ಅನರ್ಹರಿಗೆ ಬಿಗ್ ರಿಲೀಫ್... ಚಾನ್ಸೇ ಇಲ್ಲ, ಈ ಪಾಯಿಂಟ್ಸ್ ನೋಡಿ ಗೊತ್ತಾಗತ್ತೆ!

By Web DeskFirst Published Sep 26, 2019, 6:24 PM IST
Highlights

ಸುಪ್ರೀಂ ತೀರ್ಪಿನ ಅಸಲಿ ಕರಾಮತ್ತು/ ಅನರ್ಹ ಶಾಸಕರಿಗೆ ರಿಲೀಫ್ ಇಲ್ಲವೇ ಇಲ್ಲ/ ಸಚಿವರಾಗುವ ಆಸೆಗೆ ತಣ್ಣೀರು/ ಇನ್ನೆಷ್ಟು ದಿನ ಕಾಯಬೇಕು/

ಬೆಂಗಳೂರು[ಸೆ. 26]  ಅನರ್ಹರ  ಕ್ಷೇತ್ರದಲ್ಲಿ ಘೋಷಣೆಯಾಗಿದ್ದ ಚುನಾವಣೆಗೆ ಸುಪ್ರೀಂ ಕೋರ್ಟ್ ಸದ್ಯಕ್ಕೆ ತಡೆ ನೀಡಿದೆ.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನರ್ಹ ಶಾಸಕರು ನಮಗೆ ಜಯ ಸಿಕ್ಕಿದೆ, ನ್ಯಾಯ ಸಿಕ್ಕಿದೆ ಎಂದು ಬಣ್ಣಿಸಿದ್ದಾರೆ. ಆದರೆ ಒಂದೊಂದೆ ಅಂಶಗಳನ್ನು ವಿಶ್ಲೇಷಣೆ ಮಾಡಿದರೆ ಅನರ್ಹರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ! ಹೇಗೆ ಅಂತೀರಾ?

ನಾವು ಅನರ್ಹರು ಹೌದೋ.. ಅಲ್ಲವೋ ಮೊದಲು ತೀರ್ಮಾನ ನೀಡಬೇಕು... ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬೇಕು ಎನ್ನುವುದು ಅನರ್ಹ ಶಾಸಕರ ಪ್ರಮುಖ ವಾದವಾಗಿತ್ತು. ಆದರೆ ಇದೆರಡನ್ನೂ ಮೀರಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.



ಅನರ್ಹತೆ ವಿಚಾರ ಕ್ಲೀಯರ್ ಆಗಿದ್ದರೆ ಮಾತ್ರ ಆ ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡಬಹುದಿತ್ತು.  ಆದರೆ ಚುನಾವಣೆಗಷ್ಟೆ  ಬ್ರೇಕ್ ಬಿದ್ದಿದೆ. ಅನರ್ಹತೆ ವಿಚಾರದಲ್ಲಿ  ಯಾವುದೇ ತೀರ್ಪು ಬಂದಿಲ್ಲ. ಹಾಗಾಗಿ ಚುನಾವಣೆಗೆ ಸ್ಪರ್ದಿಸುವ ಅವಕಾಶದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ದೋಸ್ತಿ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಬಂದ ಕೆಲವೇ ದಿನದಲ್ಲಿ ನಾವು ಸಚಿವರಾಗುತ್ತೇವೆ ಎಂದುಕೊಂಡಿದ್ದವರ ಆಸೆಗೂ ತಣ್ಣೀರು ಎರಚಿದಂತಾಗಿದೆ. ಸದ್ಯಕ್ಕೆ ಸಚಿವರಾಗು ಕನಸು ಕನಸಾಗಿಯೇ ಉಳಿಯಲಿದೆ. ಇನ್ನೊಂದು ಕಡೆ ಬಿಜೆಪಿ ಸರ್ಕಾರದ ಸಂಪುಟದ ಸ್ಥಾನಗಳು ಹಾಗೆ ಖಾಲಿ ಉಳಿಯುತ್ತವೋ ಅದಕ್ಕೂ ಉತ್ತರ ಇಲ್ಲ.

click me!