BSY ವಿಶ್ವಾಸ ಗೆಲ್ತಾರಾ? ಇಲ್ಲಿದೆ ಅಂಕಿ ಅಂಶಗಳ ಫುಲ್ ಡಿಟೇಲ್ಸ್

By Web DeskFirst Published Jul 28, 2019, 6:44 PM IST
Highlights

ದೋಸ್ತಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡ ನಂತರ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಅಂದರೆ ಜುಲೈ 29ಕ್ಕೆ ವಿಶ್ವಾಸ ಮತ ಕೇಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗಾದರೆ ವಿಶ್ವಾಸ ಮತ ಏನಾಗುತ್ತದೆ? 

ಬೆಂಗಳೂರು[ಜು. 28] ಯಡಿಯೂರಪ್ಪ ವಿಶ್ವಾಸ ಮತ ಸಾಬೀತು ಮಾಡುತ್ತಾರೆ ಎಂದು ಕೆಲ ಕಾಂಗ್ರೆಸ್ ನಾಯಕರೆ ಅಭಿಪ್ರಾಯ ಹೊರ ಹಾಕಿದ್ದಾರೆ.  ವಿಶ್ವಾಸಮತದ ಲೆಕ್ಕಾಚಾರಗಳು ಏನು?

ವಿಶ್ವಾಸಮತ ಕೇಳುವುದಕ್ಕಾಗಿಯೇ ಅಧಿವೇಶನ: ವಿಧಾನಸಭೆ ವಿಶೇಷ ಅಧಿವೇಶನ ಕರೆದಿರುವುದೇ ವಿಶ್ವಾಸ ಮತ ಯಾಚನೆಗೆ. ರಾಜೀನಾಮೆ ಕೊಟ್ಟಿದ್ದ ಶಾಸಕರನ್ನು ಸ್ಪೀಕರ್ ಅನರ್ಹ ಎಂದು ಘೋಷಣೆ ಮಾಡಿರುವುದರಿಂದ ಮತ್ತೆ ಮನವೊಲಿಕೆ ಮಾಡಿ ಅವರನ್ನು ಕರೆದು ತರಬಹುದಿತ್ತು ಎಂಬ ಕಾಂಗ್ರೆಸ್ ನ ಯಾವ ಲೆಕ್ಕಾಚಾರವೂ ವರ್ಕ್ ಆಗಲೂ ಸಾಧ್ಯವೇ ಇಲ್ಲ.

6 ತಿಂಗಳು ಯಾವ ತೊಂದರೆ ಇಲ್ಲ: ಒಮ್ಮೆ ಸದನದಲ್ಲಿ  ವಿಶ್ವಾಸ ಮತ ಸಾಬೀತು ಮಾಡಿದರೆ ಮುಂದಿನ 6 ತಿಂಗಳು ಸರ್ಕಾರ ಸೇಫ್ ಆಗಿ ಇರಲಿದೆ. ಬಿಎಸ್‌. ಯಡಿಯೂರಪ್ಪ ಸಹ ಆರಂಭಿಕ ವಿಜಯ ಸಾಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ,.

ಸಾಧ್ಯತೆ ಇದೆಯೇ? : ಬಿಜೆಪಿ ತನ್ನೆಲ್ಲ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.  ಬಿಜೆಪಿ ಶಾಸಕರು ಗೈರಾದರೆ ಮಾತ್ರ ಮತ್ತೆ ನಂಬರ್ ಗೇಮ್  ಪವಾಡ ಶುರುವಾಗುತ್ತದೆ. 

ಮೂವರು ಬರುತ್ತಾರೆಯೇ?  ಕುಮಾರಸ್ವಾಮಿ ರಾಜೀನಾಮೆ ವೇಳೆ ಗೈರಾಗಿದ್ದ  ಬಳ್ಳಾರಿ ನಾಗೇಂದ್ರ, ಕೊಳ್ಳೆಗಾಲ ಮಹೇಶ್ ಅಧಿವೇಶಕ್ಕೆ ಬಂದು ಕಾಂಗ್ರೆಸ್ ಪರ ನಿಲ್ಲುತ್ತಾರೆ ಎಂಬುದು ದೋಸ್ತಿಗಳ ವಿಶ್ವಾಸ.  ಅನರ್ಹ ಆಗದೇ ಉಳಿದುಕೊಂಡಿರುವ ಪಕ್ಷೇತರ ಶಾಸಕ ನಾಗೇಶ್ ಬಿಜೆಪಿ ಪರವಾಗಿ ನಿಂತುಕೊಳ್ಳಲಿದ್ದಾರೆ.

ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರಕ್ಕೆ ವಿಶ್ವನಾಥ್ ಫುಲ್ ಗರಂ!

ನಂಬರ್ ಗೇಮ್

ಕರ್ನಾಟಕ ವಿಧಾನಸಭೆ ಬಲ- 225

ಅನರ್ಹಗೊಂಡ ಶಾಸಕರು- 17

ಸದ್ಯದ ಬಲಾಬಲ  - 208

ಮ್ಯಾಜಿಕ್ ನಂಬರ್ - 105

ದೋಸ್ತಿ - 102(ಆಂಗ್ಲೋ ಇಂಡಿಯನ್ ಸೇರಿ] 

ಬಿಜೆಪಿ - 105 + ಪಕ್ಷೇತರ 1 = 106

click me!