ಸುಪ್ರೀಂಕೋರ್ಟ್ ಬಿಡಲು ಹೇಳಿರುವುದು 13.6 ಟಿಎಂಸಿ ನೀರು; ವಾಸ್ತವದಲ್ಲಿ ನಾವು ಹರಿಸಬೇಕಾಗುವ ನೀರು ಎಷ್ಟು ಗೊತ್ತಾ?

Published : Sep 06, 2016, 03:20 AM ISTUpdated : Apr 11, 2018, 12:42 PM IST
ಸುಪ್ರೀಂಕೋರ್ಟ್ ಬಿಡಲು ಹೇಳಿರುವುದು 13.6 ಟಿಎಂಸಿ ನೀರು; ವಾಸ್ತವದಲ್ಲಿ ನಾವು ಹರಿಸಬೇಕಾಗುವ ನೀರು ಎಷ್ಟು ಗೊತ್ತಾ?

ಸಾರಾಂಶ

ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ. ಈ ಭಾಗದಲ್ಲಿ ಕಾವೇರಿಯ ನದಿಯ ಹರಿವಿನ ಅಗಲ 300 ಮೀಟರ್ ಎಂದರೆ, ಸುಮಾರು ಒಂದು ಸಾವಿರ ಅಡಿಯಷ್ಟು ಅಗಲವಾಗಿ ಹೊಳೆ ಹರಿಯುತ್ತೆ.  ಇದರ ಮಧ್ಯೆ ಹಳ್ಳಿಗಳು ಬರುತ್ತವೆ. ಆ ಹಳ್ಳಿಗಳಿಗೆ ಆ ನೀರು ಹೋಗುತ್ತೆ.

ಬೆಂಗಳೂರು(ಸೆ. 06): ಸುಪ್ರೀಂಕೋರ್ಟ್ ದಿನಕ್ಕೆ 15 ಸಾವಿರ ಕ್ಯುಸೆಕ್'​ನಂತೆ 10 ದಿನ ನೀರು ಬಿಡಿ ಎಂದು ತತ್'ಕ್ಷಣದ ಆದೇಶ ನೀಡಿದೆ. ಆದರೆ, ನಿಜವಾದ ಲೆಕ್ಕಾಚಾರ ಬೇರೆಯೇ ಇದೆ. ಆ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಬಿಡಬೇಕಿರುವುದು 13.6 ಟಿಎಂಸಿ ನೀರಲ್ಲ, 20 ಟಿಎಂಸಿಗೂ ಹೆಚ್ಚು.

