
ಮುಂಬೈ: ಕಿರುತೆರೆಯ ಸೂಪರ್‌ಸ್ಟಾರ್, ಕಾಮಿಡಿ ವಿತ್ ಕಪಿಲ್ ಖ್ಯಾತಿಯ ವಿದೂಷಕ ಕಪಿಲ್ ಶರ್ಮಾ, ಇದೀಗ ಬೆಂಗಳೂರಿನ ಆಶ್ರಮವೊಂದನ್ನು ಸೇರಿಕೊಂಡಿದ್ದಾರೆ. ಅತಿಯಾದ ಮದ್ಯಪಾನ ವ್ಯಸನದಿಂದಾಗಿ ಪದೇ ಪದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಪಿಲ್, ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಆರ್ಯುವೇದ ಆಶ್ರಮವೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಟೀವಿ ಕಾಮಿಡಿ ಶೋಗಳಿಗೆ, ಬಾಲಿವುಡ್ ಹೀರೋಗಳಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಕಪಿಲ್, ಇದೇ ಅವಧಿಯಲ್ಲಿ ಮದ್ಯವ್ಯಸನಕ್ಕೆ ತುತ್ತಾಗಿ, ಶೋಗಳಿಂದ ಹೊರಬಿದ್ದಿದ್ದರು. ಹೀಗಾಗಿ ಕಳೆದ ವರ್ಷವೇ ಬೆಂಗಳೂರಿಗೆ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದರಾದರೂ, ಮಧ್ಯದಲ್ಲೇ ಆಶ್ರಮ ತೊರೆದು ಮುಂಬೈಗೆ ಹೋಗಿ, ಮತ್ತೆ ಸಮಸ್ಯೆಗೆ ಸಿಕ್ಕಿಬಿದ್ದಿದ್ದರು.
ಆದರೆ ಇದೀಗ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಬರೆದ ಪುಸ್ತಕವೊಂದರಿಂದ ಪ್ರಭಾವಿತರಾಗಿರುವ ಕಪಿಲ್, ಈ ಬಾರಿ ವ್ಯಸನಮುಕ್ತರಾಗಿ ಹೊರಹೊಮ್ಮುವ ಕಠಿಣ ನಿರ್ಧಾರದೊಂದಿಗೆ ಬೆಂಗಳೂರಿನ ಆಶ್ರಮಕ್ಕೆ ಆಗಮಿಸಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.