
ಬೆಂಗಳೂರು[ಆ, 01] ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ವಾರವೇ ಕಳೆದಿದೆ. ಆದ್ರೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿಲ್ಲ. ಕ್ಯಾಬಿನೆಟ್ ವಿಸ್ತರಣೆಗೆ ಇನ್ನೂ ಒಂದು ವಾರ ಕಾಯಲೇಬೇಕು. ಅಷ್ಟಕ್ಕೂ ಬಿಎಸ್ವೈ ಈ ಬಾರಿ ಸಂಪುಟ ರಚನೆಯಲ್ಲಿ ಅಳೆದು ತೂಗಿ ಮಂತ್ರಿಗಿರಿ ಹಂಚಿಕೆಗೆ ನಿರ್ಧರಿಸಿದ್ದಾರೆ. ಸಂಪುಟಕ್ಕೆ ಕಳಂಕರಹಿತರನ್ನ ಸೇರಿಸಿಕೊಳ್ಳುವ ಜೊತೆಗೆ ಹಿರಿತನ ಕಿರಿತನ ನೋಡದೆ ದಕ್ಷರಿಗೆ ಸಚಿವ ಸ್ಥಾನ ನೀಡಲು ಹೊರಟಿದ್ದಾರೆ. ಸಂಪುಟ ರಚನೆಯಲ್ಲಿ ಮೋದಿ ಹಾದಿಯಲ್ಲೇ ಹೆಜ್ಜೆಹಾಕಲು ಸಜ್ಜಾದ ಬಿಎಸ್ವೈ ಸಂಪುಟ ರಚನೆಗೆ ಪಂಚ ಸೂತ್ರ ಸಿದ್ಧಪಡಿಸಿದ್ದಾರೆ.
ಸೂತ್ರ ಒಂದು.. ಬಿಎಸ್ವೈ ಸಂಪುಟ ಸೇರಬೇಕೆಂದರೆ ಆಯಾ ಇಲಾಖೆಯ ಪ್ರಗತಿ ವೇಗಕ್ಕೆ ತಕ್ಕಂತೆ ನಡೆಸಬೇಕಾದ ಸಾಮರ್ಥ್ಯ ಇರವುವಂತೆ.. ಹಗಲಿರುಳು ದುಡಿಯುವ ಅರ್ಹತೆ ಹೊಂದಿರಬೇಕು. ಸೂತ್ರ ಎರಡು.. ಈ ಬಾರಿ ಯಾವುದೇ ಕಾರಣಕ್ಕೂ ಜಾತಿ ನೊಡಿ ಮಂತ್ರಿಗಿರಿ ನೀಡಲ್ಲ. ಜನಪರ ಕಾಳಜಿಯಿದ್ದವರಿಗೆ ಮೊದಲ ಆದ್ಯತೆ. ಸೂತ್ರ ಮೂರು.. ಯಾವುದೇ ನಿರ್ದಿಷ್ಟ ಪ್ರದೇಶ ಆಧರಿಸಿ ಮಂತ್ರಿಗಿರಿ ನೀಡಲ್ಲ.. ಪಕ್ಷ, ಸಿದ್ಧಾಂತ, ಜನಪರ ನಿಲುವು ಹೊಂದಿರಬೇಕು. ಸೂತ್ರ ನಾಲ್ಕು.. ಈ ಹಿಂದೆ ಸಚಿವರಾದವರಿಗೆ ಮತ್ತೊಮ್ಮೆ ಮಂತ್ರಿಗಿರಿ ಸಿಗಲ್ಲ. ಎಲ್ಲಾ ಹಿರಿಯರಿಗೂ ಮಂತ್ರಿಗಿರಿ ಸಿಗುತ್ತೆ ಅನ್ನೋ ನಂಬಿಕೆ ಇಟ್ಟುಕೊಂಡರೆ ಅದು ತಪ್ಪು.. ಸೂತ್ರ ಐದು.. ಉತ್ತಮ ಚಾರಿತ್ರ್ಯವುಳ್ಳ.. ಅಪಾರಾಧ ಚಟುವಟಿಕೆಯಿಂದ ದೂರವಿದ್ದ ಕಳಂಕತಿ.. ಕ್ಲೀನ್ ಇಮೇಜ್ ನಾಯಕರಿಗೆ ಮಾತ್ರ ಮಂತ್ರಿಭಾಗ್ಯ ನೀಡಲು ನಿರ್ಧರಿಸಿದ್ದಾರೆ.
ಕಾರ್ಯಕರ್ತರ ಮಾತಿಗೆ ಕಟ್ಟುಬಿದ್ದು ಉಪಚುನಾವಣೆಗೆ ಗೌಡರ ಹೊಸ ನಿರ್ಧಾರ?
ಹೈಕಮಾಂಡ್ ಅಣತಿಯಂತೆ ಈ ಬಾರಿ ಕ್ಯಾಬಿನೆಟ್ ರಚನೆ ನಡೆಯಲಿದ್ದು.. ಹೀಗಾಗಿ ಬಿಎಸ್ವೈ ಆಪ್ತರು ಕೂಡ ಮೂರನೇ ವ್ಯಕ್ತಿಗಳ ಮೂಲಕ ಲಾಬಿ ಮಾಡ್ತಿದ್ದಾರೆ. ಬಿಎಸ್‌ವೈ ಕೋಟಾದಲ್ಲಿ ಒಂದೆರಡು ಮಂತ್ರಿ ಸ್ಥಾನವನ್ನು ಹೈಕಮಾಂಡ್ ನೀಡಬಹುದು ಎನ್ನಲಾಗ್ತಿದೆ..
ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಮತ್ತು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಠಕ್ಕರ್ ಕೊಡಲು ಸಿಪಿ ಯೋಗಿಶ್ವರ್‌ಗೆ ಮಂತ್ರಿ ಸ್ಥಾನ ನೀಡಲು ಬಿಎಸ್ವೈ ಒಲವು ತೋರಿದ್ದಾರೆ ಎನ್ನಲಾಗ್ತಿದೆ. ಯೋಗೀಶ್ವರ್ರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಪಟ್ಟ ಕಟ್ಟಿದ್ರೂ ಅಚ್ಚರಿಯಿಲ್ಲ. ಕರ್ನಾಟಕದಲ್ಲಿ ಕೇಸರಿ ಸರ್ಕಾರವನ್ನು ಕಳಂಕರಹಿತವಾಗಿರುವಂತೆ ನೋಡಿಸಲು ಮೋದಿ-ಶಾ ಜೋಡಿ ಮುಂದಾಗಿದೆ. ಈ ಮಧ್ಯೆ, ಸರ್ಕಾರಕ್ಕೆ ಯಾವುದೇ ತೊಂದರೆ ಬಾರದಿರಲಿ ಎಂದು ಬಿಎಸ್ ವೈ ದೇವರ ಮೊರೆ ಹೋಗಿದ್ದಾರೆ. ತೆಲಗಾಂಣ ರಾಜ್ಯದ ಭದ್ರಾಚಲಂ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಯಡಿಯೂರಪ್ಪ ವಿಶೇಷ ಪೂಜೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.