ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕನ್ನಡ ಸಂಘಟನೆಗಳಿಂದ ಹಣ ಬೇಡಿಕೆ ಆರೋಪ ?

By Suvarna Web deskFirst Published Jan 11, 2018, 10:07 PM IST
Highlights

ತಮ್ಮ ಸಂಘಟನೆಯ ಮಾನ ಹರಾಜು ಮಾಡುತ್ತಿದೆ ಎಂದು ಆರೋಪಿಸಿ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಆಂಜನಪ್ಪ ಡಿ.25ರಂದೇ ರಾಮ್'ಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ವಾಹಿನಿಯ ವಿರುದ್ಧ ದೂರು ದಾಖಲಿಸಿದ್ದಾರೆ.   

ಬೆಂಗಳೂರು(ಜ.11): ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪಗಳನ್ನು ಸ್ವತಃ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ.

ತಮ್ಮ ಕಾರ್ಯಕರ್ತರು ನಾಡು,ನುಡಿ ಸಂರಕ್ಷಣೆಗಾಗಿ ಬದ್ಧರಾಗಿದ್ದು ಬೇರೆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ತೋರಿಸಿ ಸಂಘಟನೆಗಳ ಹತ್ತಿಕ್ಕುವ ಕೆಲಸವನ್ನು ರಾಷ್ಟ್ರೀಯ ವಾಹಿನಿಗಳು ಮಾಡುತ್ತಿವೆ ಎಂದು ಟಿ.ಎ. ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ಸಂಘಟನೆಯ ಮಾನ ಹರಾಜು ಮಾಡುತ್ತಿದೆ ಎಂದು ಆರೋಪಿಸಿ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಆಂಜನಪ್ಪ ಡಿ.25ರಂದೇ ರಾಮ್'ಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ವಾಹಿನಿಯ ವಿರುದ್ಧ ದೂರು ದಾಖಲಿಸಿದ್ದಾರೆ.   

ಅಸಲಿಗೆ ನಡೆದಿದ್ದೇನು ?

ಡಿಸೆಂಬರ್ 31ರಂದು ಬೆಂಗಳೂರಿನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭದ್ರತೆಯ ದೃಷ್ಟಿಯಿಂದ ರಾಜ್ಯ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಸುದ್ದಿ ವಾಹಿನಿ 2 ಬಣದ ಕಾರ್ಯಕರ್ತರಾದ ಆಂಜನಪ್ಪ, ಪುನೀತ್ ಹಾಗೂ ಕನ್ನಡ ರಕ್ಷಣಾ ವೇದಿಕೆ ಯುವಸೇನೆ ಅಧ್ಯಕ್ಷ ಹರೀಶ್ ಎಂ ರಹಸ್ಯ ಕಾರ್ಯಚರಣೆ ನಡೆಸಿತ್ತು. ಎರಡೂ ಬಣದ ಕಾರ್ಯಕರ್ತರು  ಫೆಬ್ರವರಿ 14ರಂದು ಸನ್ನಿ ಕಾರ್ಯಕ್ರಮಕ್ಕೆ ಹಣದ ಆಮಿಷವೊಡ್ಡಿದ್ದರು ಎಂಬುದು ಸುದ್ದಿವಾಹಿನಿಯ ಆರೋಪ.

click me!