ರಾಜ್ಯಕ್ಕೂ ತಟ್ಟಿದ ಭೀಮಾ ಕೋರೆಗಾಂವ್ ಬಿಸಿ

By Suvarna Web DeskFirst Published Jan 3, 2018, 10:15 AM IST
Highlights

ಅಹಿತಕರ ಘಟನೆ ತಡೆಯಲು ಮುಂಜಾಗೃತ ಕ್ರಮವಾಗಿ ಚಿಕ್ಕೋಡಿ ವಾಯುವ್ಯ ವಿಭಾಗದ 220ಕ್ಕೂ ಹೆಚ್ಚು ಬಸ್'ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಿಕ್ಕೋಡಿಯಿಂದ ಪುಣೆ, ಮುಂಬೈ, ಸಾಂಗ್ಲಿ, ಮೀರಜ್'ಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ.

ಚಿಕ್ಕೋಡಿ(ಜ.03): ಭೀಮಾ ಕೋರೆಗಾಂವ್ ಹಿಂಸಾಚಾರದ ಬಿಸಿ ರಾಜ್ಯಕ್ಕೂ ತಟ್ಟಿದ್ದು, ಮಹಾರಾಷ್ಟ್ರ ಬಂದ್ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್'ಗಳ ಸಂಚಾರ ಸ್ಥಗಿತಗೊಂಡಿದೆ.

ಅಹಿತಕರ ಘಟನೆ ತಡೆಯಲು ಮುಂಜಾಗೃತ ಕ್ರಮವಾಗಿ ಚಿಕ್ಕೋಡಿ ವಾಯುವ್ಯ ವಿಭಾಗದ 220ಕ್ಕೂ ಹೆಚ್ಚು ಬಸ್'ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಿಕ್ಕೋಡಿಯಿಂದ ಪುಣೆ, ಮುಂಬೈ, ಸಾಂಗ್ಲಿ, ಮೀರಜ್'ಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ.

ದಲಿತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಇಂದು ಮಹಾರಾಷ್ಟ್ರ ಬಂದ್'ಗೆ ಕರೆ ನೀಡಲಾಗಿದೆ. ಭೀಮಾ ಕೋರೆಗಾಂವ್ ವೇಳೆ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿ ಮಹಾರಾಷ್ಟ್ರದಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುತ್ತಿದೆ. ಇನ್ನೂ ಪ್ರಕರಣದ ಕುರಿತು ಸಿಐಡಿ ತನಿಖೆಯಾಗಬೇಕು ಎಂದು ಮಹಾ ಸಿಎಂ ದೇವೇಂದ್ರ ಫಡ್ನಾವೀಸ್ ಆದೇಶಿಸಿದ್ದಾರೆ.

click me!