
ಬೆಂಗಳೂರು (ಮಾ. 01): ರೈಲ್ವೆಯಲ್ಲಿ ಕೊನೆಗೂ ಕನ್ನಡ ಭಾಷೆಗೆ ನ್ಯಾಯ ಸಿಗುವ ಕಾಲ ಕೂಡಿ ಬಂದಿದೆ. ಇನ್ನು ಮುಂದೆ ರೈಲ್ವೆ ಟಿಕೆಟ್‌ನಲ್ಲಿ ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡವೂ ರಾರಾಜಿಸಲಿದೆ.
ನೈಋತ್ಯ ರೈಲ್ವೆಯು ಕನ್ನಡದಲ್ಲಿ ಪ್ರಾಯೋಗಿಕವಾಗಿ ಕಾಯ್ದಿರಿಸದ ಟಿಕೆಟ್ ಮುದ್ರಿಸಲು ನಿರ್ಧರಿಸಿದ್ದು, ರೈಲ್ವೆ ಮಂಡಳಿಯ ಒಪ್ಪಿಗೆಗೆ ಕಳುಹಿಸಿದೆ. ಕಳೆದ ಹಲವು ವರ್ಷಗಳಿಂದ ರೈಲ್ವೆ ಟಿಕೆಟ್‌ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ನೀಡಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೋರಾಟಗಳು ನಡೆಯುತ್ತಿವೆ. ಇದೀಗ ಆ ಹೋರಾಟಕ್ಕೆ ಫಲ ಸಿಗುವ ಕಾಲ ಸಮೀಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.