2 ತಿಂಗಳಲ್ಲಿಯೇ ಬಿಜೆಪಿ ಅಧಿಕಾರಕ್ಕೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ

By Web DeskFirst Published Oct 13, 2018, 8:56 AM IST
Highlights

ಇನ್ನೇನು ಎರಡು ತಿಂಗಳಲ್ಲಿಯೇ ಮೈತ್ರಿ ಸರ್ಕಾರ ಪತನವಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗ್ತಿದೆ. 

ಬೆಂಗಳೂರು, [ಅ.13]: ಇನ್ನೆರೆಡು ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಬಿಜೆಪಿ ನಾಯಕ ಭವಿಷ್ಯವಾಣಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಮೂಡಿಸುತ್ತಿದೆ.

ಇನ್ನೇನು ಎರಡು ತಿಂಗಳಲ್ಲಿಯೇ ಮೈತ್ರಿ ಸರ್ಕಾರ ಪತನವಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗ್ತಿದೆ. ರಾಜ್ಯ ಸರ್ಕಾರದ ಆಯುಷ ಎರಡು ತಿಂಗಳು ಮಾತ್ರ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹಾಗೂ ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದರು. ಇದೀಗ ಈಶ್ವರಪ್ಪ ಹಾಗೂ ಕಾರಜೋಳ ಸರದಿ.

ಮೈತ್ರಿಯಲ್ಲಿ ಅಸಮಾಧಾನ: ಉಪಚುನಾವಣೆ ಬಳಿಕ ಆಪರೇಶನ್ ಕಮಲ ಶುರು?

ಮೈತ್ರಿ ಸರ್ಕಾರದ ಪತನದ ಊಹಾಪೋಹಗಳ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದು ಸರಿ ಅನ್ನಿಸುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಆಕ್ಷೇಪ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ, ಬಿಜೆಪಿ ಮುಖಂಡರು ಸರ್ಕಾರ ಪತನ ಕುರಿತು ಭವಿಷ್ಯವಾಣಿ ಮುಂದುವರಿಸಿದ್ದಾರೆ. 

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಸ್ವತಃ ಯಡಿಯೂರಪ್ಪ ಮುಂದೆಯೇ 2 ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರೆ, ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಾಬುರಾವ್‌ ಚವ್ಹಾಣ ಇದೇ ರೀತಿ ಧ್ವನಿಸುವ ಹೇಳಿಕೆಗಳನ್ನು ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ..!

ಮೊನ್ನೆ ಅಷ್ಟೇ ಕೋಡಿ ಶ್ರೀಗಳು ಸಹ ಇದೇ ರೀತಿ ಭವಿಷ್ಯ ನುಡಿದಿದ್ದರು. ಇನ್ನು ಒಂದೆರಡು ತಿಂಗಳಲ್ಲಿ ಸರ್ಕಾರ ಪತನಗೊಳ್ಳುವುದು ಖಚಿತ ಎಂಬ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿಕೆ ನೀಡಿದ್ದರು.

ಆದರೆ, ಇದಕ್ಕೆ ಯಡಿಯೂರಪ್ಪ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಬಿಜೆಪಿ ನಾಯಕರ ಎರಡು ಭವಿಷ್ಯ ನುಡಿಯುತ್ತಿರುವುದರ ಹಿಂದೆ ಏನೋ ಗುಟ್ಟಾಗಿ ನಡೆಯುತ್ತಿದೆ ಎಂಬ ಅನುಮಾನಗಳು ಕಾಡತೊಡಗಿವೆ.
 

click me!