ಬಿಎಸ್‌ವೈ ಮೇಲೆ ಸಿಎಂ ಕುಮಾರಸ್ವಾಮಿ ‘ಶಿವರಾಮ’ ಅಸ್ತ್ರ ಪ್ರಯೋಗ

Published : Sep 20, 2018, 11:33 AM ISTUpdated : Sep 20, 2018, 11:40 AM IST
ಬಿಎಸ್‌ವೈ ಮೇಲೆ ಸಿಎಂ ಕುಮಾರಸ್ವಾಮಿ ‘ಶಿವರಾಮ’ ಅಸ್ತ್ರ ಪ್ರಯೋಗ

ಸಾರಾಂಶ

ನಿನ್ನೆ ಬಿಜೆಪಿ ಮತ್ತು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದರೆ ಇಂದು ಅದು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇದೀಗ ಈ ವಾಕ್ಸಮರ ಸಿಎಂ  ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿಎಸ್‌ ವೈ ಆಗಿದೆ.  

ಬೆಂಗಳೂರು[ಸೆ.20]  ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಿರಂಗವಾಗಿಯೇ ಬಿಎಸ್‌ ವೈಗೆ ಎಚ್ಚರಿಕೆ ನೀಡಿದ್ದು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ನಮ್ಮ ಬಳಿ ಶಿವರಾಮ ಕಾರಂತ ಬಡಾವಣೆ ಅಸ್ತ್ರ ಇದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಪದ ಬಳಕೆ ಹಿಡಿತ ಇರೋದು ಒಳ್ಳೆಯದು ಎಂಬ ಎಚ್ಚರಿಕೆ ನೀಡಿದ ಕುಮಾರಸ್ವಾಮಿ ಸರಕಾರ ನನ್ನ ಕೈಯಲ್ಲಿದೆ. ನಾಳೆ ಏನು ಮಾಡಬೇಕು ಎಂಬ ಶಕ್ತಿ ನನ್ನಲ್ಲಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಗಾಜಿನ ಮನೆಯಲ್ಲಿ ಕುಳಿತ ಬಿಜೆಪಿ ಬೇರೆಯವರ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದೆ. ನಾವು ಬೀದಿಯಲ್ಲಿದ್ದೇವೆ ನೀವು ಗಾಜಿನ ಮನೆಯಲ್ಲಿದ್ದೀರಿ.. ಅಪ್ಪ-ಮಕ್ಕಳು ಎಂದು ಲಘುವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಅಪ್ಪ ಮಕ್ಕಳು ಲೂಟಿ ಕೋರರು ಅಂತ ಹೇಳ್ತಾರೆ. ನಾವೇನು ಲೂಟಿ ಮಾಡಿದ್ದೇವೆ ಅನ್ನೋದ್ನ ಬಿಎಸ್ ವೈ ಹೇಳಲಿ ಬಿಎಸ್ ವೈ ನನಗಿಂತ ಹಿರಿಯರಿದ್ದಾರೆ, ಮಾತಿನ ಮೇಲೆ ಹಿಡಿತವಿರಲಿ ಎಂದಿದ್ದಾರೆ.

2010ರ ಶಿವರಾಮ ಕಾರಂತ ಬಡಾವಣೆ ಢಿನೋಟಿಫಿಕೇಶನ್ ಪ್ರಕರಣದ ಸತ್ಯ ಜನರಿಗೆ ಗೊತ್ತಿಲ್ಲವೆ ಎಂದು ಪ್ರಶ್ನೆ ಮಾಡಿರುವ ಸಿಎಂ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಿಎಸ್‌ ವೈ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆಯೇ? ಎಂಬುದು ಸದ್ಯಕ್ಕೆ ನಮ್ಮ ಮುಂದೆ ಇರುವ ಪ್ರಶ್ನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯರಿಂದ ₹15,000 ಕೋಟಿ ವಿಶೇಷ ಅನುದಾನ: ಅಜಯ್‌ ಧರಂಸಿಂಗ್
ಕೇಂದ್ರದ ಗಾಂಧೀಜಿ ದ್ವೇಷ ಬಯಲಾಗುತ್ತಿದೆ