್ರ ಬರೆದು ವಿಶ್ವಾಸಮತ ಸಾಬೀತಿಗೆ ದಿನಾಂಕ ನಿಗದಿಗೊಳಿಸಲು ಮನವಿ ಮಾಡಿಕೊಂಡಿದ್ದರು. ಈ ಮನವಿ ಮೇರೆಗೆ ಗುರುವಾರ ಬೆಳಗ್ಗೆ 11 ಗಂಟೆಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮೈತ್ರಿ ಸರ್ಕಾರಕ್ಕೆ ಮೂರು ದಿನ ಬಿಗ್ ರಿಲೀಫ್ ಸಿಕ್ಕಿದೆ. ಗುರುವಾರ ಸರ್ಕಾರದ ಅಳಿವು- ಉಳಿವು ನಿರ್ಧಾರವಾಗಲಿದೆ.

ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲು ಖಚಿತ

ಸ್ಪೀಕರ್ ನಿರ್ಧಾರಕ್ಕೆ ಆರಂಭದಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಗುರುವಾರದವರೆಗೂ ಕಾಯುವುದೇಕೆ? 16 ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಹೀಗಾಗಿ ಇಂದೇ ಸಿಎಂ ವಿಶ್ವಾಸಮಯ ಯಾಚಿಸಲಿ ಎಂದು ಕಮಲ ಪಾಳಯ ಪಟ್ಟು ಹಿಡಿದಿತ್ತು. ಆದರೆ ಅಂತಿಮವಾಗಿ ಸ್ಪೀಕರ್ ನಿರ್ಧಾರ ಗೌರವಿಸ, ವಿಶ್ವಾಸಮತಯಾಚನೆಗೆ ಬಿಜೆಪಿ ಒಪ್ಪಿಗೆ ಸೂಚಿಸಿದೆ.

ದೇನಿದ್ದರೂ ಮೂರು ದಿನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸ್ತಾರಾ? ಯಾವ ಮ್ಯಾಜಿಕ್ ನಡೆಸುತ್ತಾರೆ? ಕಾದು ನೋಡಬೇಕಷ್ಟೇ.

click me!