ಕನ್ನಡಿಗರಿಗೆ ರಸಗುಲ್ಲಾ, ಸಮೋಸ ರುಚಿ ತೋರಿಸಿದ್ದ ಅಟಲ್

By Web DeskFirst Published Aug 21, 2018, 7:56 PM IST
Highlights

ಪೂರ್ವ ನಿಗದಿತ ಅಲ್ಲದಿದ್ದರೂ ಕೂಡ ದೂರದ ರಾಜ್ಯದಿಂದ ಬಂದಿದ್ದ ಹುಡುಗರನ್ನು ಕೂರಿಸಿ ಸಮೋಸಾ, ರಸಗುಲ್ಲ, ಕಚೋರಿ ತಿನ್ನಿಸಿದ ಅಟಲ್ ಜಿ ಒಂದು ಗಂಟೆ ಕಾಲ ಕಾಶ್ಮೀರದ ಸ್ಥಿತಿ ಬಗ್ಗೆ ಮಾತನಾಡಿದರಂತೆ. 

ಒಮ್ಮೆ ಕರ್ನಾಟಕದ ಕೆಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಕಾಶ್ಮೀರ ಚಲೋ ಮುಗಿಸಿ ದಿಲ್ಲಿಗೆ ಬಂದಾಗ ರೈಸೀನಾ ರೋಡ್‌ನಲ್ಲಿರುವ ಅಟಲ್ ಜಿ ಮನೆಗೆ ಭೇಟಿಯಾಗಲು ಹೋದರಂತೆ. 
ಪೂರ್ವ ನಿಗದಿತ ಅಲ್ಲದಿದ್ದರೂ ಕೂಡ ದೂರದ ರಾಜ್ಯದಿಂದ ಬಂದಿದ್ದ ಹುಡುಗರನ್ನು ಕೂರಿಸಿ ಸಮೋಸಾ, ರಸಗುಲ್ಲ, ಕಚೋರಿ ತಿನ್ನಿಸಿದ ಅಟಲ್ ಜಿ ಒಂದು ಗಂಟೆ ಕಾಲ ಕಾಶ್ಮೀರದ ಸ್ಥಿತಿ ಬಗ್ಗೆ ಮಾತನಾಡಿದರಂತೆ. ನಂತರ ಕೊನೆಯಲ್ಲಿ ಕಾಶ್ಮೀರ ಕೋ ತೋ ನಿಪಟಲಿಯಾ ಸೋಚಾ ಹೋಗಾ ಅಟಲ್ ಕೋ ಭಿ ನಿಪಟಾಕೆ ಜಾಯೆಂಗೆ ಎಂದು ಹಾಸ್ಯ ಚಟಾಕಿ ಹಾರಿಸಿದರಂತೆ.

ಖೋದಾ ಪಹಾಡ್ ನಿಕಲಾ ಚೂಹಾ
ಒಮ್ಮೆ ಖ್ಯಾತ ಪತ್ರಕರ್ತ ರಜತ್ ಶರ್ಮ ಅಟಲ್ ಸರ್ಕಾರದ ಸಂಪುಟ ವಿಸ್ತರಣೆ ಕುರಿತು, ‘ಬೆಟ್ಟ ಅಗೆದು ಇಲಿ ಸಿಕ್ಕಂಗಾಯಿತು’ ಎಂದು
ಟೀವಿಯಲ್ಲಿ ಹೇಳಿದ್ದರಂತೆ. ಮರುದಿನ ಫೋನ್ ಮಾಡಿ ರಜತ್ ಶರ್ಮರಿಗೆ ಫೋನ್ ಮಾಡಿ ಮನೆಗೆ ಉಪಾಹಾರಕ್ಕೆ ಆಹ್ವಾನಿಸಿದ ಅಟಲ್ ಜಿ, ಪಂಡಿತ್ ಜಿ ಖೋದಾ ಪಹಾಡ್ ತೋ ಚೂಹಾ ತೋ ನಿಕಲಾ ಐಸಾ ತೋ ನಹೀ ಕಿ ಕುಚ್ ನಹೀ ನಿಕಲಾ ಎಂದು ಹೇಳಿ ಬಾಯಿ ತುಂಬಾ ನಕ್ಕರಂತೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

click me!