‘ಚಂದ್ರಗುಪ್ತನ ಕಾಲದ ಕಥೆ ಹೇಳಬೇಡಿ' 'ಮೇಧಾವಿಗಳಿಗೆ' ಈಶ್ವರಪ್ಪ ವಿನಂತಿ

Published : Jul 21, 2019, 05:53 PM ISTUpdated : Jul 21, 2019, 05:58 PM IST
‘ಚಂದ್ರಗುಪ್ತನ ಕಾಲದ ಕಥೆ ಹೇಳಬೇಡಿ' 'ಮೇಧಾವಿಗಳಿಗೆ' ಈಶ್ವರಪ್ಪ ವಿನಂತಿ

ಸಾರಾಂಶ

ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಫುಲ್ ಆಕ್ಟೀವ್ ಆಗಿದ್ದಾರೆ. ತಮ್ಮ ವ್ಯಂಗ್ಯ ಮತ್ತು ವಿಡಂಬನಾತ್ಮಕ ಟ್ವೀಟ್ ಗಳ ಮುಖೇನ ದೋಸ್ತಿ ಸರ್ಕಾರದ ನಾಯಕರ ಕಾಲೆಳೆಯುತ್ತಿದ್ದಾರೆ.

ಬೆಂಗಳೂರು[ಜು. 21] 'ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ’ 

ಹೀಗೆ ಟ್ವೀಟ್ ಮಾಡಿರುವುದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ.  ಈ ರೀತಿ ಹೇಳುವ ಮೂಲಕ ನಾಳಿನ ಅಂದರೆ ಸೋಮವಾರದ ಅಧಿವೇಶನದಲ್ಲಿ ಕಾಲಹರಣ ಮಾಡಬೇಡಿ  ಎಂದು ಕೇಳಿಕೊಂಡಿದ್ದಾರೆ.

ಫೆವಿಕಾಲ್ ಕಂಪನಿಗೆ ಆಪದ್ಭಾಂಧವ ಅಂಬಾಸಿಡರ್ ಹುಡುಕಿದ ಈಶ್ವರಪ್ಪ

ಶುಕ್ರವಾರವೂ ವಿಶ್ವಾಸಮತ ಸಾಬೀತು ಮಾಡುವ ಪ್ರಕ್ರಿಯೆ ನಡೆಯಲಿಲ್ಲ. ವಿಶ್ವಾಸಮತದ ಮೇಲಿನ ಚರ್ಚೆ ಪೂರ್ಣಗೊಳ್ಳದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಸೋಮವಾರಕ್ಕೆ ಮುಂದೂಡಿದ್ದರು.

ಶುಕ್ರವಾರ ಟ್ವೀಟ್ ಮಾಡಿದ್ದ ಕೆಎಸ್ಇ "ಫೆವಿಕಾಲ್ ಕಂಪನಿಯವರು ಬ್ರಾಂಡ್ ಅಂಬಾಸಿಡರ್ ಹುಡುಕಾಟದಲ್ಲಿ ಇದ್ದಾಗ ಆಪದ್ಭಾಂಧವರಾಗಿ ಸಿಕ್ಕಿದ್ದು ನಮ್ಮ ಮುಖ್ಯಮಂತ್ರಿಗಳು" ಎಂದು ವ್ಯಂಗ್ಯದ ಏಟು ನೀಡಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