ನೂತನ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ| ದೀಪಕ್ ಮಿಶ್ರಾ ಪದಗ್ರಹಣ

Published : Aug 28, 2017, 12:14 PM ISTUpdated : Apr 11, 2018, 01:13 PM IST
ನೂತನ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ| ದೀಪಕ್ ಮಿಶ್ರಾ ಪದಗ್ರಹಣ

ಸಾರಾಂಶ

* ಸುಪ್ರೀಂಕೋರ್ಟ್​ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ| ದೀಪಕ್ ಮಿಶ್ರಾ ಅಧಿಕಾರ * ರಾಷ್ಟ್ರಪತಿ ಭವನದಲ್ಲಿ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ * ಪ್ರಮಾಣವಚನ ಬೋದಿಸಿದ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ * ನಿನ್ನೆ ಮುಖ್ಯ ನಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ನಿವೃತ್ತಿ * ಒಡಿಶಾ ಮೂಲದ ನ್ಯಾ.ದೀಪಕ್ ಮಿಶ್ರಾರವರು 2011ರಿಂದ ಸರ್ವೋಚ್ಚ ನ್ಯಾಯಾಲಯದ ಜಡ್ಜ್ ಆಗಿದ್ದರು

ನವದೆಹಲಿ(ಆ. 28): ಸುಪ್ರೀಂಕೋರ್ಟ್‌'ನ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ರು. ಇಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್'​ನಾಥ್ ಕೋವಿಂದ್ ಅವರು ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ​ ಪ್ರಮಾಣವಚನ ಬೋಧಿಸಿದರು.

ನ್ಯಾ| ಜೆ.ಎಸ್.ಖೇಹರ್ ಅವರು ನಿನ್ನೆಯಷ್ಟೇ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಅವರ ಸ್ಥಾನಕ್ಕೆ ದೀಪಕ್ ಮಿಶ್ರಾ ಆಯ್ಕೆಯಾಗಿದ್ದಾರೆ.

ದೀಪಕ್ ಮಿಶ್ರಾರವರು ಒಡಿಶಾ ಮೂಲದವರಾಗಿದ್ದು, ಆ ರಾಜ್ಯದಿಂದ ಸುಪ್ರೀಂಕೋರ್ಟ್‌'ನ ಜಡ್ಜ್​ ಆಗಿ ಆಯ್ಕೆಯಾದ 3ನೇ ವ್ಯಕ್ತಿಯಾಗಿದ್ದಾರೆ. ಪಾಟ್ನಾ ಹಾಗೂ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. 2011ರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದರು. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಇವರ ಸೇವಾವಧಿ ಮುಂದಿನ ವರ್ಷ, ಅಂದ್ರೆ ಅಕ್ಟೋಬರ್ 2, 2018ರವರೆಗೆ ಇರಲಿದೆ.

ನೇರ, ದಿಟ್ಟ ನ್ಯಾಯಮೂರ್ತಿ:
ನ್ಯಾ| ದಿಪಕ್ ಮಿಶ್ರಾ ಈವರೆಗೆ ಹಲವು ಪ್ರಮುಖ ಪ್ರಕರಣಗಳಲ್ಲಿ ನಿಷ್ಠುರವಾಗಿ ತೀರ್ಪು ನೀಡಿ "ಜನಪರ' ಜಡ್ಜ್ ಎಂದು ಹೆಸರು ಪಡೆದಿದ್ದಾರೆ. ಒಡಿಶಾ ಮೂಲದ‌ ನ್ಯಾ| ಮಿಶ್ರಾ ನೀಡಿದ ಮಹತ್ವದ ತೀರ್ಪುಗಳು ಈ ಮುಂದಿವೆ.

ಕೊಟ್ಟ ಪ್ರಮುಖ ತೀರ್ಪುಗಳು
* ಸಿನಿಮಾ ಪ್ರದರ್ಶನಕ್ಕೆ ಮುನ್ನ ಎಲ್ಲ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಹಾಡಬೇಕು. ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು ಎಂದಿದ್ದು;
* ರಾತ್ರೋರಾತ್ರಿ ವಿಚಾರಣೆ ನಡೆಸಿ ಮುಂಬೈ ಸ್ಫೋಟದ ಅಪರಾಧಿ, ಉಗ್ರ ಯಾಕೂಬ್‌ ಮೆಮನ್‌ನ ಗಲ್ಲುಶಿಕ್ಷೆ ಎತ್ತಿಹಿಡಿದಿದ್ದು;
* ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ್ದು;
* ಮಹಿಳೆಯರಿಗೂ ಕೇರಳದ ಶಬರಿಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಲು ಅವಕಾಶ ನೀಡಬೇಕೆಂದು ಆದೇಶಿಸಿದ್ದು;
* ದೇಶಾದ್ಯಂತ ಅಶ್ಲೀಲ ಚಿತ್ರಗಳಿರುವ ವೆಬ್‌ಸೈಟುಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಸರ್ಕಾರಕ್ಕೆ ಸೂಚಿಸಿದ್ದು;

ಮುಂದಿರುವ ಸವಾಲುಗಳು:
13 ತಿಂಗಳ ಅಧಿಕಾರಾವಧಿಯಲ್ಲಿ ಮುಖ್ಯನ್ಯಾಯಮೂರ್ತಿಗಳಿಗೆ ಕೆಲವಾರು ಅಗ್ನಿಪರೀಕ್ಷೆಗಳು ಎದುರಾಗಲಿವೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸೂಕ್ಷ್ಮ ಪರಿಸ್ಥಿತಿಗೆ ಕಾರಣವಾಗಿರುವ ಕಾವೇರಿ ನೀರು ಹಂಚಿಕೆ ವಿಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಪೀಠಗಳ ಭಾಗವಾಗಲಿದ್ದಾರೆ ನ್ಯಾ| ದೀಪಕ್ ಮಿಶ್ರಾ. ನೂತನ ಸಿಜೆಐ ಅವರ ಮುಂದಿರುವ ಕೆಲ ಸವಾಲುಗಳು ಈ ಕೆಳಕಂಡಂತಿವೆ.
* ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ:
* ಕಾವೇರಿ ಪ್ರಕರಣ
* ಸೆಬಿ-ಸಹಾರಾ ಪ್ರಕರಣ
* ಬಿಸಿಸಿಐ ಬಿಕ್ಕಟ್ಟು
* ಪನಾಮಾ ಪೇಪರ್ ಸೋರಿಕೆ
* ಖಾಸಗಿ ಹಕ್ಕು ಕಾಯ್ದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್