ಹೇಗೆ?
ಮೇಲೆ ನೀಡಿರುವ ಈ ಮ್ಯಾಪ್ ಪ್ರಕಾರ, ಕೆಆರ್​ಎಸ್​ನಿಂದ ತಮಿಳುನಾಡಿನ ಬಿಳಿಗುಂಡ್ಲುವಿಗೆ 98 ಕಿ.ಮೀ. ದೂರ ಇದೆ. ಆ 98 ಕಿಲೋಮೀಟರ್ ಉದ್ದಕ್ಕೂ ನಾವು ಬಿಟ್ಟ ನೀರು ಹರಿಯಬೇಕು. ನಿಮಗೆ ಗೊತ್ತಿರಲಿ... ಇದು ಹರಿಯುವುದು ಕಾಲುವೆಗಳಲ್ಲಿ ಅಲ್ಲ. ನದಿಯಲ್ಲೇ... ಹೊಳೆಯ ಮೂಲಕವೇ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಳಿಗುಂಡ್ಲು ಸೇರಬೇಕು. ಈ ಮಧ್ಯೆ 5 ಜಿಲ್ಲೆಗಳು ಬರುತ್ತವೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ. ಈ ಭಾಗದಲ್ಲಿ ಕಾವೇರಿಯ ನದಿಯ ಹರಿವಿನ ಅಗಲ 300 ಮೀಟರ್ ಎಂದರೆ, ಸುಮಾರು ಒಂದು ಸಾವಿರ ಅಡಿಯಷ್ಟು ಅಗಲವಾಗಿ ಹೊಳೆ ಹರಿಯುತ್ತೆ.  ಇದರ ಮಧ್ಯೆ ಹಳ್ಳಿಗಳು ಬರುತ್ತವೆ. ಆ ಹಳ್ಳಿಗಳಿಗೆ ಆ ನೀರು ಹೋಗುತ್ತೆ. ತಲುಪುವ ಮಧ್ಯೆ ನೀರು ಆವಿಯಾಗುತ್ತೆ. ದನಕರುಗಳಿಗೆ, ಜನಗಳಿಗೆ ಇದೇ ನೀರು ಬಳಕೆಯೂ ಆಗುತ್ತೆ. ಇಷ್ಟೆಲ್ಲ ಆಗುವ ಕಾರಣ ಕೆಆರ್​ಎಸ್'​ನಿಂದ ಲೆಕ್ಕಾಚಾರದಂತೆ 13.6 ಟಿಎಂಸಿ ನೀರನ್ನಷ್ಟೇ ಬಿಟ್ಟರೆ, ಅದು ಬಿಳಿಗುಂಡ್ಲುವಿನ ಅಷ್ಟೇ ಲೆಕ್ಕ ಸಿಕ್ಕೋದಿಲ್ಲ. ಆ ಲೆಕ್ಕ ತಲುಪಬೇಕು ಎಂದರೆ, ಕರ್ನಾಟಕ ಈ ಎಲ್ಲವನ್ನೂ ಲೆಕ್ಕ ಹಾಕಿಕೊಂಡು ಕನಿಷ್ಠ 20 ಟಿಎಂಸಿ ನೀರು ಬಿಡಬೇಕಾಗುತ್ತೆ. ಆಗಷ್ಟೇ ಬಿಳಿಗುಂಡ್ಲುವಿನಲ್ಲಿ 13.6 ಟಿಎಂಸಿ ನೀರಿನ ಲೆಕ್ಕ ಸಿಗೋಕೆ ಸಾಧ್ಯ. ಇದರ ಮಧ್ಯೆ ಬಿಳಿಗುಂಡ್ಲುವಿಗೆ ತಲುಪಿಸೋಕೆ ಕಬಿನಿ, ಹಾರಂಗಿ, ಹೇಮಾವತಿಯಿಂದ ಕೆಆರ್​ಎಸ್'​ಗೆ ನೀರು ಹರಿಸುತ್ತೇವಲ್ಲ... ಆ ದಾರಿಯ ಮಧ್ಯೆಯೂ ಇವೇ ಕಾರಣಗಳಿಂದ ಒಂದಷ್ಟು ನೀರು ನಷ್ಟವಾಗುತ್ತೆ.

ಯಾವ್ಯಾವ ಡ್ಯಾಂನಿಂದ ಎಷ್ಟೆಷ್ಟು ನೀರು..?
ಕೆಆರ್​ಎಸ್ - 10 ಟಿಎಂಸಿ ಮಾತ್ರ (ಉಳಿದದ್ದು ಡೆಡ್ ಸ್ಟೋರೇಜ್)
ಕಬಿನಿಯಿಂದ - 4.8 ಟಿಎಂಸಿ
ಹಾರಂಗಿಯಿಂದ - 6.8 ಟಿಎಂಸಿ
ಹೇಮಾವತಿಯಿಂದ - 14 ಟಿಎಂಸಿ

ನಿಮಗೆ ಇನ್ನೂ ಒಂದು ವಿಚಾರ ಗೊತ್ತಿರಲಿ. ಇಷ್ಟೆಲ್ಲ ಆದ ಮೇಲೆ ಅಷ್ಟೂ ಡ್ಯಾಂಗಳಲ್ಲಿ ಉಳಿದುಕೊಳ್ಳೊದು ಸದ್ಯದ ಲೆಕ್ಕದ ಪ್ರಕಾರ, 15 ಟಿಎಂಸಿ ನೀರು ಮಾತ್ರ. ಇದರಲ್ಲಿ ಬೆಂಗಳೂರಿನ ಜನರಿಗೆ ಪ್ರತಿದಿನ 800 ಕ್ಯುಸೆಕ್ ನೀರು ಬೇಕು. ಮೈಸೂರಿಗೆ 120 ಕ್ಯುಸೆಕ್ ನೀರು ಬೇಕು. ಇತರೆ ಹಳ್ಳಿಗಳ ಜನರ ಕುಡಿಯುವ ನೀರಿನ ಪೂರೈಕೆಯೂ ಸೇರಿಸಿ, ಒಟ್ಟು ಪ್ರತಿದಿನ 1300 ಕ್ಯೂಸೆಕ್ ನೀರು ಬೇಕು. ಹೀಗಾಗಿಯೇ... ಕಾವೇರಿಯ ಈ ತೀರ್ಪು ಭವಿಷ್ಯದ ಆತಂಕ ಹುಟ್ಟಿಸಿರೋದು.

ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!